ಡಾಕ್ಟರ್ ಆಗಿ ಬದಲಾದ ಬೇವಿನಮರ: ನಂಜು, ವಿಷಕ್ಕೆ ಬೇವಿನ ಮರದ ರಸವೇ ರಾಮಬಾಣ
ಆಯುರ್ವೇದ ಚಿಕಿತ್ಸೆಯಲ್ಲಿ, ಬೇವಿನಮರಕ್ಕೆ ಒಂದು ವಿಶೇಷ ಸ್ಥಾನವಿದೆ. ನಮ್ಮ ದೇಶದ ಕೆಲ ಹಬ್ಬಗಳಲ್ಲಿ ಬೇವು ಬೆಲ್ಲ ಕೊಡುವುದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಬೇವಿನಸೊಪ್ಪನ್ನು ಬಿಸಿ ನೀರಲ್ಲಿ ಹಾಕಿ ತಲೆಸ್ನಾನ ಮಾಡುವ ಧಾರ್ಮಿಕ ಪದ್ಧತಿಯನ್ನು ಕಂಡಿದ್ದೇವೆ. ಅದು ಇಂದಿಗೂ ಮುಂದುವರೆಯುತ್ತ ಸಾಗುತ್ತಿದೆ. ಇದಕ್ಕೆ ಕಾರಣ ಕೇವಲ ಹಬ್ಬ ಆಚರಣೆ ಅಷ್ಟೇ ಅಲ್ಲ, ಅದರಲ್ಲಿನ ಔಷಧಿ ಗುಣದ ಮಹಿಮೆ. ಇಲ್ಲಿನ ಬೇವಿನಮರದ ರಸ ಈಗ ಹತ್ತಾರು ಗ್ರಾಮಸ್ಥರಿಗೆ ವೈದ್ಯನಾಗಿದೆ ಅದರ ರಸ ಕುಡಿದರೆ ಸಾಕು ನಂಜು,ವಿಷ ,ನೋವು ಎಲ್ಲವೂ ಮಾಯವಾಗುತ್ತದೆ.
ಬಾಗಲಕೋಟೆ: ಆಯುರ್ವೇದಕ್ಕೆ ನಮ್ಮ ಭಾರತೀಯ ಪರಂಪರೆಯಲ್ಲಿ ಒಂದು ಮಹತ್ವ ಪೂರ್ಣವಾದ ಸ್ಥಾನವಿದೆ. ಬಹಳ ಪುರಾತನ ಕಾಲದಿಂದಲೂ ಭಾರತೀಯರು ಆಯುರ್ವೇದ ಚಿಕಿತ್ಸೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಬಂದವರು. ಇನ್ನು ನಮ್ಮ ದೇಶದ ಆಯುರ್ವೇದ ಮಹಿಮೆ ಎಂತಹದ್ದು ಎನ್ನುವುದಕ್ಕೆ ಧನ್ವಂತರಿ ಪ್ರಮುಖ ಉದಾಹರಣೆ. ಯಾವುದೇ ಕಾಯಿಲೆ ಬಂದರೂ ನಮ್ಮ ಋಷಿಮುನಿಗಳು ಆಯುರ್ವೇದ ಚಿಕಿತ್ಸೆಯಿಂದ ಗುಣ ಮಾಡಿದ ಹಲವಾರು ಉದಾಹರಣೆಗಳಿದ್ದು, ಇಂದಿಗೂ ಆಧುನಿಕ ಮೆಡಿಸಿನ್ ಮೂಲಕ ವಾಸಿಯಾಗದ ಕೆಲವೊಂದಿಷ್ಟು ಕಾಯಿಲೆಗಳನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಿದ್ದಾರೆ.
ನಮ್ಮ ಸುತ್ತಮುತ್ತಲಲ್ಲಿ ಸಿಗುವ ಗಿಡಮರ, ಹೂ ಬಳ್ಳಿ, ಸೊಪ್ಪಿನಲ್ಲೇ ರೋಗನಿರೋಧಕ ಶಕ್ತಿ ಇದ್ದು, ಅದರಲ್ಲಿ ಬೇವಿನ ಮರ ಕೂಡ ಒಂದು. ಅದರಂತೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಬ್ಬೇರಕೊಪ್ಪ ಗ್ರಾಮದಲ್ಲಿ ಒಂದು ಬೇವಿನಮರವಿದ್ದು, ಆ ಮರ ಗುಬ್ಬೇರಕೊಪ್ಪ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಡಾಕ್ಟರ್ ಆಗಿದೆ. ತನ್ನ ಬಳಿ ಕಾಯಿಲೆ ಎಂದು ಬಂದವರನ್ನು ಗುಣಮುಖ ಮಾಡಿ ಕಳಿಸುತ್ತಿದೆ ಈ ಬೇವಿನ ಮರ.
ಇದು ಮರವಲ್ಲ ಮದ್ದು: ಹೌದು ಆಯುರ್ವೇದ ಚಿಕಿತ್ಸೆಯಲ್ಲಿ, ಬೇವಿನಮರಕ್ಕೆ ಒಂದು ವಿಶೇಷ ಸ್ಥಾನವಿದೆ. ನಮ್ಮ ದೇಶದ ಕೆಲ ಹಬ್ಬಗಳಲ್ಲಿ ಬೇವು ಬೆಲ್ಲ ಕೊಡುವುದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಬೇವಿನಸೊಪ್ಪನ್ನು ಬಿಸಿ ನೀರಲ್ಲಿ ಹಾಕಿ ತಲೆಸ್ನಾನ ಮಾಡುವ ಧಾರ್ಮಿಕ ಪದ್ಧತಿಯನ್ನು ಕಂಡಿದ್ದೇವೆ. ಅದು ಇಂದಿಗೂ ಮುಂದುವರೆಯುತ್ತ ಸಾಗುತ್ತಿದೆ. ಇದಕ್ಕೆ ಕಾರಣ ಕೇವಲ ಹಬ್ಬ ಆಚರಣೆ ಅಷ್ಟೇ ಅಲ್ಲ, ಅದರಲ್ಲಿನ ಔಷಧಿ ಗುಣದ ಮಹಿಮೆ. ಇಲ್ಲಿನ ಬೇವಿನಮರದ ರಸ ಈಗ ಹತ್ತಾರು ಗ್ರಾಮಸ್ಥರಿಗೆ ವೈದ್ಯನಾಗಿದೆ ಅದರ ರಸ ಕುಡಿದರೆ ಸಾಕು ನಂಜು,ವಿಷ ,ನೋವು ಎಲ್ಲವೂ ಮಾಯವಾಗುತ್ತದೆ.
ನಂಜು ನಿವಾರಣೆಗೆ ಗಿಡದ ರಸವೇ ಔಷಧ: ಯಾವುದೆ ವ್ಯಕ್ತಿಗೆ ನಾಯಿ, ಬೆಕ್ಕು, ಹಂದಿ, ಹಾವು, ಕಚ್ಚಿದರೆ ಅದಕ್ಕೆಲ್ಲ ದಿವ್ಯ ಔಷಧ ಈ ಬೇವಿನಮರದ ರಸ. ಗ್ರಾಮದ ಮಾರುತಿ ದೇವರ ಮುಂದಿನ ಬೇವಿನಮರದ ರಸವೇ ರಾಮಬಾಣವಾಗಿದ್ದು, ಮಾರುತಿ ದೇವರ ಪೂಜಾರಿ ಪ್ರತಿ ರವಿವಾರ ಕೊಡುವ ಬೇವಿನ ರಸವನ್ನು ಕುಡಿದರೆ ಯಾರಿಗೂ ನಂಜಾಗುವುದಿಲ್ಲ, ಗಾಯವಾದ ಸ್ಥಳಕ್ಕೆ ಬೇವಿನ ರಸ ಮತ್ತು ಸೊಪ್ಪನ್ನು ಹಚ್ಚಿಕೊಂಡರೆ ನೋವು ವಾಸಿಯಾಗುತ್ತದೆ. ನಂಜಾದರೆ ರಸ ಕುಡಿಯುವುದು, ಕಚ್ಚಿದ ಗಾಯಕ್ಕೆ ರಸ ಲೇಪನ ಮಾಡಿದರೆ ನೋವು ಮಾಯವಾಗುತ್ತದೆ ಹೀಗೆ ಹಲವು ನಂಬಿಕೆಗಳಿಗೆ ಈ ಬೇವಿನಮರ ಸಾಕ್ಷಿಯಾಗಿದೆ. ಪ್ರತಿ ರವಿವಾರ ಇಲ್ಲಿ ವಿವಿಧ ಹಳ್ಳಿಗಳಿಂದ ಗಾಯಾಳುಗಳು ಬಂದು ಇಲ್ಲಿ ಕೊಡುವ ಬೇವಿನ ರಸ ಕುಡಿದು ಹೋಗುತ್ತಾರೆ. ಆ ಮರ ಅಲ್ಲಿಗೆ ಬಂದ ಜನರಿಗೆ ವೈದ್ಯರಿದ್ದಂತೆ, ತನ್ನನ್ನು ನಂಬಿ ಬಂದ ಜನರನ್ನು ಆ ಮರ ಎಂದಿಗೂ ಕೈಬಿಟ್ಟಿಲ್ಲ. ಇದರಿಂದ ಆ ಮರ ಎಂದರೆ ಎಲ್ಲರಿಗೂ ವಿಶೇಷಭಕ್ತಿ ಮತ್ತು ಅಭಿಮಾನ. ಬಡ ಜನರಿಗೆ ಗ್ರಾಮದ ಈ ಮರ ಈಗ ಸಂಜೀವಿನಿಯಾಗಿದೆ.
ಈ ಬೇವಿನಮರದ ಮೇಲೆ ಏಕೆ ಇಷ್ಟೊಂದು ನಂಬಿಕೆ? ಅಂದ ಹಾಗೆ ಈ ಮರಕ್ಕೆ ತನ್ನದೆ ಆದ ಇತಿಹಾಸವಿದೆ ನೂರಾರು ವರ್ಷಗಳ ಹಿಂದೆ ಈ ಗ್ರಾಮಕ್ಕೆ ಒಬ್ಬ ಸಾಧು ಬಂದಿದ್ದರಂತೆ. ಗುಬ್ಬೇರುಕೊಪ್ಪ ಗ್ರಾಮದ ಜನ ಆ ಸಾಧು ಅವರಿಗೆ ಆಶ್ರಯ ಕೊಟ್ಟು ನೋಡಿಕೊಂಡಿದ್ದರಂತೆ, ಇದರಿಂದ ಗ್ರಾಮದ ಜನರಿಗೆ ತನ್ನಿಂದ ಏನಾದರೂ ಸಹಾಯ ಮಾಡಬೇಕೆಂದು ಸಾಧು ಅವರು ಮಾರುತಿ ದೇವಸ್ಥಾನದ ಮುಂದೆ ಹಾಲನ್ನು ಎರೆದು ಈ ಬೇವಿನಮರವನ್ನು ನೆಟ್ಟಿದ್ದಾರಂತೆ. ಮರಕ್ಕೆ ತನ್ನ ವಿಶೇಷ ಶಕ್ತಿ ಧಾರೆಯೆರದು ಹೋಗಿದ್ದಾರಂತೆ. ಇದರಿಂದ ಇಲ್ಲಿ ಯಾವುದೆ ನಂಜಿಗೆ ಸಂಬಂಧಿಸಿದ ಗಾಯಾಳುಗಳು ಬಂದರೆ ಈ ಬೇವಿನಮರದ ಎಲೆ, ರಸವೆ ಔಷಧ. ಪ್ರತಿ ರವಿವಾರ ಪೂಜಾರಿ ಇದನ್ನು ಕೊಡುವ ಮುಂಚೆ ಮಾರುತಿ ದೇವರಿಗೆ ಪೂಜೆ ಮಾಡುತ್ತಾರೆ. ನಂತರ ಮರ ಏರಿ ಸೊಪ್ಪನ್ನು ಹರಿದು ರಸ ಮಾಡಿ ಗಾಯಾಳುಗಳಿಗೆ ಕುಡಿಯಲು ಕೊಡುತ್ತಾರೆ.
ಯಾರಿಂದಲೂ ಕೂಡ ಹಣ ಪಡೆಯುವುದಿಲ್ಲ. ಬಂದವರು ತಮಗೆ ತಿಳಿದಷ್ಟು ಹಣ ಅಥವಾ ಪಂಚ ಫಳಾರ ಕೊಡುತ್ತಾರೆ. ಗಾಯಾಳುಗಳು ಮೂರು ರವಿವಾರ ಬೇವಿನ ರಸ ಕುಡಿದು ಮರವನ್ನು ತಿರುಗಿ ನೋಡದೆ ಹೋದರೆ ಗಾಯ ಕೂಡ ಓಡಿಹೋಗುತ್ತದೆ ಎಂಬುದು ಇವರ ನಂಬಿಕೆ. ಆದರೆ ಆ ಸಾಧು ಯಾರು ಎಂದು ಮಾತ್ರ ಗ್ರಾಮಸ್ಥರಿಗೆ ಗೊತ್ತಿಲ್ಲ. ಒಟ್ಟಾರೆ ಈ ಬೇವಿನ ಮರ ಗುಬ್ಬೇರುಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈಗ ಸಂಜೀವಿನಿಯಾಗಿದೆ. ಆಸ್ಪತ್ರೆಗೆ ಎಂದು ಹೋದರೆ ನೂರಾರು ರೂಪಾಯಿ ಹಣ ಕೀಳುವ ವೈದ್ಯರಿಗೆ ಈ ಮರ ಸವಾಲು ಹಾಕಿದೆ. ನಂಬಿಕೆ ಮುಂದೆ ಏನು ಇಲ್ಲ ಎನ್ನುವುದಕ್ಕೆ ಸದ್ಯ ಈ ಮರ ಸಾಕ್ಷಿಯಾಗಿದೆ.
ಕೊರೊನಾ ವಿರುದ್ಧ ಹೋರಾಡಲು ಆಯುರ್ವೇದ ಔಷಧಿಗಳು ಹೆಚ್ಚು ಪರಿಣಾಮಕಾರಿ -AIIA report