ನೀವು ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ್ ಮಾಡ್ತೀರಾ?: ಹಾಗಿದ್ರೆ ಒಮ್ಮೆ ಇಲ್ಲಿ ಗಮನಿಸಿ

Tech Tips in Kannada: ಪವರ್ ಬ್ಯಾಂಕ್‌ ಮೂಲಕ ಸ್ಮಾರ್ಟ್​ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಆದರೆ, ಒಂದೇ ಒಂದು ಷರತ್ತು ಎಂದರೆ ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು.

Vinay Bhat
|

Updated on: Aug 16, 2023 | 6:55 AM

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಎಂಬುದು ಪ್ರಮುಖ ಭಾಗವಾಗಿದೆ. ಬ್ಯಾಟರಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲ ಎಂದಾದರೆ ಸ್ಮಾರ್ಟ್​ಫೋನ್ ಇದ್ದರೂ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 5000 ರಿಂದ 6000mAh ಬ್ಯಾಟರಿಯೊಂದಿಗೆ ಬರುತ್ತಿವೆ.

1 / 8
ದೊಡ್ಡ ಮಟ್ಟದ ಬ್ಯಾಟರಿ ಇದ್ದರೂ ನಿರಂತರವಾಗಿ ಗೇಮಿಂಗ್ ಆಡುತ್ತಿದ್ದರೆ ಅಥವಾ ವಿಡಿಯೋ, ಹಾಡುಗಳನ್ನು ಕೇಳುತ್ತುದ್ದರೆ, ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಹೀಗಾಗಿ ಬ್ಯಾಟರಿ ಬೇಗ ಖಾಲಿ ಆಗುತ್ತದೆ ಎಂದು ಕೆಲವರು ಬ್ಯಾಟರಿ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಸುತ್ತಾರೆ.

2 / 8
ಪವರ್ ಬ್ಯಾಂಕ್ ಬಗ್ಗೆ ಅನೇಕರಿಗೆ ಇರುವ ಪ್ರಶ್ನೆಯೆಂದರೆ, ಇದನ್ನು ಬಳಸುವುದರಿಂದ ಬ್ಯಾಟರಿಗೆ ಹಾನಿಯಾಗುತ್ತದೆಯೇ?. ದಿನಕ್ಕೆ ಒಂದು ಅಥವಾ ಎರಡು ಬಾರಿ ಪವರ್​ ಬ್ಯಾಂಕ್​ನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಅದು ಫೋನ್ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದು. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

3 / 8
ಪವರ್ ಬ್ಯಾಂಕ್‌ ಮೂಲಕ ಸ್ಮಾರ್ಟ್​ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಇದರಿಂದ ಯಾವುದೇ ತೊಂದರೆ ಇಲ್ಲ. ಫೋನ್ ಮತ್ತು ಬ್ಯಾಟರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಒಂದೇ ಒಂದು ಷರತ್ತು ಎಂದರೆ ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು.

4 / 8
ಹೆಚ್ಚಿನವರು ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಸಿಗುತ್ತದೆ ಎಂದು ಅದನ್ನು ಖರೀದಿಸಿ ಮೊಬೈಲ್ ಚಾರ್ಜ್ ಮಾಡುತ್ತಾರೆ. ಆದರೆ, ಅಗ್ಗದ ಪವರ್ ಬ್ಯಾಂಕ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಓವರ್‌ಚಾರ್ಜ್ ಮಾಡಿದರೆ, ಅವು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಮೊಬೈಲ್‌ಗೆ ಹಾನಿ ಆಗುತ್ತದೆ.

5 / 8
ದುಬಾರಿ ಅಥವಾ ಉತ್ತಮವಾದ ಪವರ್ ಬ್ಯಾಂಕ್‌ಗಳು ಕಟ್ಆಫ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತವಾದ ಪವರ್ ಬ್ಯಾಂಕ್ ಆಗಿದ್ದು, ಸ್ಮಾರ್ಟ್​ಫೋನ್ ಬ್ಯಾಟರಿ ಕೂಡ ಬಾಳಿಕೆ ಬರುತ್ತದೆ.

6 / 8
ನಿಮ್ಮ ಬಜೆಟ್ ಎಷ್ಟಿದೆ ಎಂಬುದರ ಮೇಲೆ ಪವರ್ ಬ್ಯಾಂಕ್ ಖರೀದಿಸಲು ಮುಂದಾಗಿ. ನಿಮ್ಮ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಪವರ್ ಬ್ಯಾಂಕ್ ಅಗತ್ಯವಿದ್ದರೆ, ನೀವು ಅದಕ್ಕೆ ತಕ್ಕಂತ ಪವರ್ ಬ್ಯಾಂಕ್ ಅನ್ನು ಖರೀದಿಸಬೇಕು.

7 / 8
ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮಾತ್ರ ಚಾರ್ಜ್ ಮಾಡಲು ಬಯಸಿದರೆ, ಈ ರೀತಿಯ ಪವರ್ ಬ್ಯಾಂಕ್ ಅನ್ನು ಖರೀದಿಸಿ. ಇತ್ತೀಚಿನ ದಿನಗಳಲ್ಲಿ ಎರಡೂ ರೀತಿಯ ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ವಿವಿಧ ವೋಲ್ಟೇಜ್‌ಗಳಲ್ಲಿ ಲಭ್ಯವಿದೆ. 5v/3a, 9v/3a, 10v/5a ಮತ್ತು 12v/3a ಪವರ್ ಔಟ್‌ಪುಟ್ ನೀಡುವ ಪವರ್ ಬ್ಯಾಂಕ್ 2 ರಿಂದ 3 ಸಾವಿರ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿದೆ.

8 / 8
Follow us
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ

ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್

ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ

ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ

'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ

‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ

ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ

ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ

ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು