Chandrayaan 3: ವಿಕ್ರಮ್, ಪ್ರಗ್ಯಾನ್ ಮರಳಿ ಭೂಮಿಗೆ? 14 ದಿನಗಳ ನಂತರ ಏನಾಗುತ್ತದೆ ಈ ಮಿಷನ್​​?

ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ವಿಕ್ರಮ್​​ ಲ್ಯಾಂಡರ್‌ನ ಒಳಭಾಗದಿಂದ ಪ್ರಗ್ಯಾನ್ ರೋವರ್‌ ಹೊರಗೆ ಬಂದು ಚಲಿಸಲು ಪ್ರಾರಂಭಿಸಿದೆ. ಇನ್ನು ಲ್ಯಾಂಡರ್‌ ಹಾಗೂ ರೋವರ್‌ 14ದಿನಗಳ ಕಾಲ ಚಂದ್ರ ಬಳಿ ಏನೇನು ಮಾಡಲಿದೆ? ನಂತರ ಇವುಗಳು ಏನಾಗುತ್ತದೆ? ಮತ್ತೆ ಇದು ಮರಳಿ ಭೂಮಿಗೆ ಬರಲಿದಿಯೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Chandrayaan 3: ವಿಕ್ರಮ್, ಪ್ರಗ್ಯಾನ್ ಮರಳಿ ಭೂಮಿಗೆ? 14 ದಿನಗಳ ನಂತರ ಏನಾಗುತ್ತದೆ ಈ ಮಿಷನ್​​?
ಸಾಂದರ್ಭಿಕ ಚಿತ್ರ
Follow us
| Updated By: Vimal Kumar

Updated on: Jan 22, 2024 | 2:34 PM

ಚಂದ್ರಯಾನ -3 (chandrayaan 3) ಆಗಸ್ಟ್​​ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು ಮತ್ತು ಇದೀಗ ವಿಕ್ರಮ್​​ ಲ್ಯಾಂಡರ್‌ನ ಒಳಭಾಗದಿಂದ ಪ್ರಗ್ಯಾನ್ ರೋವರ್‌ ಹೊರಗೆ ಬಂದು ಚಲಿಸಲು ಪ್ರಾರಂಭಿಸಿದೆ. ಇನ್ನು ಲ್ಯಾಂಡರ್‌ ಹಾಗೂ ರೋವರ್‌ 14ದಿನಗಳ ಕಾಲ ಚಂದ್ರ ಬಳಿ ಏನೇನು ಮಾಡಲಿದೆ? ನಂತರ ಇವುಗಳು ಏನಾಗುತ್ತದೆ? ಮತ್ತೆ ಇದು ಮರಳಿ ಭೂಮಿಗೆ ಬರಲಿದಿಯೇ ಎಂಬ ಪ್ರಶ್ನೆಗಳಿಗೆ ಇಸ್ರೋ ಉತ್ತರ ನೀಡಿದೆ. ಪ್ರಗ್ಯಾನ್ ರೋವರ್‌ ಒಂದಿಷ್ಟು ಕಾಲ ಚಂದ್ರನ ಮೇಲೆ ಕೆಲವೊಂದು ಕಾರ್ಯಚರಣೆಗಳನ್ನು ಮಾಡುತ್ತದೆ. 14 ದಿನಗಳ ನಡೆಸುವ ಈ ಕಾರ್ಯಚರಣೆ ಭೂಮಿಯ ಒಂದು ದಿನಕ್ಕೆ ಸಮವಾಗಿರುತ್ತದೆ. ಪ್ರಗ್ಯಾನ್ ರೋವರ್‌ ಕಾರ್ಯಚರಣೆ ಮಾಡಿ ಡೇಟಾವನ್ನು ವಿಕ್ರಮ್​​ ಲ್ಯಾಂಡರ್‌ ಕಳುಹಿಸುತ್ತದೆ. ಬಳಿಕ ವಿಕ್ರಮ್​​ ಲ್ಯಾಂಡರ್‌ ಆ ಎಲ್ಲ ಡೇಟಾಗಳನ್ನು ಭೂಮಿಗೆ ಕಳುಹಿಸುತ್ತದೆ.

ಇನ್ನು ಚಂದ್ರನಲ್ಲೂ ಕತ್ತಲು ಮತ್ತು ಚಳಿ, ಬಿಸಿಲು ಇರುತ್ತದೆ. ಆದರೆ ಈ ವಿಕ್ರಮ್ ಮತ್ತು ಪ್ರಗ್ಯಾನ್ ಬಿಸಿಲಿನಲ್ಲಿ ಮಾತ್ರ ಕಾರ್ಯಚರಣೆ ಮಾಡುತ್ತದೆ. ಇದು ಬಿಸಿಲಿನಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯ ಏಕೆಂದರೆ ಅವುಗಳ ಸೆಲ್‌ಗಳು ಸೂರ್ಯನ ಬಿಸಿಲು- ಶಾಖಕ್ಕೆ ರಿಚಾರ್ಜ್‌ ಆಗುತ್ತದೆ. 14 ದಿನಗಳ ನಂತರ ಇವುಗಳು ನಿಷ್ಕ್ರಿಯವಾಗುತ್ತವೆ. ಹೀಗಾಗಿ ಇಸ್ರೋ 14 ದಿನಗಳ ಕಾಲ ಕಾರ್ಯಚರಣೆ ಮಾಡುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ.

ಇನ್ನು 14 ದಿನಗಳ ನಂತರ ಒಂದು ವೇಳೆ ಚಂದ್ರನ ಮೇಲೆ ಸೂರ್ಯನ ಕಿರಣಗಳು ಅಥವಾ ಬೆಳಕು ಕಂಡರೇ ಮತ್ತೆ ಇವುಗಳು ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಚಂದ್ರಯಾನಕ್ಕೆ ಒಂದು ಪ್ಲೀಸ್​​ ಪಾಯಿಂಟ್ ಎಂದು ಹೇಳಬಹುದು.

ಇದನ್ನೂ ಓದಿ
Image
ಫೇಸ್​ಬುಕ್​ನಲ್ಲಿ ಮೋಸ, ಇಂಜಿನಿಯರಿಂಗ್​​​​ ವಿದ್ಯಾರ್ಥಿ ಬಲಿ, ಪರದೇಸಿ ಗೆಳೆ
Image
ಕಲಬುರಗಿ: ಹೆತ್ತವರು ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಸರಿಯಾಗಿ ಓದು ಎಂದಿದ್ದಕ
Image
ಕಂಗನಾ ರಣಾವತ್​ಗೆ ಒಲಿಯದ ರಾಷ್ಟ್ರ ಪ್ರಶಸ್ತಿ; ನಟಿಯ ಪ್ರತಿಕ್ರಿಯೆ ಏನು?
Image
ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದ ಬೆನ್ನಲ್ಲೇ ಮಹೇಶ್ ಬಾಬು ಹಳೆಯ ಟ್ವೀ

ವಿಕ್ರಮ್​​ ಮತ್ತು ಪ್ರಗ್ಯಾನ್ ರೋವರ್​​ ಮತ್ತೆ ಮರಳಿ ಭೂಮಿಗೆ?

ವಿಕ್ರಮ್​​ ಮತ್ತು ಪ್ರಗ್ಯಾನ್ ರೋವರ್​​ ಮತ್ತೆ ಮರಳಿ ಭೂಮಿಗೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದ ವಿಜ್ಞಾನಿಗಳು, ಇವುಗಳನ್ನು ಮತ್ತೆ ಭೂಮಿಗೆ ತರುವ ಚಿಂತನೆ ಇಲ್ಲ. ಇದು ಎಷ್ಟು ದಿನ ಚಂದ್ರನಲ್ಲಿ ಕೆಲಸ ಮಾಡುತ್ತದೆ, ಅಷ್ಟು ದಿನ ಕಾರ್ಯಚರಣೆ ಮುಂದುವರಿಸಲಿದೆ. ವಿಕ್ರಮ್​​ ಮತ್ತು ಪ್ರಗ್ಯಾನ್ ರೋವರ್ ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಿತಿ ಬಂದಾಗ, ಅದನ್ನು ಮರಳಿ ಭೂಮಿಗೆ ತರುವುದು ವ್ಯರ್ಥ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೋಮನಾಥ್ ಅವರೇ ಚಂದ್ರನ ಜತೆ ನಿಮ್ಮ ಹೆಸರೂ ಸೇರಿಕೊಂಡಿದೆ, ಜತೆಗೆ ಭಾರತೀಯರದ್ದೂ; ಪ್ರಧಾನಿ ಮೋದಿ ಅಭಿನಂದನೆ

ಚಂದ್ರಯಾನದ ಒಟ್ಟು ತೂಕ?

ಚಂದ್ರಯಾನದ ಒಟ್ಟು ತೂಕ 3,900 ಕೆ.ಜಿ, ಪ್ರೊಪಲ್ಷನ್ ಮಾಡ್ಯೂಲ್ 2,148 ಕೆಜಿ, ಲ್ಯಾಂಡರ್ ಮಾಡ್ಯೂಲ್ 1,752 ಕೆಜಿ ಹಾಗೂ ರೋವರ್ 26 ಕೆಜಿ ತೂಕವನ್ನು ಹೊಂದಿದೆ. ಇನ್ನು ಚಂದ್ರಯಾನ-3 ಲ್ಯಾಂಡ್​​ ಆಗಿರುವ ಪ್ರದೇಶದ ಫೋಟೋಗಳನ್ನು ಇಸ್ರೋ ಈಗಾಗಲೇ ಹಂಚಿಕೊಂಡಿದೆ.

ರೋವರ್ ಪ್ರಗ್ಯಾನ್ ಈಗ ಏನು ಮಾಡುತ್ತಾನೆ?

ಪ್ರಗ್ಯಾನ್ ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ಪರಿಶೀಲಿಸುವುದರ ಜತೆಗೆ ಚಂದ್ರನಲ್ಲಿರುವ ಮಣ್ಣು ಮತ್ತು ಬಂಡೆಗಳನ್ನು ಪರೀಕ್ಷಿಸುತ್ತಾರೆ. ವಾತಾವರಣ ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆ, ಧ್ರುವ ಪ್ರದೇಶದ ಸಮೀಪವಿರುವ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳನ್ನು ಅಳೆಯುತ್ತದೆ. ಇನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಯಾವುದೇ ದೇಶವು ಎಂದಿಗೂ ಇಂತಹ ಸಾಹಸ ಮಾಡಿರಲಿಲ್ಲ, ಮುಂದಕ್ಕೂ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Fri, 25 August 23

ತಾಜಾ ಸುದ್ದಿ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ