ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು

ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು

TV9 Digital Desk
| Updated By: Kiran Hanumant Madar

Updated on: Aug 24, 2023 | 7:50 PM

‘ಚಂದ್ರನ ಮೇಲೆ ಲ್ಯಾಂಡ್ ಆದ ಬೇರೆ ಬೇರೆ ದೇಶಗಳು, ಅವರಿಗೆ ಬೇಕಾದ ಹೆಸರು ನೀಡಿವೆ. ಈ ಬಾರಿಯ ಚಂದ್ರಯಾನ - 3 ಲ್ಯಾಂಡಿಂಗ್ ಸ್ಥಳಕ್ಕೆ ನಾವು ಬೆಂಗಳೂರು ಹೆಸರು ಇಡುವ ಬಗ್ಗೆ ಚರ್ಚೆ ಮಾಡುತ್ತೀವಿ. ಈ ಪ್ರಸ್ತಾಪವನ್ನು ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ ಎಂದು ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ ಎನ್ ರಾಮಕೃಷ್ಣ ಅವರು ಹೇಳಿದರು.

ಬೆಂಗಳೂರು, ಆ.24: ನಿನ್ನೆ(ಆ.23) ಯಶಸ್ವಿಯಾಗಿ ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆಗಿದೆ. ಇದರ ಬೆನ್ನಲ್ಲೇ ಇದೀಗ ಚಂದ್ರನ ಮೇಲೆ ಬೆಂಗಳೂರು(Bengaluru) ಹೆಸರು ದಾಖಲು ಮಾಡುವ ಮಾತು ಕೇಳಿ ಬರುತ್ತಿದೆ. ಈ ಕುರಿತು ಮಾತನಾಡಿದ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ ಎನ್ ರಾಮಕೃಷ್ಣ ಅವರು ‘ಚಂದ್ರನ ಮೇಲೆ ಯಾವ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ. ಚಂದ್ರನ ಮೇಲೆ ಲ್ಯಾಂಡ್ ಆದ ಬೇರೆ ಬೇರೆ ದೇಶಗಳು, ಅವರಿಗೆ ಬೇಕಾದ ಹೆಸರು ನೀಡಿವೆ. ಈ ಬಾರಿಯ ಚಂದ್ರಯಾನ – 3(Chandrayan-3) ಲ್ಯಾಂಡಿಂಗ್ ಸ್ಥಳಕ್ಕೆ ನಾವು ಬೆಂಗಳೂರು ಹೆಸರು ಇಡುವ ಬಗ್ಗೆ ಚರ್ಚೆ ಮಾಡುತ್ತೀವಿ. ಈ ಪ್ರಸ್ತಾಪವನ್ನು ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ