Asian Games 2023: ಏಷ್ಯನ್ ಗೇಮ್ಸ್‌ಗೆ ಪಾಕ್ ತಂಡ ಪ್ರಕಟ; 20 ವರ್ಷದ ಆಲ್‌ರೌಂಡರ್‌ಗೆ ನಾಯಕತ್ವ..!
Asian Games 2023: ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ಪಾಕಿಸ್ತಾನ ತಂಡವನ್ನೂ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು 20 ವರ್ಷದ ಆಲ್ ರೌಂಡರ್ ಕಾಸಿಂ ಅಕ್ರಮ್ಗೆ ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, ಆಸಿಫ್ ಅಲಿ, ಮೊಹಮ್ಮದ್ ಹಸ್ನೈನ್, ಶಹನವಾಜ್ ದಹಾನಿ ಸೇರಿದಂತೆ ಪಾಕಿಸ್ತಾನದ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ 8 ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
- Asian Games 2023: ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ.
- ಇದೀಗ ಪಾಕಿಸ್ತಾನ ತಂಡವನ್ನೂ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು 20 ವರ್ಷದ ಆಲ್ ರೌಂಡರ್ ಕಾಸಿಂ ಅಕ್ರಮ್ಗೆ ಹಸ್ತಾಂತರಿಸಲಾಗಿದೆ.
- ಇದೀಗ ಪಾಕಿಸ್ತಾನ ತಂಡವನ್ನೂ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು 20 ವರ್ಷದ ಆಲ್ ರೌಂಡರ್ ಕಾಸಿಂ ಅಕ್ರಮ್ಗೆ (Qasim Akram) ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, ಆಸಿಫ್ ಅಲಿ, ಮೊಹಮ್ಮದ್ ಹಸ್ನೈನ್, ಶಹನವಾಜ್ ದಹಾನಿ ಸೇರಿದಂತೆ ಪಾಕಿಸ್ತಾನದ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ 8 ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ
ಮುಂದಿನ ಎರಡು ತಿಂಗಳು ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಕ್ರಿಕೆಟ್ ಮೈದಾನದಲ್ಲಿ ಐದಕ್ಕೂ ಹೆಚ್ಚು ಬಾರಿ ಕದನಕ್ಕಿಳಿಯಲ್ಲಿವೆ. ಏಷ್ಯಾಕಪ್ (Asia Cup 2023) ಮತ್ತು ವಿಶ್ವಕಪ್‌ನಲ್ಲಿ (ODI World Cup 2023) ಎರಡು ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಈ ಎರಡು ಟೂರ್ನಿಗಳಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೂಡ ಮುಖಾಮುಖಿಯಾಗುವ ನಿರೀಕ್ಷೆಯಿದೆ. ಏಷ್ಯನ್ ಕ್ರೀಡಾಕೂಟಕ್ಕೆ (Asian Games) ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ಪಾಕಿಸ್ತಾನ ತಂಡವನ್ನೂ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು 20 ವರ್ಷದ ಆಲ್ ರೌಂಡರ್ ಕಾಸಿಂ ಅಕ್ರಮ್ಗೆ (Qasim Akram) ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, ಆಸಿಫ್ ಅಲಿ, ಮೊಹಮ್ಮದ್ ಹಸ್ನೈನ್, ಶಹನವಾಜ್ ದಹಾನಿ ಸೇರಿದಂತೆ ಪಾಕಿಸ್ತಾನದ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ 8 ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಷ್ಯನ್ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪುರುಷರ ಕ್ರಿಕೆಟ್ ಈವೆಂಟ್ ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 7 ರವರೆಗೆ ನಡೆಯಲಿದೆ. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿರುವ ಭಾರತ, ಪಾಕಿಸ್ತಾನದಂತಹ ತಂಡಗಳು ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆಯಲಿವೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಅಕ್ಟೋಬರ್ 3 ಮತ್ತು 4 ರಂದು ನಡೆಯಲಿವೆ. ಸೆಮಿಫೈನಲ್ ಪಂದ್ಯ ಅಕ್ಟೋಬರ್ 6 ರಂದು ಮತ್ತು ಫೈನಲ್ ಪಂದ್ಯ ಅಕ್ಟೋಬರ್ 7 ರಂದು ನಡೆಯಲಿದೆ.
🚨 Qasim Akram to lead Pakistan Shaheens in the 19th Asian Games, set to take place in Hangzhou, China 🏏
Read more ➡️ https://t.co/dEgBl54Xvx pic.twitter.com/iqYnYm2m7G
— Pakistan Cricket (@TheRealPCB) August 24, 2023
ಅಂಡರ್-19 ಕ್ಯಾಪ್ಟನ್ಗೆ ತಂಡದ ನಾಯಕತ್ವ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಗಸ್ಟ್ 24 ರ ಗುರುವಾರದಂದು ಈ ಕ್ರೀಡಾಕೂಟಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕಾಸಿಂ ಅಕ್ರಂ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಕಳೆದ ವರ್ಷ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಖಾಸಿಂ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. ಇತ್ತೀಚೆಗಷ್ಟೇ ಅವರು ಎಮರ್ಜಿಂಗ್ ಏಷ್ಯಾಕಪ್‌ನಲ್ಲೂ ತಂಡದಲ್ಲಿದ್ದರು. ಅಲ್ಲಿ ಫೈನಲ್ ಪಂದ್ಯದಲ್ಲಿ ಯುವ ಭಾರತವನ್ನು ಮಣಿಸಿದ ಪಾಕಿಸ್ತಾನ ತಂಡ ಎಮರ್ಜಿಂಗ್ ಏಷ್ಯಾಕಪ್ ಎತ್ತಿಹಿಡಿದಿತ್ತು.
ಪಾಕ್ ತಂಡದಲ್ಲಿ ಅನುಭವಿ ಪಡೆ
ಇನ್ನು ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಆಟಗಾರರನ್ನು ನೋಡುವುದದಾರೆ.. ಆಸಿಫ್ ಅಲಿ ಪಾಕಿಸ್ತಾನದ ತಂಡದಲ್ಲಿ ಆಯ್ಕೆಯಾಗಿರುವ ಅತ್ಯಂತ ಅನುಭವಿ ಆಟಗಾರನಾಗಿದ್ದಾರೆ. ಅವರು ಪಾಕಿಸ್ತಾನ ಪರ ಸತತ ಎರಡು ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಅಲ್ಲದೆ 21 ಏಕದಿನ ಮತ್ತು 55 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವರಲ್ಲದೆ ದಹಾನಿ, ಹಸ್ನೈನ್, ಉಸ್ಮಾನ್ ಖಾದಿರ್, ಖುಷ್ದಿಲ್ ಶಾ, ಹೈದರ್ ಅಲಿ, ಅಮೀರ್ ಜಮಾಲ್ ಮತ್ತು ಅರ್ಷದ್ ಇಕ್ಬಾಲ್ ಕೂಡ ಪಾಕಿಸ್ತಾನ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಪಾಕಿಸ್ತಾನ ತಂಡ
ಖಾಸಿಮ್ ಅಕ್ರಂ (ನಾಯಕ), ಒಮೈರ್ ಬಿನ್ ಯೂಸುಫ್, ಅಮೀರ್ ಜಮಾಲ್, ಅರಾಫತ್ ಮಿನ್ಹಾಸ್, ಅರ್ಷದ್ ಇಕ್ಬಾಲ್, ಆಸಿಫ್ ಅಲಿ, ಹೈದರ್ ಅಲಿ, ಖುಷ್ದಿಲ್ ಶಾ, ಮಿರ್ಜಾ ತಾಹಿರ್ ಬೇಗ್, ಮೊಹಮ್ಮದ್ ಹಸ್ನೇನ್, ಮುಹಮ್ಮದ್ ಅಖ್ಲಾಕ್ (ವಿಕೆಟ್ ಕೀಪರ್), ರೋಹೈಲ್ ನಜೀರ್, ಸುಫಿಯನ್ ದಕಿ, ಸುಫಿಯಾನ್, ಉಸ್ಮಾನ್ ಖಾದಿರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 am, Fri, 25 August 23