ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ನ್ಯೂಯಾರ್ಕ್ ಟೈಮ್ಸ್​​ನ ಕಾರ್ಟೂನ್

2014 ರಲ್ಲಿ ಭಾರತವು ಮಂಗಳಯಾನ ಮಿಷನ್ ಅಡಿಯಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳವನ್ನು ತಲುಪಿದ ಮೊದಲ ರಾಷ್ಟ್ರವಾಗಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಸೆಪ್ಟೆಂಬರ್ 2014 ಐತಿಹಾಸಿಕ ಕ್ಷಣವಾಗಿತ್ತು. ರೋಸ್ಕಾಸ್ಮಾಸ್ (ರಷ್ಯಾ), ನಾಸಾ (ಯುಎಸ್ಎ) ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (22 ಯುರೋಪಿಯನ್ ಸದಸ್ಯ ರಾಷ್ಟ್ರಗಳು) ನಂತರ ಮಂಗಳಯಾನ (ಮಾರ್ಸ್ ಆರ್ಬಿಟರ್) ನೊಂದಿಗೆ ಮಂಗಳವನ್ನು ತಲುಪಿದ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಭಾರತದ ಇಸ್ರೋ ಆಗಿದೆ.

ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ನ್ಯೂಯಾರ್ಕ್ ಟೈಮ್ಸ್​​ನ ಕಾರ್ಟೂನ್
ನ್ಯೂಯಾರ್ಕ್ ಟೈಮ್ಸ್ ಕಾರ್ಟೂನ್
Follow us
|

Updated on: Aug 23, 2023 | 8:46 PM

ಬೆಂಗಳೂರು ಆಗಸ್ಟ್ 23: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬೆನ್ನಲ್ಲೇ ನಿವೃತ್ತ ಮೇಜರ್ ಗೌರವ್ ಆರ್ಯ ಅವರು ನ್ಯೂಯಾರ್ಕ್ ಟೈಮ್ಸ್ ನಲ್ಲಿ (The New York Times )ಪ್ರಕಟವಾದ ನಿವೃತ್ತ ಕಾರ್ಟೂನ್ (Cartoon) ಒಂದನ್ನು ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಗೆ ಧನ್ಯವಾದಗಳು. ಜನಾಂಗೀಯ ನಿಂದನೆ ಮತ್ತು ಅಪಹಾಸ್ಯಕ್ಕೆ ಧನ್ಯವಾದಗಳು. ನಮ್ಮ ಸಾಮರ್ಥ್ಯಗಳನ್ನು ಅನುಮಾನಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮನ್ನು ನೋಡಿ ನಕ್ಕಿದ್ದಕ್ಕೆ ಧನ್ಯವಾದಗಳು. ಇಂದು ನಾವು ಬಾಗಿಲು ತಟ್ಟಲಿಲ್ಲ. ಇಂದು ನಾವು ಬಾಗಿಲನ್ನು ತುಳಿದು ತೆಗೆದಿದ್ದೇವೆ. ಈಗ ಹೋಗಿ ಹೊಸ ಕಾರ್ಟೂನ್ ಬಿಡಿಸಿ. ಹೋಗಿ ಎಂದು ಟ್ವೀಟ್ ನಲ್ಲಿದೆ.

ಅಂದಹಾಗೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಈ ಕಾರ್ಟೂನ್ 2014ರದ್ದು.

2014 ರಲ್ಲಿ ಭಾರತವು ಮಂಗಳಯಾನ ಮಿಷನ್ ಅಡಿಯಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳವನ್ನು ತಲುಪಿದ ಮೊದಲ ರಾಷ್ಟ್ರವಾಗಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಸೆಪ್ಟೆಂಬರ್ 2014 ಐತಿಹಾಸಿಕ ಕ್ಷಣವಾಗಿತ್ತು. ರೋಸ್ಕಾಸ್ಮಾಸ್ (ರಷ್ಯಾ), ನಾಸಾ (ಯುಎಸ್ಎ) ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (22 ಯುರೋಪಿಯನ್ ಸದಸ್ಯ ರಾಷ್ಟ್ರಗಳು) ನಂತರ ಮಂಗಳಯಾನ (ಮಾರ್ಸ್ ಆರ್ಬಿಟರ್) ನೊಂದಿಗೆ ಮಂಗಳವನ್ನು ತಲುಪಿದ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಭಾರತದ ಇಸ್ರೋ ಆಗಿದೆ. ಅಂದಾಜು 450 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳಯಾನ ಸಾಧ್ಯವಾಗಿತ್ತು.

ಈ ಹೊತ್ತಲ್ಲಿ ನ್ಯೂಯಾರ್ಕ್ ಟೈಮ್ಸ್ ಒಂದು ಕಾರ್ಟೂನ್ ಪ್ರಕಟಿಸಿದ್ದು, ಇದಕ್ಕೆ ಭಾರತೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಟೂನ್‌ನಲ್ಲಿ, ಧೋತಿ, ಪೇಟವನ್ನು ಧರಿಸಿ, ಪಕ್ಕದಲ್ಲಿ ಎಮ್ಮೆಯನ್ನು ಹಿಡಿದಿರುವ ಬರಿಗಾಲಿನ ವ್ಯಕ್ತಿ ‘ಎಲೈಟ್ ಸ್ಪೇಸ್ ಕ್ಲಬ್’ನ ಬಾಗಿಲು ಬಡಿಯುತ್ತಿರುವ ಚಿತ್ರವಾಗಿತ್ತು ಅದು. ಇದು ಬರೀ ಲೇವಡಿ ಮಾತ್ರವಲ್ಲ ಜನಾಂಗೀಯ ನಿಂದನೆ ಎಂದುಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನ್ಯೂಯಾರ್ಕ್ ಟೈಮ್ಸ್ ಕ್ಷಮೆಯಾಚಿಸಿತ್ತು.

ಇದನ್ನೂ ಓದಿ: Chandrayaan 3 Success: ಸೋಮನಾಥ್ ಅವರೇ ಚಂದ್ರನ ಜತೆ ನಿಮ್ಮ ಹೆಸರೂ ಸೇರಿಕೊಂಡಿದೆ, ಜತೆಗೆ ಭಾರತೀಯರದ್ದೂ; ಪ್ರಧಾನಿ ಮೋದಿ ಅಭಿನಂದನೆ

ಕ್ಷಮಾಪಣೆ ಹೀಗಿತ್ತು

ಬಾಹ್ಯಾಕಾಶ ಸಂಶೋಧನೆಯಲ್ಲಿ  ಭಾರತದ ಮುನ್ನುಗ್ಗುವಿಕೆಯ ಬಗ್ಗೆ ದ ಇಂಟರ್‌ನ್ಯಾಶನಲ್ ನ್ಯೂಯಾರ್ಕ್ ಟೈಮ್ಸ್‌ನಲ್ಲಿನ ಇತ್ತೀಚಿನ ಸಂಪಾದಕೀಯ ಕಾರ್ಟೂನ್ ಬಗ್ಗೆ ಹೆಚ್ಚಿನ ಸಂಖ್ಯೆಯ ಓದುಗರು ದೂರಿದ್ದಾರೆ, ವ್ಯಂಗ್ಯಚಿತ್ರಕಾರ ಹೆಂಗ್ ಕಿಮ್ ಸಾಂಗ್ ಅವರ ಉದ್ದೇಶವು ಬಾಹ್ಯಾಕಾಶ ಪರಿಶೋಧನೆಲ್ಲಿ ಶ್ರೀಮಂತ ದೇಶಗಳಷ್ಟೇ ಅಲ್ಲ ಇರುವುದು ಎಂಬುದನ್ನು ಎತ್ತಿ ತೋರಿಸುತ್ತದೆ. ಸಿಂಗಾಪುರದಲ್ಲಿ ನೆಲೆಸಿರುವ  ಹೆಂಗ್, ಅಂತರರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಅವಲೋಕನಗಳನ್ನು ಮಾಡಲು ಚಿತ್ರಗಳು ಮತ್ತು ಪಠ್ಯವನ್ನು ಆಗಾಗ್ಗೆ ಪ್ರಚೋದನಕಾರಿ ರೀತಿಯಲ್ಲಿ ಬಳಸುತ್ತಾರೆ. ಈ ಕಾರ್ಟೂನ್‌ನಲ್ಲಿನ ಚಿತ್ರಗಳ ಆಯ್ಕೆಯಿಂದ ಬೇಸರವಾಗಿರುವ ಓದುಗರಲ್ಲಿ ನಾವು ಕ್ಷಮೆಯಾಚಿಸುತ್ತೇವೆ.ಹೇಗ್ ಅವರು ಭಾರತವನ್ನು, ಅದರ ಸರ್ಕಾರವನ್ನು ಅಥವಾ ಅದರ ನಾಗರಿಕರನ್ನು ಯಾವುದೇ ರೀತಿಯಲ್ಲಿ ಲೇವಡಿ ಮಾಡಲು ಪ್ರಯತ್ನಿಸುತ್ತಿಲ್ಲ. ಓದುಗರು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ ಎಂದು ನಾವು ಪ್ರಶಂಸಿಸುತ್ತೇವೆ, ಅದನ್ನು ನಾವು ಸ್ವಾಗತಿಸುತ್ತೇವೆ – ಆಂಡ್ರ್ಯೂ ರೊಸೆಂತಾಲ್, ಸಂಪಾದಕೀಯ ಪುಟ ಸಂಪಾದಕ ಎಂದು ನ್ಯೂಯಾರ್ಕ್ ಟೈಮ್ಸ್ ಕ್ಷಮಾಪಣೆ ಪ್ರಕಟಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ