ಭಾರತದ ಚಂದ್ರಯಾನ ಬಗ್ಗೆ ಕೊಂಕು ನುಡಿದ ಬಿಬಿಸಿ ಆಂಕರ್; ಆನಂದ್ ಮಹೀಂದ್ರಾ ಖಡಕ್ ಪ್ರತಿಕ್ರಿಯೆ

ಕೆಲವರು ಈ ಬಗ್ಗೆ ಯೋಚಿಸುತ್ತಿರುವ ಕಾರಣ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಭಾರತ, ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿರುವ ದೇಶ, ಸಾಕಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ 700 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರಿಗೆ ಶೌಚಾಲಯವಿಲ್ಲ. ನಿಜವಾಗಿಯೂ ಅವರು ಈ ರೀತಿಯ ಹಣವನ್ನು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಬೇಕೇ ಎಂದು ಬಿಬಿಸಿ ಸುದ್ದಿ ನಿರೂಪಕ ಹೇಳಿದ್ದಾರೆ.

ಭಾರತದ ಚಂದ್ರಯಾನ ಬಗ್ಗೆ ಕೊಂಕು ನುಡಿದ ಬಿಬಿಸಿ ಆಂಕರ್; ಆನಂದ್ ಮಹೀಂದ್ರಾ ಖಡಕ್ ಪ್ರತಿಕ್ರಿಯೆ
ಆನಂದ್ ಮಹೀಂದ್ರ
Follow us
|

Updated on:Aug 24, 2023 | 2:10 PM

ದೆಹಲ ಆಗಸ್ಟ್ 24: ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಹಣವನ್ನು ಖರ್ಚು ಮಾಡಬೇಕೇ ಎಂಬ ಬಿಬಿಸಿ ಆ್ಯಂಕರ್‌ನ(BBC anchor) ಪ್ರಶ್ನೆಗೆ ಮಹೀಂದ್ರಾ ಗ್ರೂಪ್ (Mahindra Group) ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಗುರುವಾರ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಬಡವರು, 700 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರಿಗೆ ಶೌಚಾಲಯವಿಲ್ಲ ಎಂದ ಬಿಬಿಸಿ ನಿರೂಪಕ ಹೇಳಿದ್ದಾರೆ.

ಕೆಲವರು ಈ ಬಗ್ಗೆ ಯೋಚಿಸುತ್ತಿರುವ ಕಾರಣ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಭಾರತ, ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿರುವ ದೇಶ, ಸಾಕಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ 700 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರಿಗೆ ಶೌಚಾಲಯವಿಲ್ಲ. ನಿಜವಾಗಿಯೂ ಅವರು ಈ ರೀತಿಯ ಹಣವನ್ನು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಬೇಕೇ ಎಂದು ಬಿಬಿಸಿ ಸುದ್ದಿ ನಿರೂಪಕ ಹೇಳಿದ್ದಾರೆ. BBC ವಿಡಿಯೊ ಇರುವ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಹೀಂದ್ರಾ “ಹೌದಾ? ಸತ್ಯವೆಂದರೆ, ದಶಕಗಳ ವಸಾಹತುಶಾಹಿ ಆಳ್ವಿಕೆಯ ಪರಿಣಾಮವಾಗಿ ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದರಿಂದ ಬಡತನ ಬಂದಿದ್ದು. ಆದರೂ ನಮ್ಮಿಂದ ದೋಚಲಾದ ಅತ್ಯಮೂಲ್ಯ ಆಸ್ತಿ ಕೊಹಿನೂರ್ ವಜ್ರವಲ್ಲ, ನಮ್ಮ ಹೆಮ್ಮೆ ಮತ್ತು ನಮ್ಮ ಸ್ವಂತ ಸಾಮರ್ಥ್ಯಗಳ ಮೇಲಿನ ನಂಬಿಕೆ.

ಏಕೆಂದರೆ ವಸಾಹತುಶಾಹಿಯ ಗುರಿ ಎಂದರೆ ಅದರ ಸಂತ್ರಸ್ತರಿಗೆ ಅವರ ಕೀಳರಿಮೆಯನ್ನು ಮನವರಿಕೆ ಮಾಡುವುದು. ಅದಕ್ಕಾಗಿಯೇ ಶೌಚಾಲಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ. ಸರ್, ಚಂದ್ರನಿಗೆ ಹೋಗುವುದು ನಮಗೆ ಏನು ಮಾಡುತ್ತದೆ ಎಂದರೆ ಅದು ನಮ್ಮ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನದ ಮೂಲಕ ಪ್ರಗತಿಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಇದು ನಮ್ಮನ್ನು ಬಡತನದಿಂದ ಹೊರತರುವ ಆಕಾಂಕ್ಷೆಯನ್ನು ನೀಡುತ್ತದೆ. ದೊಡ್ಡ ಬಡತನವೆಂದರೆ ಆಕಾಂಕ್ಷೆಯ ಬಡತನ ಎಂದು ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ರಷ್ಯಾ, ಯುಎಸ್ ಮತ್ತು ಚೀನಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇದನ್ನೂ ಓದಿ: ‘ಮತ ಚಲಾಯಿಸುವಾಗ ಜೈ ಬಜರಂಗ ಬಲಿ ಎಂದು ಇವಿಎಂ ಗುಂಡಿ ಒತ್ತಿ’; ಮೋದಿ ಹೇಳಿಕೆಗೆ ಪಂಜಾಬ್​​ನಲ್ಲಿ ದೂರು

ಏತನ್ಮಧ್ಯೆ, ಚಂದ್ರಯಾನ-3, ರೂ 600 ಕೋಟಿ ಮೌಲ್ಯದ ಮಿಷನ್ ಅನ್ನು ಜುಲೈ 14 ರಂದು ಲಾಂಚ್ ವೆಹಿಕಲ್ ಮಾರ್ಕ್-III (LVM-3) ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಯು 41 ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಗುರಿಯನ್ನು ಹೊಂದಿತ್ತು. ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆಯ ಇತ್ತೀಚಿನ ವೈಫಲ್ಯದ ಹೊರತಾಗಿಯೂ ಇದು ಯಶಸ್ವಿಯಾಯಿತು. ಲ್ಯಾಂಡರ್ ವಿಕ್ರಮ್ ಮತ್ತು 26 ಕೆಜಿ ತೂಕದ ರೋವರ್ ಪ್ರಗ್ಯಾನ್ ಅನ್ನು ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಬುಧವಾರ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಲ್ಯಾಂಡರ್ ಮತ್ತು ರೋವರ್, ಒಟ್ಟು 1,752 ಕೆಜಿ ತೂಕವನ್ನು ಹೊಂದಿದ್ದು, ಸರಿಸುಮಾರು 14 ಭೂಮಿಯ ದಿನಗಳವರೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Thu, 24 August 23

ತಾಜಾ ಸುದ್ದಿ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ