IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!

IPL 2023: ಗ್ರೂಪ್ A-ನಲ್ಲಿದ್ದ ತಂಡವು ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಿದೆ. ಹಾಗೆಯೇ ಗ್ರೂಪ್ B-ನಲ್ಲಿದ್ದ 4 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯವನ್ನಾಡಿದೆ.

Important Highlight‌
IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!
IPL 2023
Follow us
TV9 Digital Desk
| Updated By: Zahir Yusuf

Updated on: Jun 09, 2022 | 5:16 PM

ಐಪಿಎಲ್​ (IPL) ಸೀಸನ್​ 15 ಮುಕ್ತಾಯದ ಬೆನ್ನಲ್ಲೇ ಇದೀಗ ಬಿಸಿಸಿಐ (BCCI) ಮುಂಬರುವ ಸೀಸನ್​ಗಳಲ್ಲಿ ಮಹತ್ವದ ಬದಲಾವಣೆ ತರಲು ಯೋಜನೆ ರೂಪಿಸುತ್ತಿದೆ. ಏಕೆಂದರೆ ಈ ಬಾರಿ ಐಪಿಎಲ್ ನೇರ ಪ್ರಸಾರ ಮಾಧ್ಯಮ ಹಕ್ಕುಗಳ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಮೂಲಕ ಬಿಡ್ಡಿಂಗ್​ದಾರರಿಗೆ ಹೆಚ್ಚಿನ ಲಾಭವಾಗುವಂತಹ ಆಫರ್​ನ್ನು ಮುಂದಿಡಲು ಬಿಸಿಸಿಐ ಬಯಸಿದೆ. ಇದರಿಂದ ಐಪಿಎಲ್‌ ಪ್ರಸಾರ ಹಕ್ಕುಗಳ ಖರೀದಿಗೆ ಹೆಚ್ಚಿನ ಪೈಪೋಟಿ ಕಂಡು ಬರಲಿದೆ. ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಐಪಿಎಲ್ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಿತ್ತು. ಅಂದರೆ ಲೀಗ್ ಫಾರ್ಮಾಟ್​​ ಬದಲಿಗೆ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಲಾಗಿತ್ತು. ಅದರಂತೆ ಈ ಬಾರಿ 60 ಪಂದ್ಯಗಳ ಬದಲಾಗಿ ಒಟ್ಟು 74 ಪಂದ್ಯಗಳನ್ನು ನಡೆಸಲಾಗಿತ್ತು.

ಇದೀಗ ಅದೇ ಮಾದರಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಮುಂದಾಗಿದೆ. ಅಂದರೆ ಐಪಿಎಲ್​ 2023 ಮತ್ತು 2024 ರಲ್ಲಿ 74 ಪಂದ್ಯಗಳೇ ನಡೆಯಲಿದೆ. ಆದರೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ನಡೆಸಲಾಗುತ್ತದೆ. ಹಾಗೆಯೇ 2027 ರಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಾಗುತ್ತದೆ. ಅಂದರೆ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ.

ಐಪಿಎಲ್ 2021 ರಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. ಇದರಲ್ಲಿ 56 ಲೀಗ್ ಪಂದ್ಯಗಳಿದ್ದರೆ, 4 ಪ್ಲೇಆಫ್​ ಪಂದ್ಯಗಳನ್ನು ಆಡಿಸಲಾಗಿತ್ತು. ಈ ವೇಳೆ ಪ್ರತಿ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಿತ್ತು. ಈ ಮೂಲಕ ಲೀಗ್​ನಲ್ಲಿ ಎಲ್ಲಾ ತಂಡಗಳು ಒಟ್ಟು 14 ಪಂದ್ಯಗಳನ್ನಾಡಲಾಗಿತ್ತು. ಆದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲಾಗಿದೆ.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಅದರಂತೆ ಗ್ರೂಪ್ A-ನಲ್ಲಿದ್ದ ತಂಡವು ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಿದೆ. ಹಾಗೆಯೇ ಗ್ರೂಪ್ B-ನಲ್ಲಿದ್ದ 4 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯವನ್ನಾಡಿದೆ. ಅಂದರೆ ಆಯಾ ಗ್ರೂಪ್​ನ ತಂಡಗಳ ವಿರುದ್ದ 2 ಪಂದ್ಯಗಳು, ಮತ್ತೊಂದು ಗ್ರೂಪ್​ 4 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯವಾಡಿತ್ತು. ಈ ಮೂಲಕ ಒಂದು ತಂಡವು ಒಟ್ಟು 14 ಲೀಗ್ ಪಂದ್ಯಗಳನ್ನು ಆಡಲಾಗಿತ್ತು. ಇದೇ ಮಾದರಿಯಲ್ಲೇ 2023 ರ ಮತ್ತು 2024 ಐಪಿಎಲ್ ನಡೆಯಲಿದೆ.

ಆದರೆ 2025 ರ ಐಪಿಎಲ್​ನಲ್ಲಿ ಒಟ್ಟು 84 ಪಂದ್ಯಗಳು ಇರಲಿದೆ. ಇಲ್ಲಿ ಕೂಡ ರೌಂಡ್ ರಾಬಿನ್ ಮಾದರಿಯನ್ನೇ ಅನುಸರಿಸಲಿದೆ. ಅಂದರೆ ಆಯಾ ಗ್ರೂಪ್​ನ 4 ತಂಡಗಳ ವಿರುದ್ದ 2 ಪಂದ್ಯಗಳು, ಮತ್ತೊಂದು ಗ್ರೂಪ್​ 3 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ 2 ತಂಡಗಳ ವಿರುದ್ದ ಎರಡೆರಡು ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿ ಒಟ್ಟು 15 ಪಂದ್ಯವಾಡಲಿದೆ. ಈ ಮಾದರಿಯಲ್ಲಿ ಐಪಿಎಲ್ 2025-26 ರ ಸೀಸನ್​ ನಡೆಯಲಿದೆ.

ಇನ್ನು 2027 ರ ಸೀಸನ್​ ಅನ್ನು ಲೀಗ್ ಮಾದರಿಯಲ್ಲೇ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅಂದರೆ ಎಲ್ಲಾ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಲಿದೆ. ಇಲ್ಲಿ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ. ಇದಾಗ್ಯೂ ಮುಂಬರುವ ಸೀಸನ್​ಗಳಲ್ಲಿ ಪ್ಲೇಆಫ್​ ಮಾದರಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ಈಗಿರುವಂತೆ ಮೊದಲ ಕ್ವಾಲಿಫೈಯರ್ ಪಂದ್ಯ, ಎಲಿಮಿನೇಟರ್ ಪಂದ್ಯ, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ನಡೆಸಲಾಗುತ್ತದೆ.

ಈ ಮಾದರಿಯಲ್ಲಿ ಎರಡು ಸೀಸನ್​ಗೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಿಸುವುದರಿಂದ 5 ವರ್ಷದಲ್ಲಿ 370 ರ ಬದಲು 410 ಪಂದ್ಯಗಳನ್ನು ಆಡಿಸಬಹುದು. ಇದರಿಂದ 40 ಪಂದ್ಯಗಳು ಕೂಡ ಹೆಚ್ಚಳವಾಗಲಿದೆ. ಈ ಮೂಲಕ ಐಪಿಎಲ್​ 2023 ರಿಂದ 2027ರ ನೇರ ಪ್ರಸಾರ ಹಕ್ಕುಗಳ ಖರೀದಿದಾರರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಹೀಗಾಗಿ ಬಿಸಿಸಿಐ ಮುಂಬರುವ ಸೀಸನ್​ಗಳಲ್ಲಿ ಪಂದ್ಯಗಳ ಸಂಖ್ಯೆಗಳನ್ನು ಹೆಚ್ಚಿಸುವತ್ತ ಚಿಂತನೆ ನಡೆಸಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು