ಅಫ್ಘಾನಿಸ್ತಾನ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾರು ನಿರ್ಮಿಸದ ದಾಖಲೆ ಎಂಬುದು ವಿಶೇಷ.
ಈ ಪಂದ್ಯದಲ್ಲಿ 53 ರನ್ಗಳನ್ನು ಬಾರಿಸುವ ಮೂಲಕ ಬಾಬರ್ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಹಾಶಿಮ್ ಅವರು ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ 17 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 4946 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ 100 ಏಕದಿನ ಇನಿಂಗ್ಸ್ಗಳ ಮೂಲಕ ಬಾಬರ್ ಆಝಂ 5142 ರನ್ ಕಲೆಹಾಕಿದ್ದಾರೆ. ಈ ಮೂಲಕ 100 ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಬಾರಿಸಿದ ಹಾಶಿಮ್ ಆಮ್ಲ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಅಷ್ಟೇ ಅಲ್ಲದೆ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆಯನ್ನು ಕೂಡ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 17 ಶತಕ ಬಾರಿಸಿದ್ದ ಆಮ್ಲ ಹೆಸರಿನಲ್ಲಿತ್ತು. ಇದೀಗ ಬಾಬರ್ ಆಝಂ 18 ಶತಕಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ಮೊದಲ 100 ಇನಿಂಗ್ಸ್ಗಳಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಬಾಬರ್ ಆಝಂ ಪಾತ್ರರಾಗಿದ್ದಾರೆ.
ಟೀಮ್ ಇಂಡಿಯಾ ಪರ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ ನೂರು ಇನಿಂಗ್ಸ್ಗಳಲ್ಲಿ 13 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 4343 ರನ್ ಕಲೆಹಾಕಿದ್ದರು.
ಇನ್ನು ಭಾರತೀಯರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಮೊದಲ ನೂರು ಏಕದಿನ ಇನಿಂಗ್ಸ್ಗಳಲ್ಲಿ 13 ಶತಕ ಹಾಗೂ 23 ಅರ್ಧಶತಕಗಳೊಂದಿಗೆ 4230 ರನ್ ಕಲೆಹಾಕಿದ್ದಾರೆ.
ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಬಾಬರ್ ಆಝಂ ಮೊದಲ 100 ಏಕದಿನ ಇನಿಂಗ್ಸ್ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.
Published On - 10:16 pm, Thu, 24 August 23