ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ

ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ

ಮಂಜುನಾಥ ಕೆಬಿ
| Updated By: Vimal Kumar

Updated on:Jan 04, 2024 | 2:46 PM

wild elephants fight: ಕಾಡಾನೆಗಳ ಕಾಳಗದಲ್ಲಿ ಗಾಯಗೊಂಡ ಕಾಡಾನೆ ತೀವ್ರವಾಗಿ ನರಳಾಡುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಗ್ಗೋವೆಯಲ್ಲಿ ಭೀಮ ಹೆಸರಿನ ಕಾಡಾನೆ ಈ ನೋವು ಅನುಭವಿಸುತ್ತಿದೆ. ಇತರೆ ಕಾಡಾನೆಗಳು ದಂತಗಳಿಂದ ತಿವಿದು ಭೀಮಾ ಆನೆಯನ್ನು ಗಾಯಗೊಳಿಸಿದೆ. ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿದ್ದು, ಭೀಮಾ ತುಂಬಾ ನೋವು ಅನುಭವಿಸುತ್ತಿದೆ.

ಹಾಸನ: ಕಾಡಾನೆಗಳ ಕಾಳಗದಲ್ಲಿ (wild elephants) ಗಾಯಗೊಂಡ ಕಾಡಾನೆ ತೀವ್ರವಾಗಿ ನರಳಾಡುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ (Sakleshpur, hassan) ಹೆಗ್ಗೋವೆಯಲ್ಲಿ ಭೀಮ ಹೆಸರಿನ ಕಾಡಾನೆ ಈ ನೋವು ಅನುಭವಿಸುತ್ತಿದೆ. ಇತರೆ ಕಾಡಾನೆಗಳು ದಂತಗಳಿಂದ ತಿವಿದು ಭೀಮಾ ಆನೆಯನ್ನು ಗಾಯಗೊಳಿಸಿದೆ. ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿದ್ದು (injury), ಭೀಮಾ ತುಂಬಾ ನೋವು ಅನುಭವಿಸುತ್ತಿದೆ. ಭೀಮ (elephant Bhima) ನಿನ್ನೆ ಗುರುವಾರ, ಪುಟ್ಟ ಕೆರೆಯ ನೀರಿನಲ್ಲಿ ಇಡೀ ದಿನ ನಿಂತು ನರಳಾಡುತ್ತಿತ್ತು. ಅಹಾರವೇನೂ ತಿನ್ನದೆ ನರಳಾಡುತ್ತಿದ್ದ ಕಾಡಾನೆಗೆ ಬೈನೆ ಜನರು ಸೊಪ್ಪು ಹಾಕಿ, ಶುಶ್ರೂಷಣೆ ಮಾಡತೊಡಗಿದರು. ನಾಲ್ಕು ದಿನಗಳಿಂದ ಕಾಡಾನೆ ನರಳಾಡುತ್ತಿದ್ದರೂ ಚಿಕಿತ್ಸೆ ನೀಡಲು ಮುತುವರ್ಜಿ ವಹಿಸಲು ಅರಣ್ಯ ಇಲಾಖೆ ಮುಂದಾಗಿಲ್ಲ. ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯದ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಭೀಮನನ್ನು ಸೆರೆ ಹಿಡಿದು, ಸೂಕ್ತ ಚಿಕಿತ್ಸೆ ನೀಡಲು ಸ್ಥಳೀಯರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 25, 2023 11:30 AM