ಬ್ರಿಕ್ಸ್ ಶೃಂಗಸಭೆ: ಆಫ್ರಿಕಾದ ಉಪಾಧ್ಯಕ್ಷರನ್ನು ಭೇಟಿ ಮಾಡಲು ಚೀನಾ ಅಧ್ಯಕ್ಷರ ಜತೆ ಬಂದ ಸಹಾಯಕನ ತಡೆದ ಭದ್ರತಾ ಪಡೆ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆಫ್ರಿಕಾದ ಉಪಾಧ್ಯಕ್ಷರನ್ನು ಭೇಟಿ ಮಾಡಲು ಅತಿಥಿ ಗೃಹಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಜತೆಗೆ ಬಂದಿದ್ದ ಸಹಾಯಕರೊಬ್ಬರನ್ನು ಹಾಲ್ ಪ್ರವೇಶಿಸಿದಂತೆ ಭದ್ರತಾ ಅಧಿಕಾರಿಗಳು ತಡೆದಿರುವ ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS summit) ಪ್ರಧಾನಿ ಮೋದಿ ಸೇರಿದಂತೆ ಅನೇಕ ದೇಶಗಳ ನಾಯಕರು ಭಾಗಿಯಾಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆಫ್ರಿಕಾದ ಉಪಾಧ್ಯಕ್ಷರನ್ನು ಭೇಟಿ ಮಾಡಲು ಅತಿಥಿ ಗೃಹಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಜತೆಗೆ ಬಂದಿದ್ದ ಸಹಾಯಕರೊಬ್ಬರನ್ನು ಹಾಲ್ ಪ್ರವೇಶಿಸಿದಂತೆ ಭದ್ರತಾ ಅಧಿಕಾರಿಗಳು ತಡೆದಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಕ್ಸಿ ಜಿನ್‌ಪಿಂಗ್ ಸಭಾಂಗಣದ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಚೀನಾದ ಪ್ರಧಾನಿ ಸಭಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ, ಅವರ ಸಹಾಯಕರೊಬ್ಬರು ಕೂಡ ಅವರ ಹಿಂದಿ ಓಡಿಕೊಂಡು ಬರುತ್ತಾರೆ. ಆದರೆ ಆಫ್ರಿಕಾ ಭದ್ರತಾ ಪಡೆ ಅವರನ್ನು ತಡೆದಿದ್ದಾರೆ. ಈ ಸಮಯದಲ್ಲಿ ಅಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಂದು ಬಾರಿ ಗೊಂದಲಕ್ಕೆ ಒಳಲಾಗುತ್ತಾರೆ.
ವೈರಲ್ ವಿಡಿಯೋ ಇಲ್ಲಿದೆ
Incident at the #BRICS summit in South Africa: the security service twisted Xi Jinping’s aide
The footage shows a Chinese official lagging behind Xi and trying to catch up with him in the meeting room, which aroused the suspicion of the guards.
They detained him and closed the… pic.twitter.com/pG1IBE0vN1
— Madhaw Tiwari (@MadhawTiwari) August 23, 2023
ಹಾಲ್ನ ಒಳಗೆ ಬರುತ್ತಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಏನಾಗುತ್ತಿದೆ ಎಂದು ಹಿಂತಿರುಗಿ ನೋಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ರಷ್ಯಾದ ಸರ್ಕಾರಿ ಸುದ್ದಿ ವಾಹಿನಿ ರಷ್ಯಾ ಟುಡೇ ಅಕಾ ಆರ್‌ಟಿ ಟ್ವೀಟ್‌ನಲ್ಲಿ ಚೀನಾದ ಅಧಿಕಾರಿಯೊಬ್ಬರು ಸ್ಯಾಂಡ್‌ಟನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕ್ಸಿ ಜಿನ್‌ಪಿಂಗ್ ಅವರಿಗಿಂತ ಮುಂದೆ ಹೋಗಲು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಜೋಹಾನ್ಸ್‌ಬರ್ಗ್‌ನಲ್ಲಿ 15ನೇ ಬ್ರಿಕ್ಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚು ಸಮಗ್ರಗೊಳಿಸಲು ಸಂಯೋಜಿಸಬಹುದಾದ ಹಲವಾರು ಸಲಹೆಗಳನ್ನು ಪ್ರಧಾನಿ ಮೋದಿ ಮುಂದಿಟ್ಟರು. ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನಾ ಒಕ್ಕೂಟವನ್ನು ಸ್ಥಾಪಿಸುವ ಕಲ್ಪನೆಯ ಬಗ್ಗೆಯು ಈ ಸಭೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಈಗಾಗಲೇ ಬ್ರಿಕ್ಸ್ ಉಪಗ್ರಹ ಸಮೂಹದಲ್ಲಿ ಕೆಲಸ ಮಾಡುತ್ತಿದ್ದೇವೆ, ಆದರೆ ಒಂದು ಹೆಜ್ಜೆ ಮುಂದೆ ಹೋಗಿ, ನಾವು ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನಾ ಒಕ್ಕೂಟವನ್ನು ಸ್ಥಾಪಿಸುವ ಬಗ್ಗೆ ಯೋಚಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ