ಟೇಕಾಫ್ ವೇಳೆ ಕಟ್ಟಡಕ್ಕೆ ಡಿಕ್ಕಿ: ನೂರಾರು ಪ್ರಯಾಣಿಕರಿದ್ದ ವಿಮಾನ ಪತನ
ಕಜಕಿಸ್ತಾನ: ಕಜಕಿಸ್ತಾನದ ಆಲ್ಮಟಿ ಏರ್‌ಪೋರ್ಟ್ ಬಳಿ ಭೀಕರ ವಿಮಾನ ಅಪಘಾತವಾಗಿದೆ. ಟೇಕಾಫ್ ಆಗುವ ವೇಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು ನೂರಾರು ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ದುರಂತಕ್ಕೀಡಾದ ವಿಮಾನವು ಬೆಕ್ ಏರ್‌ಲೈನ್ಸ್‌ಗೆ ಸೇರಿದ್ದಾಗಿದೆ. ವಿಮಾನದಲ್ಲಿ ಐದು ಮಂದಿ ಸಿಬ್ಬಂದಿ ಸೇರಿ 100 ಜನ ತೆರಳುತ್ತಿದ್ದರು. 30 ಮಂದಿ ಸಾವಿಗೀಡಾಗಿದ್ದು, 35 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ರನ್ ವೇ ಅಂತ್ಯದಲ್ಲಿ ಹಳ್ಳಿಯಿದ್ದು, ಹಿಮಾವೃತ ಪ್ರದೇಶದಲ್ಲಿ ಅಪಘಾತ ನಡೆದಿದೆ.
Important Highlight

Published On - 11:08 am, Fri, 27 December 19
ತಾಜಾ ಸುದ್ದಿ