ಇಂದು ಟೈಬ್ರೇಕರ್ ಪಂದ್ಯ: ಪ್ರಜ್ಞಾನಂದ ಮೇಲೆ ಎಲ್ಲರ ಕಣ್ಣು
ಚೆಸ್ ವಿಶ್ವಕಪ್ ಫೈನಲ್ ಅಝರ್'ಬೈಜಾನ್'ನಲ್ಲಿ ನಡೆಯುತ್ತಿದೆ
ಆರ್. ಪ್ರಜ್ಞಾನಂದ-ಮ್ಯಾಗ್ನಸ್ ಕಾರ್ಲ್ಸೆನ್ ನಡುವಣ ಮೊದಲ ಎರಡು ಗೇಮ್ ಡ್ರಾ ಆಗಿತ್ತು
ಇಂದು ನಡೆಯಲಿರುವ ಟೈಬ್ರೇಕರ್ ಪಂದ್ಯ ಮೂಲಕ ಫಲಿತಾಂಶ ನಿರ್ಧರವಾಗಲಿದೆ
ಬುಧವಾರ ನಡೆದ 2ನೇ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿತ್ತು
ಟೈಬ್ರೇಕರ್'ನಲ್ಲಿ 25 ನಿಮಿಷಗಳ ನಿಯಂತ್ರಣದೊಂದಿಗೆ 2 ಪಂದ್ಯವನ್ನು ಆಡಲಾಗುತ್ತದೆ
ಇಲ್ಲೂ ಡ್ರಾ ಆದರೆ 10 ನಿಮಿಷಗಳ ಎರಡು ರ್ಯಾಪಿಡ್ ಪಂದ್ಯಗಳನ್ನು ಆಡಲಿದ್ದಾರೆ
ರ್ಯಾಪಿಡ್ ಗೇಮ್ ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್ನಲ್ಲಿ ಒಂದೇ ಬ್ಲಿಟ್ಝ್ ಗೇಮ್ ಆಡಲಾಗುತ್ತದೆ
ಹೀಗಾಗಿ ಇಂದಿನ ಪಂದ್ಯ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ
ಇನ್ನಷ್ಟು ಓದಿ