Chandrayaan 3 Success: ಸೋಮನಾಥ್ ಅವರೇ ಚಂದ್ರನ ಜತೆ ನಿಮ್ಮ ಹೆಸರೂ ಸೇರಿಕೊಂಡಿದೆ, ಜತೆಗೆ ಭಾರತೀಯರದ್ದೂ; ಪ್ರಧಾನಿ ಮೋದಿ ಅಭಿನಂದನೆ

ಚಂದ್ರಯಾನ -3 ಇಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್​​ ಆಗಿದ್ದು, ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಮಹತ್ವದ ಫಲ ಸಿಕ್ಕಿದೆ. ಇದೀಗ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಶೃಂಗಸಭೆಯಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿಂದಲ್ಲೇ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಕರೆ ಮಾಡಿ, ಅಭಿನಂದನೆಯನ್ನು ತಿಳಿಸಿದ್ದಾರೆ.

Chandrayaan 3 Success: ಸೋಮನಾಥ್ ಅವರೇ ಚಂದ್ರನ ಜತೆ ನಿಮ್ಮ ಹೆಸರೂ ಸೇರಿಕೊಂಡಿದೆ, ಜತೆಗೆ ಭಾರತೀಯರದ್ದೂ; ಪ್ರಧಾನಿ ಮೋದಿ ಅಭಿನಂದನೆ
ಪ್ರಧಾನಿ ಮೋದಿ
Follow us
|

Updated on:Aug 23, 2023 | 7:51 PM

ಚಂದ್ರಯಾನ -3 (Chandrayaan-3) ಇಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್​​ ಆಗಿದ್ದು, ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಮಹತ್ವದ ಫಲ ಸಿಕ್ಕಿದೆ. ಇದೀಗ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಶೃಂಗಸಭೆಯಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿಂದಲ್ಲೇ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಕರೆ ಮಾಡಿ, ಅಭಿನಂದನೆಯನ್ನು ತಿಳಿಸಿದ್ದಾರೆ. ಎಸ್ ಸೋಮನಾಥ್ ಅವರೊಂದಿಗೆ ಮಾತನಾಡಿದ ಅವರು ಸೋಮನಾಥ್ ಅವರೇ ನಿಮ್ಮ ಹೆಸರಿನಲ್ಲೇ ಶಶಿ ಎಂದು ಇದೆ. ಇದೀಗ ನೀವು ಕೂಡ ಚಂದ್ರನೊಂದಿಗೆ ಜತೆಗೆ ಸೇರಿಕೊಂಡಿದ್ದೀರಾ. ಇದರ ಜತೆಗೆ ಭಾರತೀಯರು ಕೂಡ ಚಂದ್ರನೊಂದಿಗೆ ಸಂಪರ್ಕ ಸಾಧಿಸಿದಂತಾಗಿದೆ. ನಿಮ್ಮ ಈ ಕಾರ್ಯಕ್ಕೆ ಕುಟುಂಬದ ಸದಸ್ಯರೂ ಹರ್ಷಿತರಾಗುತ್ತಾರೆ. ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಇದೀಗ ದೇಶದ್ಯಾಂತ ಸಂಭ್ರಮಚಾರಣೆ ಮುಗಿಲು ಮುಟ್ಟಿದ್ದು, ಚಂದ್ರಯಾನ -3ಗೆ ದೇಶದ ಗಣ್ಯ ವ್ಯಕ್ತಿಗಳು ಅಭಿನಂದನೆ ತಿಳಿಸಿದ್ದಾರೆ. ಇದರ ಜತೆಗೆ ಮೋದಿ ಅವರು ವೈಯಕ್ತಿಯವಾಗಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಚಂದ್ರಯಾನ ಯಶಸ್ಸಿಗೆ ಅಭಿನಂದನೆ ತಿಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಇಂದು ಚಂದ್ರಯಾನ 3 ಚಂದ್ರನಲ್ಲಿ ಯಶಸ್ವಿ ಲ್ಯಾಂಡಿಂಗ್‌ನೊಂದಿಗೆ, ನಮ್ಮ ವಿಜ್ಞಾನಿಗಳು ಇತಿಹಾಸವನ್ನು ನಿರ್ಮಿಸಿದ್ದಾರೆ. ಮಾತ್ರವಲ್ಲದೆ ಭೌಗೋಳಿಕ ಕಲ್ಪನೆಯನ್ನು ಮರುರೂಪಿಸಿದ್ದಾರೆ. ಇದು ನಿಜವಾಗಿಯೂ ಮಹತ್ವದ ಸಾಧನೆಯಾಗಿದೆ ಎಂದು ಅಧ್ಯಕ್ಷೆ ದ್ರೌಪದಿ ಟ್ವೀಟ್​​ ಮೂಲಕ ತಿಳಿಸಿದ್ದಾರೆ.

ಚಂದ್ರಯಾನ -3 ಯಶಸ್ಸಿಗೆ ಮೋದಿ ಅಭಿನಂದನೆ

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ದಿನ, ಇಸ್ರೋದ ಗಮನಾರ್ಹ ಯಶಸ್ಸಿಗಾಗಿ ಇಸ್ರೋಗೆ ಅಭಿನಂದನೆಗಳು ಎಂದು ಟ್ವೀಟ್​​ ಮೂಲಕ ತಿಳಿಸಿದ್ದಾರೆ.

ಚಂದ್ರಯಾನ -3 ಯಶಸ್ಸಿಗೆ ಅಭಿನಂದನೆ ತಿಳಿಸಿದ ಕೇಂದ್ರ ಗೃಹ ಸಚಿವ

ಚಂದ್ರಯಾನ -3 ಯಶಸ್ಸಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿನಂದನೆ ತಿಳಿದ್ದಾರೆ. ಚಂದ್ರಯಾನ -3 ಯಶಸ್ಸಿನೊಂದಿಗೆ ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿದ ಮೊದಲ ರಾಷ್ಟ್ರವಾಗಿದೆ ಎಂದು ತಿಳಿಸಿದ್ದಾರೆ.

ಚಂದ್ರಯಾನ -3 ಯಶಸ್ಸಿಗೆ ಸಿದ್ದರಾಮಯ್ಯ ಅಭಿನಂದನೆ

ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲನೀಡಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

ಇಸ್ರೋಗೆ ಅಭಿನಂದನೆ ತಿಳಿಸಿದ ರಾಹುಲ್​ ಗಾಂಧಿ

ಇಂದಿನ ಪ್ರವರ್ತಕ ಸಾಧನೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಪ್ರಚಂಡ ಚತುರತೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾದ ಲ್ಯಾಂಡಿಂಗ್ ಆಗಿದೆ. ಯುವ ಕನಸುಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಟ್ವಿಟರ್​ ಮೂಲಕ ಅಭಿನಂದನೆಯನ್ನು ತಿಳಿಸಿದ್ದಾರೆ.

ಇಸ್ರೋ ಸಾಧನೆಗೆ ಯೋಗಿ ಆದಿತ್ಯನಾಥ್​​ ಅಭಿನಂದನೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಸ್ರೋ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ. ಚಂದ್ರಯಾನ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ನವ ಭಾರತದ ಸಾಮರ್ಥ್ಯಗಳು ಮತ್ತು ಶಕ್ತಿಯ ಪ್ರಬಲ ಪ್ರದರ್ಶನವಾಗಿದೆ ಎಂದು ಹೇಳಿದ್ದಾರೆ.

ಭಾರತದ ಸಾಧನೆಗೆ ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ

ಭಾರತ ಮಾಡಿದ ಸಾಧನೆ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್​​ ಮೂಲಕ ಅಭಿನಂದನೆಯನ್ನು ತಿಳಿಸಿದ್ದಾರೆ. ಚಂದ್ರಯಾನ 3ರ ಯಶಸ್ಸು ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಯಶಸ್ಸು. 140 ಕೋಟಿ ಆಕಾಂಕ್ಷೆಗಳನ್ನು ಹೊಂದಿರುವ ಸಂಭ್ರಮದ ರಾಷ್ಟ್ರವು ತನ್ನ ಆರು ದಶಕಗಳ ಸುದೀರ್ಘ ಬಾಹ್ಯಾಕಾಶ ಸೇವೆಯಲ್ಲಿ ಇಂದು ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ. ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ಈ ಕಾರ್ಯಾಚರಣೆಯನ್ನು ಭಾರತಕ್ಕೆ ವಿಜಯವಾಗಿಸುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರದ್ದು ಗಮನಾರ್ಹ ಶ್ರಮ, ಅಪ್ರತಿಮ ಜಾಣ್ಮೆ ಮತ್ತು ಅಚಲವಾದ ಸಮರ್ಪಣೆಗೆ ನಾವು ಋಣಿಯಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಚಂದ್ರಯಾನ-3ರ ಯಶಸ್ಸಿಗೆ ಮೋದಿ ಹರ್ಷ; ಅಮೃತಕಾಲದಲ್ಲಿ ಸುರಿಯಿತು ಯಶಸ್ಸಿನ ಮಕರಂದ ಎಂದ ಪ್ರಧಾನಿ

ಚಂದ್ರಯಾನ 3 ಯಶಸ್ಸಿಗೆ ಕೇಂದ್ರ ಸಚಿವರು ಸೇರಿದಂತೆ, ವಿರೋಧ ಪಕ್ಷ ನಾಯಕರು ಕೂಡ ಅಭಿನಂದನೆ ತಿಳಿಸಿದ್ದಾರೆ. ಕ್ರೀಡಾ ಕ್ಷೇತ್ರದ ಸಾಧಕರು, ವಿಜ್ಞಾನಿಗಳು, ಸಿನಿಮಾ ನಟ-ನಟಿಯರು ಕೂಡ ಅಭಿನಂದನೆ ತಿಳಿಸಿದ್ದಾರೆ. ಜುಲೈ 14 ರಂದು ಉಡಾವಣೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೂರನೇ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಇಂದು ಸಂಜೆ (ಆಗಸ್ಟ್ 23) ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Wed, 23 August 23

ತಾಜಾ ಸುದ್ದಿ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ