‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

TV9 Digital Desk
| Updated By: ಮದನ್​ ಕುಮಾರ್​

Updated on:Aug 01, 2021 | 9:59 AM

‘ಕನ್ನಡತಿ’ ಧಾರಾವಾಹಿ ಮೂಲಕ ನಟ ಕಿರಣ್​ ರಾಜ್​ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕಿರಣ್​ ರಾಜ್​ ಅಭಿನಯಿಸಿದ ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರ ಆ.19ರಂದು ಬಿಡುಗಡೆ ಆಗಲಿದೆ.

ಕಿರುತೆರೆಯಿಂದ ನಟನೆ ಆರಂಭಿಸಿ, ನಂತರ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್​ ಆಗಿ ಮಿಂಚಿದವರು ಹಲವರಿದ್ದಾರೆ. ‘ಕನ್ನಡತಿ’ ಸೀರಿಯಲ್​ (Kannadathi Serial) ಖ್ಯಾತಿಯ ನಟ ಕಿರಣ್​ ರಾಜ್ (Kiran Raj) ಈಗ ಸಿನಿಮಾವೊಂದನ್ನು ಮಾಡಿದ್ದಾರೆ. ‘ಜೀವ್ನಾನೇ ನಾಟ್ಕ ಸಾಮಿ’ (Jeevnane Natka Samy) ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಆ.19ರಂದು ಈ ಚಿತ್ರ ಬಿಡುಗಡೆ ಆಗಲಿದೆ. ‘ಕನ್ನಡತಿ’ ಸೀರಿಯಲ್​ ಶುರು ಆಗುವುದಕ್ಕಿಂತಲೂ ಮುನ್ನವೇ ಅವರು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ‘ನಾನಿನ್ನೂ ಪೂರ್ಣ ಪ್ರಮಾಣದಲ್ಲಿ ಬೆಳ್ಳಿಪರದೆಗೆ ಎಂಟ್ರಿ ನೀಡಿಲ್ಲ. ಇದರಲ್ಲಿ ಒಂದು ಪಾತ್ರ ಮಾಡಿದ್ದೇನೆ ಅಷ್ಟೇ. ನಟನೆಗೆ ಪ್ರಾಮುಖ್ಯತೆ ಇರುವಂತಹ ಪಾತ್ರ ಎಂಬ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡೆ’ ಎಂದು ಕಿರಣ್​ ರಾಜ್ ಹೇಳಿದ್ದಾರೆ.

ಮಹಾಭಾರತದ ಉಪಕಥೆಯನ್ನು ಆಧರಿಸಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಸಿದ್ಧಗೊಂಡಿದೆ. ಪಾಸಿಟಿವ್ ಹಾಗೂ ನೆಗೆಟಿವ್ ಆಲೋಚನೆಗಳನ್ನು ಎರಡು ಪಾತ್ರಗಳ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕರು. ಕಿರಣ್ ರಾಜ್ ಹಾಗೂ ಶ್ರೀಹರ್ಷ ಈ ಪಾತ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ಈ ಚಿತ್ರದ ನಿರ್ದೇಶಕರು.

ಇದನ್ನೂ ಓದಿ:

‘ಕನ್ನಡತಿ’ ತಂಡಕ್ಕೆ ರಾತ್ರಿ ಭಯಾನಕ ಅನುಭವ; ವಿಡಿಯೋ ಸಮೇತ ವಿವರಿಸಿದ ಭುವಿ

‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

Published on: Aug 01, 2021 09:57 AM
Latest Videos