ಅಕ್ಷಯ್ ಕುಮಾರ್ ಪಲ್ಲಮಜಲು, ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕ್ಷೇತ್ರದ ಆಸಕ್ತಿ
ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್‌ನ ಒಳಭಾಗದಿಂದ ಪ್ರಗ್ಯಾನ್ ರೋವರ್ ಹೊರಗೆ ಬಂದು ಚಲಿಸಲು ಪ್ರಾರಂಭಿಸಿದೆ. ಇನ್ನು ಲ್ಯಾಂಡರ್ ಹಾಗೂ ರೋವರ್ 14ದಿನಗಳ ಕಾಲ ಚಂದ್ರ ಬಳಿ ಏನೇನು ಮಾಡಲಿದೆ? ನಂತರ ಇವುಗಳು ಏನಾಗುತ್ತದೆ? ಮತ್ತೆ ಇದು ಮರಳಿ ಭೂಮಿಗೆ ಬರಲಿದಿಯೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್ ಹಾವಳಿಯನ್ನು ತಡೆಯಲು ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜತೆಗೆ ಮಾತನಾಡಿದ್ದಾರೆ.
ಬಸ್ ಕಂಡಕ್ಟರ್ ಪರಿಚಯದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಉತ್ತರ ದೆಹಲಿಯ ತಿಮಾರ್‌ಪುರ ಪ್ರದೇಶದಲ್ಲಿರುವ ದೆಹಲಿ ಸಾರಿಗೆ ನಿಗಮದಲ್ಲಿ(ಡಿಟಿಸಿ) ನಡೆದಿದೆ. ಇದೀಗ ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಂದ್ರಯಾನ ಯಶಸ್ವಿ ಆಗುವ ಮುನ್ನ ಕಾರ್ಯಕ್ರಮವೊಂದರಲ್ಲಿ ಚಂದ್ರಯಾನದ ಬಗ್ಗೆ ಗೊಂದಲದ ಮಾತುಗಳನ್ನು ಹಾಡಿದ್ದಾರೆ. ಗಗನಯಾತ್ರಿ ರಾಕೇಶ್ ಶರ್ಮಾ ಬದಲು ಬಾಲಿವುಡ್ ನಟ-ಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಎಂದು ಹೇಳಿದ್ದಾರೆ.
ಟ್ರಕ್ವೊಂದು ಸ್ಕಿಡ್ ಆಗಿ ಕಮರಿಗೆ ಬಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ದುಡು ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಿಂದ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆಫ್ರಿಕಾದ ಉಪಾಧ್ಯಕ್ಷರನ್ನು ಭೇಟಿ ಮಾಡಲು ಅತಿಥಿ ಗೃಹಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಜತೆಗೆ ಬಂದಿದ್ದ ಸಹಾಯಕರೊಬ್ಬರನ್ನು ಹಾಲ್ ಪ್ರವೇಶಿಸಿದಂತೆ ಭದ್ರತಾ ಅಧಿಕಾರಿಗಳು ತಡೆದಿರುವ ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ.
ಚಂದ್ರಯಾನ -3 ಇಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಮಹತ್ವದ ಫಲ ಸಿಕ್ಕಿದೆ. ಇದೀಗ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಶೃಂಗಸಭೆಯಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿಂದಲ್ಲೇ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಕರೆ ಮಾಡಿ, ಅಭಿನಂದನೆಯನ್ನು ತಿಳಿಸಿದ್ದಾರೆ.
ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಚಂದ್ರಯಾನ-3 ಯಶಸ್ಸಿಗೆ ಉಪವಾಸ ಮಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇದೀಗ ಈ ವಿಡಿಯೊ ಎಲ್ಲರ ಗಮನ ಸೆಳೆದಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು. ಇಂದು (ಆ.23) ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನವೊಂದಕ್ಕೆ ಲ್ಯಾಂಡಿಂಗ್ಗೆ ಅನುಮತಿ ನೀಡಲಾಗಿತ್ತು. ಆದರೆ ಇದೇ ಸಮಯದಲ್ಲಿ ದೆಹಲಿಯಿಂದ ಬಾಗ್ಡೋಗ್ರಾಗೆ (UK-725) ಹೊರಟ ಮತ್ತೊಂದು ವಿಮಾನ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು.
ನರಸಿಂಹ ಸ್ವಾಮಿಯ ಮಂತ್ರದಲ್ಲಿದೆ ಯೋಗ, ಭಾಗ್ಯದ ಶಕ್ತಿ, ಪ್ರತಿ ರಾಶಿಯವರು ಸಂಜೆ ಈ ಮಂತ್ರ ಪಠಿಸಬೇಕು
ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲೆ ಮಾಡಲು ಪ್ರಯತ್ನಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷದ್ವೀಪದ ಲೋಕಸಭಾ ಸಂಸದ ಮೊಹಮ್ಮದ್ ಫೈಜಲ್ ಅವರ ಅಪರಾಧ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಇಂದು (ಆ.22) ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ತಾಯಿ ಮೊಬೈಲ್ ಫೋನ್‌ನಿಂದ ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸುವುದನ್ನು ನೋಡಿದ 17 ವರ್ಷದ ಬಾಲಕ ತನ್ನ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.