ಈಗಷ್ಟೇ ರಾಜಕೀಯಕ್ಕೆ ಬಂದಿರುವ ಕಾಂಗ್ರೆಸ್ ಶಾಸಕ ದರ್ಶನ್ ಧ್ರುವನಾರಾಯಣ ಕರ್ತವ್ಯನಿರತ ಪೊಲೀಸರೊಂದಿಗೆ ವಾದ ಮಾಡಿದ್ದು ಸರಿಯಲ್ಲ

ಈಗಷ್ಟೇ ರಾಜಕೀಯಕ್ಕೆ ಬಂದಿರುವ ಕಾಂಗ್ರೆಸ್ ಶಾಸಕ ದರ್ಶನ್ ಧ್ರುವನಾರಾಯಣ ಕರ್ತವ್ಯನಿರತ ಪೊಲೀಸರೊಂದಿಗೆ ವಾದ ಮಾಡಿದ್ದು ಸರಿಯಲ್ಲ

Arun Kumar Belly
| Updated By: Vimal Kumar

Updated on:Aug 21, 2024 | 6:05 PM

ಕೇವಲ 3 ತಿಂಗಳ ಹಿಂದೆ ರಾಜಕಾರಣಕ್ಕೆ ಬಂದಿರುವ ದರ್ಶನ್ ಕಾರ್ಯಕರ್ತರನ್ನು ಬಿಡದಿದ್ದರೆ ತಾನೂ ಒಳಗಡೆ ಹೋಗೋದಿಲ್ಲ ಅಂತ ಹಟ ಸಾಧಿಸುತ್ತಾರೆ. ಪೊಲೀಸರಿಗೆ ದರ್ಶನ್ ಒಟ್ಟಿಗೆ ಯಾವುದೇ ವೈರತ್ವ ಇಲ್ಲ, ಅವರು ತಮ್ಮ ಕರ್ತವ್ಯವನ್ನಷ್ಟೇ ದಕ್ಷತೆಯಿಂದ ನಿಭಾಯಿಸುತ್ತಿದ್ದರು. ಕೊನೆಗೆ ಶಾಸಕನ ಹಟದ ಮುಂದೆ ಮಣಿದ ಪೊಲೀಸರು ಕಾರ್ಯಕರ್ತರನ್ನು ಸಹ ಒಳಗೆ ಬಿಡುತ್ತಾರೆ.

ಮೈಸೂರು: ಉದಯೋನ್ಮುಖ ರಾಜಕಾರಣಿಗೆ ಇದು ತರವಲ್ಲ. ದರ್ಶನ್ ಧ್ರುವನಾರಾಯಣ (Darshan Dhruvanarayana) ತಮ್ಮ ತಂದೆಯ ರಾಜಕೀಯ ಬದುಕನ್ನು ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ ಅಂತ ಅವರ ವರ್ತನೆಯಿಂದ ಗೊತ್ತಾಗುತ್ತದೆ. ಮೊನ್ನೆಯಷ್ಟೆ ಗತಿಸಿದ ಆರ್ ಧ್ರುವನಾರಾಯಣ (R Dhruvanarayana) ಒಬ್ಬ ಸಜ್ಜನ ಮತ್ತು ಸಭ್ಯ ರಾಜಕಾರಣಿಯಾಗಿದ್ದರು. ವಿರೋಧ ಪಕ್ಷಗಳ ನಾಯಕರು (opposition party leaders) ಸಹ ಅವರನ್ನು ಧ್ರುವನಾರಾಯಣ ಸಾಹೇಬರು ಅಂತ ಉಲ್ಲೇಖಿಸುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಅವರ ಮಗ ಮತ್ತು ನಂಜನಗೂಡು ಶಾಸಕ ದರ್ಶನ್; ಇಂದು ಡಿಕೆ ಶಿವಕುಮಾರ್ (DK Shivakumar) ಅವರನ್ನು ಮಾಡಿಕೊಳ್ಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮೊಂದಿಗೆ ಕಾರ್ಯಕರ್ತರನ್ನೂ ನಿಲ್ದಾಣದೊಳಗೆ ಕರೆದೊಯ್ಯುವಾಗ ಪೊಲೀಸರು ಅವರನ್ನು ತಡೆಯುತ್ತಾರೆ. ಜನಜಂಗುಳಿಯಾಗಿ ಭದ್ರತೆಯ ಸಮಸ್ಯೆಯಾಗುತ್ತದೆ ನೀವು ಮಾತ್ರ ಹೋಗಿ ಅಂತ ಹೇಳಿದಾಗ ಶಾಸಕ ವಾದಮಾಡಲಾರಂಭಿಸುತ್ತಾರೆ. ಕೇವಲ 3 ತಿಂಗಳ ಹಿಂದೆ ರಾಜಕಾರಣಕ್ಕೆ ಬಂದಿರುವ ದರ್ಶನ್ ಕಾರ್ಯಕರ್ತರನ್ನು ಬಿಡದಿದ್ದರೆ ತಾನೂ ಒಳಗಡೆ ಹೋಗೋದಿಲ್ಲ ಅಂತ ಹಟ ಸಾಧಿಸುತ್ತಾರೆ. ಪೊಲೀಸರಿಗೆ ದರ್ಶನ್ ಒಟ್ಟಿಗೆ ಯಾವುದೇ ವೈರತ್ವ ಇಲ್ಲ, ಅವರು ತಮ್ಮ ಕರ್ತವ್ಯವನ್ನಷ್ಟೇ ದಕ್ಷತೆಯಿಂದ ನಿಭಾಯಿಸುತ್ತಿದ್ದರು. ಕೊನೆಗೆ ಶಾಸಕನ ಹಟದ ಮುಂದೆ ಮಣಿದ ಪೊಲೀಸರು ಕಾರ್ಯಕರ್ತರನ್ನು ಸಹ ಒಳಗೆ ಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 24, 2023 05:54 PM