ಚಿಕ್ಕಮಗಳೂರು: ಕೆರೆಮನೆ ಸರಕಾರಿ ಪ್ರಾಥಮಿಕ ಶಾಲೆ ತರಗತಿಯೊಳಗೆ ಬಂದ 14 ಅಡಿ ಉದ್ದದ ನಾಗಪ್ಪ; ವಿಡಿಯೋ ನೋಡಿ
Snake found in Chikkamagaluru school and Mandya Scooty; ಈ ಮಧ್ಯೆ ಸ್ಕೂಟಿಯೊಂದರ ಸೀಟಿನ ಅಡಿಯಲ್ಲಿ ವೈಪರ್ ಹಾವು ಪತ್ತೆಯಾದ ಘಟನೆ ಮಂಡ್ಯದಲ್ಲಿಯೂ ವರದಿಯಾಗಿದೆ. ಬೈಕ್ ಚಲಾಯಿಸುತ್ತಿದ್ದ ಮಹಿಳೆ ಸೀಟು ತೆರೆದಾಗ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ಅವರು ಸ್ಕೂಟಿ ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು.
ಚಿಕ್ಕಮಗಳೂರು, ಆಗಸ್ಟ್ 24: ಚಿಕ್ಕಮಂಗಳೂರಿನ (Chikkamagaluru) ಶೃಂಗೇರಿ ತಾಲೂಕಿನ ಕೆರೆಮನೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 14 ಅಡಿ ಉದ್ದದ ಹಾವೊಂದು (Snake) ಕಂಡುಬಂದಿದ್ದು, ಅದನ್ನು ಸೆರೆಹಿಡಿಯಲಾಗಿದೆ. ತರಗತಿಯೊಳಗೆ ಹಾವು ಕಂಡುಬಂದಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ನಂತರ ಉರಗ ರಕ್ಷಕ ಜೈ ಕುಮಾರ್ ಅವರು ಸ್ಥಳಕ್ಕೆ ಬಂದು ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಈ ಮಧ್ಯೆ ಸ್ಕೂಟಿಯೊಂದರ ಸೀಟಿನ ಅಡಿಯಲ್ಲಿ ವೈಪರ್ ಹಾವು ಪತ್ತೆಯಾದ ಘಟನೆ ಮಂಡ್ಯದಲ್ಲಿಯೂ ವರದಿಯಾಗಿದೆ. ಬೈಕ್ ಚಲಾಯಿಸುತ್ತಿದ್ದ ಮಹಿಳೆ ಸೀಟು ತೆರೆದಾಗ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ಅವರು ಸ್ಕೂಟಿ ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ನಂತರ ಉರಗ ರಕ್ಷಕ ಸ್ಥಳಕ್ಕಾಗಮಿಸಿ ಹಾವನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ನಾಗರ ಪಂಚಮಿ: 15 ಅಡಿ ಉದ್ದದ ಹಾವು ಪ್ರತ್ಯಕ್ಷ, ಆತಂಕಗೊಂಡ ಕುಟುಂಬಸ್ಥರು
ನಾಗರ ಪಂಚಮಿಯ ದಿನವೇ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ತೋಟದ ಮನೆಯೊಂದರಲ್ಲಿ ಸುಮಾರು 15 ಅಡಿ ಉದ್ದದ ಕೇರೆ ಹಾವು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಅಂಥದ್ದೇ ಎರಡು ಘಟನೆ ರಾಜ್ಯದಲ್ಲಿ ವರದಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ