2024ರ ಚುನಾವಣೆಗೆ ಮುಂಚಿತವಾಗಿ ಹೊಸ ಅಪ್ಲಿಕೇಶನ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು ಬಿಜೆಪಿ ಸಿದ್ಧತೆ

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದಲ್ಲಿ ಹೆಚ್ಚಿವೆ. ಇದರ ಪರಿಣಾಮವಾಗಿ, ಭಾರತದಾದ್ಯಂತ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿನ ನಾಗರಿಕರನ್ನು ಓಲೈಸಲು ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರೀಕರಿಸಲು ತನ್ನ ಸಾಮಾಜಿಕ ಮಾಧ್ಯಮ ಕಾರ್ಯತಂತ್ರವನ್ನು ನವೀಕರಿಸಲು ಪಕ್ಷ ನಿರ್ಧರಿಸಿದೆ.

2024ರ ಚುನಾವಣೆಗೆ ಮುಂಚಿತವಾಗಿ ಹೊಸ ಅಪ್ಲಿಕೇಶನ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯತಂತ್ರವನ್ನು  ರೂಪಿಸಲು ಬಿಜೆಪಿ ಸಿದ್ಧತೆ
ಬಿಜೆಪಿ
Follow us
|

Updated on:Aug 24, 2023 | 7:10 PM

ದೆಹಲಿ ಆಗಸ್ಟ್ 24: 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ(General Elections) ಬಿಜೆಪಿ (BJP) ಗೆಲುವಿನಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೂ ಹೆಚ್ಚು ಇತ್ತು. ಇದೀಗ ಆಡಳಿತ ಪಕ್ಷವು ಈಗ 2024 ರ ಚುನಾವಣೆಗಳಿಗೆ ಮುಂಚಿತವಾಗಿ ತನ್ನ ಸಾಮಾಜಿಕ ಮಾಧ್ಯಮದ ಉಪಸ್ಥಿತಿಯನ್ನು ಅನೇಕ ವೇದಿಕೆಗಳಲ್ಲಿ ಚುರುಕುಗೊಳಿಸಲು ಸಿದ್ಧವಾಗಿದೆ. ಸಣ್ಣ ನಗರಗಳಲ್ಲಿನ ಹೊಸ ಆ್ಯಪ್ ಗಳೊಂದಿಗೆ ಜನರನ್ನು ತಲುಪಲು ಇದು ಸಿದ್ಧತೆ ನಡೆಸಿದೆ. ಪಕ್ಷದ ಕಾರ್ಯಕರ್ತರು ಮತ್ತು ಜನರೊಂದಿಗೆ ಸಂವಹನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಕನಿಷ್ಠ ಎರಡು ಹೊಸ ಅಪ್ಲಿಕೇಶನ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಸೈದ್ಧಾಂತಿಕ ಪರಿಗಣನೆಗಳು ಅಥವಾ ಪಕ್ಷದ ಆದ್ಯತೆಗಳಿಗೆ ಬದ್ಧವಾಗಿರದ ಮತದಾರರಿಗೆ ಎರಡು ಅಪ್ಲಿಕೇಶನ್‌ಗಳಲ್ಲಿನ ವಿಷಯವು ತಲುಪುವ ನಿರೀಕ್ಷೆಯಿದೆ.

ಈ ಅಪ್ಲಿಕೇಶನ್‌ಗಳು ಪಕ್ಷ ಮತ್ತು ಕಾರ್ಯಕರ್ತರ ನಡುವೆ ಮತ್ತು ಪಕ್ಷ ಮತ್ತು ಮತದಾರರ ನಡುವೆ ಸಂವಹನವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಈ ಎರಡೂ ವಿಭಾಗಗಳಿಗೆ ವಿಭಿನ್ನ ವಿಧಾನದ ಅಗತ್ಯವಿದೆ, ಆದ್ದರಿಂದ ಅಪ್ಲಿಕೇಶನ್‌ಗಳ ವಿಭಾಗೀಕರಣ ಮತ್ತು ಸಂವಹನ ತಂತ್ರವನ್ನು ರೂಪಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದಲ್ಲಿ ಹೆಚ್ಚಿವೆ. ಇದರ ಪರಿಣಾಮವಾಗಿ, ಭಾರತದಾದ್ಯಂತ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿನ ನಾಗರಿಕರನ್ನು ಓಲೈಸಲು ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರೀಕರಿಸಲು ತನ್ನ ಸಾಮಾಜಿಕ ಮಾಧ್ಯಮ ಕಾರ್ಯತಂತ್ರವನ್ನು ನವೀಕರಿಸಲು ಪಕ್ಷ ನಿರ್ಧರಿಸಿದೆ.

ಭಾರತವು ಪ್ರಸ್ತುತ 759 ಮಿಲಿಯನ್ ಸಕ್ರಿಯ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಸಕ್ರಿಯ ಇಂಟರ್ನೆಟ್ ಹೊಂದಿರುವವರ ಸಂಖ್ಯೆ 2025 ರ ವೇಳೆಗೆ 900 ಮಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ. ಇದರರ್ಥ ಹೆಚ್ಚಿನ ಸಂಖ್ಯೆಯ ಭಾರತೀಯರು ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ.

2024ರಲ್ಲಿ, ನಾವು ಹೊಸ ಯುಗದ ಜನರೊಂದಿಗೆ ವ್ಯವಹರಿಸಬೇಕು. ಇದಕ್ಕಾಗಿ ಹೊಸ ವಿಧಾನದ ಅಗತ್ಯವಿದೆ, ಏಕೆಂದರೆ ಸಾಕ್ಷರತೆಯ ಮಟ್ಟಗಳು ಮತ್ತು ಡಿಜಿಟಲ್ ವ್ಯಾಪ್ತಿಯ ಒಳಹೊಕ್ಕು ಎರಡೂ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಚುನಾವಣೆಯು ತಂತ್ರಜ್ಞಾನದ ನಿಜವಾದ ಪರೀಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ.

2014 ರಲ್ಲಿ, 543 ಸ್ಥಾನಗಳಲ್ಲಿ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಅಧಿಕಾರಕ್ಕೆ ಬಂದಾಗ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜನಸಾಮಾನ್ಯರೊಂದಿಗೆ, ವಿಶೇಷವಾಗಿ ಯುವಜನರೊಂದಿಗೆ ತೊಡಗಿಸಿಕೊಳ್ಳುವಲ್ಲಿ ಅದು ತನ್ನ ರಾಜಕೀಯ ಪ್ರತಿಸ್ಪರ್ಧಿಗಳಿಗಿಂತ ಮುಂದಿತ್ತು. ಪಕ್ಷವು ಜನಪ್ರಿಯ ವೇದಿಕೆಗಳಲ್ಲಿ ಪ್ರಚಾರವನ್ನು ನಡೆಸಿದ್ದು, ಮೊಬೈಲ್ ಸಂವಹನದ ಮೂಲಕ ದೂರದ ಪ್ರದೇಶಗಳಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಿತ್ತು.

ಇದನ್ನೂ ಓದಿ: ತಾನಿನ್ನೂ ಬಿಜೆಪಿ ಶಾಸಕನೆಂದು ಹೇಳುವ ಸೋಮಶೇಖರ್ ಅವರಲ್ಲಿ ಪಕ್ಷದ ಬಗ್ಗೆ ಅಸಮಾಧಾನ ಮಡುಗಟ್ಟಿದೆ!

ಪ್ರಭಾವವನ್ನು ಸಂಖ್ಯಾತ್ಮಕವಾಗಿ ಅಳೆಯಲು ಸಾಧ್ಯವಾಗದಿದ್ದರೂ, ಈ ರೀತಿಯ ಸಂವಹನವು ಒಟ್ಟಾರೆ 30-40% ಸೀಟುಗಳಲ್ಲಿ ಪ್ರಭಾವ ಬೀರಿದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, 2019 ರ ವೇಳೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಬೆಳೆದ ಪ್ರೇಕ್ಷಕರನ್ನು ಪೂರೈಸುವ ಯೋಜನೆಯೊಂದಿಗೆ ಬಿಜೆಪಿ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. 2019 ರಲ್ಲಿ 303 ಸ್ಥಾನಗಳನ್ನು ಗಳಿಸಿ ಬಿಜೆಪಿಯು ಕೇಂದ್ರದಲ್ಲಿ ದೊಡ್ಡ ಅಧಿಕಾರವನ್ನು ಉಳಿಸಿಕೊಂಡಿತು. ಇಲ್ಲಿಯೂ ವರ್ಕೌಟ್ ಆಗಿದ್ದು ಸಾಮಾಜಿಕ ಮಾಧ್ಯಮ ತಂತ್ರ.

2024 ರಲ್ಲಿ, ಸಾಮಾಜಿಕ ಮಾಧ್ಯಮದ ಮಾನ್ಯತೆಯಿಂದ 140-160 ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷ ನಿರೀಕ್ಷಿಸುತ್ತದೆ.

ಆದರೆ ಈ ಬಾರಿ, ಇತರ ರಾಜಕೀಯ ಪಕ್ಷಗಳು ಸಹ ತಮ್ಮ ಸಾರ್ವಜನಿಕ ಸಂಪರ್ಕದ ಭಾಗವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳತ್ತ ಮುಖಮಾಡಿರುವುದರಿಂದ ಮುಂದೆ ಉಳಿಯಲು ಕಾರ್ಯತಂತ್ರವನ್ನು ಸುಧಾರಿಸುವ ಅಗತ್ಯವನ್ನು ಬಿಜೆಪಿ ಭಾವಿಸಿದಂತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Thu, 24 August 23

ತಾಜಾ ಸುದ್ದಿ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ