ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭಕ್ತರಿಗೆ ದೇವಿ ದರ್ಶನದ ಅವಕಾಶ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭಕ್ತರಿಗೆ ದೇವಿ ದರ್ಶನದ ಅವಕಾಶ

Arun Kumar Belly
| Updated By: Vimal Kumar

Updated on:Sep 19, 2023 | 1:47 PM

ದೇವಸ್ಥಾನದ ಅರ್ಚಕರು ಮಹಾಲಕ್ಷ್ಮಿ ದೇವಿಗೆ ಹಾಲು, ತುಪ್ಪ, ಮೊಸರು, ಎಳೆನೀರು ಮತ್ತು ನೀರಿನಿಂದ ಪಂಚಾಭಿಷೇಕ ಮಾಡಿದ್ದ್ದಾರೆ. ಪಂಚಾಭಿಷೇಕದ ನಂತರವೇ ಭಕ್ರರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಸುಕಿನಲ್ಲೇ ಜನ ಬಂದು ದೇವಿಯ ದರ್ಶನ ಪಡೆಯಲಾರಂಭಿಸಿದ್ದರು. ಪೋಷಕರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಿದ್ದಾರೆ.

ಬೆಂಗಳೂರು: ರಾಜ್ಯದಾದ್ಯಂತ ಇಂದು ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Habba) ಸಂಭ್ರಮ ಸಡಗರಗಳಿಂದ ಆಚರಿಸಲಾಗುತ್ತೆ. ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜಾದಿನವಾಗಿದ್ದರೂ, ಗೃಹಿಣುಯರು (homemakers) ಬೆಳಗ್ಗೆ ಬೇಗ ಎದ್ದು ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ (Mahalakshmi layout) ವರಮಹಾಲಕ್ಷ್ಮಿ ದೇವಸ್ಥಾನದಲ್ಲಿ (Varamahalakshmi Temple) ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ಶುರುವಾಗಿವೆ. ಈ ದೇವಸ್ಥಾನ ಬಹಳ ಪ್ರಸಿದ್ಧಿ ಹೊಂದಿರುವ ದೇವಸ್ಥಾನವಾಗಿದೆ, ಅಸಲಿಗೆ ದೇವಸ್ಥಾನದಿಂದಾಗೇ ಈ ಪ್ರದೇಶಕ್ಕೆ ಮಹಾಲಕ್ಷ್ಮಿ ಲೇಔಟ್ ಹೆಸರಿಡಲಾಗಿದೆ. ದೇವಸ್ಥಾನದ ಅರ್ಚಕರು ಮಹಾಲಕ್ಷ್ಮಿ ದೇವಿಗೆ ಹಾಲು, ತುಪ್ಪ, ಮೊಸರು, ಎಳೆನೀರು ಮತ್ತು ನೀರಿನಿಂದ ಪಂಚಾಭಿಷೇಕ ಮಾಡಿದ್ದ್ದಾರೆ. ಪಂಚಾಭಿಷೇಕದ ನಂತರವೇ ಭಕ್ರರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಸುಕಿನಲ್ಲೇ ಜನ ಬಂದು ದೇವಿಯ ದರ್ಶನ ಪಡೆಯಲಾರಂಭಿಸಿದ್ದರು. ಪೋಷಕರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 25, 2023 11:21 AM