IND vs SA: ವಿಶ್ವದ ದಾಖಲೆ ನಿರ್ಮಿಸುವ ಟೀಮ್ ಇಂಡಿಯಾ ಕನಸು ನುಚ್ಚುನೂರು ಮಾಡಿದ ಆಫ್ರಿಕಾನ್ನರು

India vs South Africa, 1st T20I: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಬೆಟ್ಟದಂತಹ ಟಾರ್ಗೆಟ್ ನೀಡಿದ್ದರೂ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಟೀಮ್ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನೂ ಕೈಚೆಲ್ಲಿಕೊಂಡಿತು.

Important Highlight‌
IND vs SA: ವಿಶ್ವದ ದಾಖಲೆ ನಿರ್ಮಿಸುವ ಟೀಮ್ ಇಂಡಿಯಾ ಕನಸು ನುಚ್ಚುನೂರು ಮಾಡಿದ ಆಫ್ರಿಕಾನ್ನರು
IND vs SA 1st T20I
Follow us
TV9 Digital Desk
| Updated By: Vinay Bhat

Updated on: Jun 10, 2022 | 7:44 AM

ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs South Africa) ತಂಡ ಹೀನಾಯ ಸೋಲು ಕಂಡಿದೆ. ಬೆಟ್ಟದಂತಹ ಟಾರ್ಗೆಟ್ ನೀಡಿದ್ದರೂ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಟೀಮ್ ಇಂಡಿಯಾ (Team India) ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನೂ ಕೈಚೆಲ್ಲಿಕೊಂಡಿತು. ರಸ್ಸಿ ವಂಡರ್ ಡುಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ (David Miller) ಸ್ಫೋಟಕ ಬ್ಯಾಟಿಂಗ್​ಗೆ ತಬ್ಬಿಬ್ಬಾದ ಭಾರತ ರಿಷಭ್ ಪಂತ್ ನಾಯಕತ್ವದ ಮೊದಲ ಪಂದ್ಯದಲ್ಲೇ ಗೆಲ್ಲಲು ವಿಫಲವಾಯಿತು. ಅನುಭವಿಗಳಾದ ಭುವಿ, ಚಹಲ್ ಬೌಲಿಂಗ್ ಮ್ಯಾಜಿಕ್ ಕೂಡ ಈ ಪಂದ್ಯದಲ್ಲಿ ನಡೆಯಲಿಲ್ಲ. ಬಹುತೇಕ ಎಲ್ಲ ಬೌಲರ್​ಗಳು ದುಬಾರಿಯಾದರು. 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಕನಸಿಗೆ ತಣ್ಣೀರನ್ನು ಎರಚಿತು.

ಟೀಮ್ ಇಂಡಿಯಾ ಈ ಪಂದ್ಯಕ್ಕೂ ಮುನ್ನ ಕಳೆದ 12 ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದಿತ್ತು. ಹೀಗಾಗಿ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಕಂಡಿದ್ದರೆ ಸತತವಾಗಿ 13 ಟಿ20 ಪಂದ್ಯಗಳಲ್ಲಿ ಗೆಲುವು ಕಂಡ ಮೊದಲ ತಂಡ ಎಂಬ ವಿಶ್ವ ದಾಖಲೆ ಬರೆಯುವ ಅವಕಾಶವಿತ್ತು. ಆದರೆ, ಈ ಪಂದ್ಯದಲ್ಲಿ ಸೋತಿರುವ ಭಾರತ ಈ ಅವಕಾಶವನ್ನು ಕೈತಪ್ಪಿಸಿಕೊಂಡು ನಿರಾಸೆ ಅನುಭವಿಸಿದೆ. ಈ ಮೂಲಕ ಅಪ್ಘಾನಿಸ್ತಾನ, ರೋಮಾನಿಯಾ ದೇಶಗಳ ನಂತರ ಸತತ 12 ಟಿ20 ಪಂದ್ಯಗಳಲ್ಲಿ ಗೆದ್ದ ದೇಶ ಭಾರತ ಎಂಬ ಮೈಲಿಗಲ್ಲಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

India vs South Africa, 1st T20: ಮಿಂಚಿದ ಕಿಲ್ಲರ್ ಮಿಲ್ಲರ್, ಡೇಂಜರಸ್ ಡುಸ್ಸೆನ್: ಸೌತ್​ ಆಫ್ರಿಕಾಗೆ ಭರ್ಜರಿ ಜಯ

ಇದನ್ನೂ ಓದಿ
Image
IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!
Image
Virat Kohli: ಲಯ ತಪ್ಪಿದ ಕೊಹ್ಲಿಯ ಮುಂದೆ ಬಾಬರ್​ನ ಆರ್ಭಟ..!
Image
Ranji Trophy: 9 ಬ್ಯಾಟ್ಸ್​ಮನ್​ಗಳು ಅರ್ಧಶತಕ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ
Image
Babar Azam: ವಿರಾಟ್ ಕೊಹ್ಲಿಯ ವಿಶ್ವದಾಖಲೆ ಮುರಿದ ಬಾಬರ್ ಅಜಾಮ್: ಈ ಸಾಧನೆ ಮಾಡಿದ ಮೊದಲ ಬ್ಯಾಟರ್

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಪವರ್ ಪ್ಲೇಯನ್ನು ಸಂಪೂರ್ಣವಾಗಿ ಆಡಿದ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. ರುತುರಾಜ್ ಗಾಯಕ್ವಾಡ್ 23 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಚಚ್ಚಿದರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 27 ಎಸೆತಗಳಲ್ಲಿ 36 ರನ್ ಕಲೆಹಾಕಿದರೆ, ನಾಯಕ ರಿಷಭ್ ಪಂತ್ 16 ಎಸೆತಗಳಲ್ಲಿ 29 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಕೇವಲ 12 ಎಸೆತಗಳಲ್ಲಿ ಅಜೇಯ 31 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ 1 ರನ್ ಕಲೆಹಾಕಿದರು. ಪರಿಣಾಮ ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಆಫ್ರಿಕಾ ಪರ ಮಹರಾಜ್, ನಾರ್ಟ್ಜೆ, ಪಾರ್ನೆಲ್ ಹಾಗೂ ಪ್ರೆಟೋರಿಯಸ್ ತಲಾ 1 ವಿಕೆಟ್ ಪಡೆದರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ನಾಯಕ ತೆಂಬಾ ಬವುಮ (10) ವಿಕೆಟ್ ಕಳೆದುಕೊಂಡಿತು. ಡಿ ಕಾಕ್‌ (22) ಮತ್ತು ಪ್ರಿಟೋರಿಯಸ್‌ (29) ಕೂಡ ಹೆಚ್ಚುಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಆದರೆ, ಇವರ ನಿರ್ಗಮನದ ಬಳಿಕ ಜತೆಗೂಡಿದ ಡೇವಿಡ್ ಮಿಲ್ಲರ್‌ ಮತ್ತು ಡುಸೆನ್‌ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶನವಿತ್ತರು. 6 ಓವರ್‌ಗಳಿಂದ 80 ರನ್‌, 3 ಓವರ್‌ಗಳಿಂದ 34 ರನ್‌ ತೆಗೆಯುವ ಸವಾಲನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದರು. ಕೊನೆಯ 2 ಓವರ್‌ಗಳಲ್ಲಿ ಈ ಟಾರ್ಗೆಟ್‌ ಕೇವಲ 12 ರನ್ನಿಗೆ ಇಳಿದದ್ದು ಇವರಿಬ್ಬರ ಬ್ಯಾಟಿಂಗ್‌ ವೈಭವಕ್ಕೆ ಸಾಕ್ಷಿ. ಈ ಜೋಡಿ ಕೇವಲ 64 ಎಸೆತಗಳಿಂದ 131 ರನ್‌ ಸೂರೆಗೈದಿತು.

ಐಪಿಎಲ್‌ ಫಾರ್ಮ್ ಮುಂದುವರಿಸಿದ ಮಿಲ್ಲರ್‌ 31 ಎಸೆತಗಳಿಂದ ಅಜೇಯ 64 ರನ್‌ ಹೊಡೆದರೆ (4 ಬೌಂಡರಿ, 5 ಸಿಕ್ಸರ್‌), ಡುಸೆನ್‌ 46 ಎಸೆತ ನಿಭಾಯಿಸಿ ಸರ್ವಾಧಿಕ 75 ರನ್‌ ಬಾರಿಸಿದರು (7 ಬೌಂಡರಿ, 5 ಸಿಕ್ಸರ್‌). ಪರಿಣಾಮ ಆಫ್ರಿಕಾ 19.1 ಓವರ್​​ನಲ್ಲೇ 3 ವಿಕೆಟ್ ನಷ್ಟಕ್ಕೆ 212 ರನ್ ಚಚ್ಚಿತು. ಇದು ಟಿ20 ಕ್ರಿಕೆಟ್​ನಲ್ಲಿ ಆಫ್ರಿಕಾ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು