ಐಸಿಸಿ ಟಿ20 ವಿಶ್ವಕಪ್-2022ರಿಂದ ಭಾರತ ಕ್ರಿಕೆಟ್ ತಂಡ ಹೊರಬಿದ್ದಿದೆ. ಗುರುವಾರ ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮತ್ತೊಮ್ಮೆ ಐಸಿಸಿ ಟ್ರೋಫಿ ಎತ್ತುವ ಅವಕಾಶವನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ನಾಕೌಟ್‌ನಲ್ಲಿ ಸೋತು ಭಾರತ ಪ್ರಶಸ್ತಿ ವಂಚಿತವಾಗಿರುವುದು ಇದೇ ಮೊದಲಲ್ಲ. ಟೀಂ ಇಂಡಿಯಾ ತನ್ನ ಕೊನೆಯ ಐಸಿಸಿ ಟ್ರೋಫಿಯನ್ನು 2013 ರಲ್ಲಿ ಎತ್ತಿಹಿಡಿದಿತ್ತು. ಅಂದಿನಿಂದ, ಐಸಿಸಿ ಟೂರ್ನಮೆಂಟ್‌ಗಳ ನಾಕೌಟ್‌ನಲ್ಲಿ ಟೀಮ್ ಇಂಡಿಯಾ ಎಷ್ಟು ಬಾರಿ ವಿಫಲವಾಗಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.