ಏರಿಕೆಯಾಗುತ್ತಲೇ ಇದೆ ಅಡುಗೆ ಎಣ್ಣೆ ದರ! ಪ್ರಮುಖ ಕಾರಣ ಇದೇ ನೋಡಿ
ಯುದ್ಧ ಶುರುವಾಗುತ್ತಿದ್ದಂತೆ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ದುಬಾರಿಯಾಗಿತ್ತು. ಆದರೆ ಒಂದೂವರೆ ತಿಂಗಳಾದರೂ ದರ ಇನ್ನೂ ಇಳಿಕೆಯಾಗಿಲ್ಲ. ನಿರಂತರವಾಗಿ ಏರಿಕೆಯಾಗುತ್ತಿದೆ. ಸದ್ಯ ಮದುವೆ ಸೇರಿದಂತೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ.
ಬೆಂಗಳೂರು: ಉಕ್ರೇನ್ – ರಷ್ಯಾ ನಡುವಿನ ಯುದ್ಧ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಎಣ್ಣೆ ದರ (Cooking Oil Price) ಏರಿಕೆಯಾಗಿದೆ. ಯುದ್ಧ ಶುರುವಾಗುತ್ತಿದ್ದಂತೆ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ದುಬಾರಿಯಾಗಿತ್ತು. ಆದರೆ ಒಂದೂವರೆ ತಿಂಗಳಾದರೂ ದರ ಇನ್ನೂ ಇಳಿಕೆಯಾಗಿಲ್ಲ. ನಿರಂತರವಾಗಿ ಏರಿಕೆಯಾಗುತ್ತಿದೆ. ಸದ್ಯ ಮದುವೆ ಸೇರಿದಂತೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ಅನಿವಾರ್ಯವಾಗಿ ದುಬಾರಿ ಬೆಲೆ ಕೊಟ್ಟೇ ಎಣ್ಣೆ ಖರೀದಿಸಬೇಕಾಗಿದೆ.
ಅಡುಗೆ ಎಣ್ಣೆಗಳ ದರ ಹೀಗಿದೆ: ಒಂದು ಕೆಜಿ ಪಾಮ್ ಎಣ್ಣೆಗೆ 168 ರೂ. ರಿಂದ 175 ರೂ. ಇದೆ. ಸನ್ ಫ್ಲವರ್ ಎಣ್ಣೆಗೆ 198 ರೂ. ರಿಂದ 210 ರೂ. ಇದ್ದರೆ, ಕಡಲೆ ಎಣ್ಣೆಗೆ 195 ರೂ. ರಿಂದ – 245 ರೂ. ಇದೆ. ರೈಸ್ ಬ್ರೌನ್ ಎಣ್ಣೆಗೆ 158 ರಿಂದ 165 ರೂ. ಇದೆ. ಜೊತೆಗೆ ಸೋಯಾ ರಿಫೈನ್ಡ್ ಆಯಿಲ್ಗೆ 165 ರಿಂದ 170 ರೂಪಾಯಿ ಇದೆ.
ಬೆಲೆ ಏರಿಕೆಗೆ ಮತ್ತೇನು ಕಾರಣ?: ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕೇವಲ ಉಕ್ರೇನ್- ರಷ್ಯಾ ಯುದ್ಧ ಮಾತ್ರವಲ್ಲ. ಈ ದೇಶವೂ ಬೆಲೆ ಏರಿಕೆಗೆ ಕಾರಣವಾಗಿದೆ. ಇಂಡೋನೇಷ್ಯಾಗೆ ರಫ್ತು ಮಾಡದೇ ಇರುವುದು ಪ್ರಮುಖ ಕಾರಣ. ಉಕ್ರೇನ್ ರಷ್ಯಾ ಯುದ್ಧ ಜೊತೆಗೆ ಈ ದೇಶ ರಫ್ತು ಮಾಡದೇ ಇರುವುದೇ ಕಾರಣವಾಗಿದೆ. ಉಕ್ರೇನ್ಗೆ ನಮ್ಮ ದೇಶ ಶೇ.45ರಷ್ಟು ಪಾಮ್ ಆಯಿಲ್ ರಫ್ತು ಮಾಡುತ್ತಿತ್ತು. ಇಂಡೋನೇಷ್ಯಾಗೆ ಶೇ.37ರಷ್ಟು ಎಣ್ಣೆ ರಫ್ತು ಮಾಡುತ್ತಿತ್ತು. ಆದ್ರೀಗ ಭಾರತ ದೇಶಕ್ಕೆ ರಫ್ತು ಸ್ಥಗಿತ ಮಾಡಿದ ಪರಿಣಾಮ ಇನ್ನಷ್ಟು ಬೆಲೆ ಏರಿಕೆಯಾಗಿದೆ. ಮಲೇಷ್ಯಾ ದೇಶವೂ ಕ್ರೂಡ್ ಅಯಿಲ್ ಬೆಲೆ ಏರಿಸಿ ಬೇಡಿಕೆಯಷ್ಟು ಎಣ್ಣೆ ರಫ್ತು ಮಾಡುತ್ತಿಲ್ಲ ಎಂದು ಅಡುಗೆ ಎಣ್ಣೆ ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.
ಶಾಲಾ ಮಕ್ಕಳಿಗೂ ತಟ್ಟಿದೆ ರಷ್ಯಾ ಉಕ್ರೇನ್ ಯುದ್ಧದ ಬಿಸಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದಾಗಿ ಮುದ್ರಣ ಕಾಗದ ಸಿಗುತ್ತಿಲ್ಲ. ಕಚ್ಚಾ ಕಾಗದ ಇಲ್ಲದ ಕಾರಣ ಪಠ್ಯ ಮುದ್ರಣಕ್ಕೆ ಸಮಸ್ಯೆ ಎದುರಾಗಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುದ್ರಣ ಕಾಗದ ತಯಾರಿ ಕಾರ್ಖಾನೆಗಳು ಪ್ರತಿ ತಿಂಗಳು ಒಟ್ಟು ಬೇಡಿಕೆಯ ಕೇವಲ ಶೇ 10ರಷ್ಟು ಕಾಗದವನ್ನು ಮಾತ್ರ ಸರಬರಾಜು ಮಾಡುತ್ತಿವೆ. ಹೀಗಾಗಿ ಪಠ್ಯಪುಸ್ತಕ ಮುದ್ರಣ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೊವಿಡ್ ಆತಂಕ ಕಳಚಿಕೊಂಡ ನಂತರ ಶಾಲೆಗಳನ್ನು ಆರಂಭಿಸುವ ಉತ್ಸಾಹದಲ್ಲಿರುವ ಶಿಕ್ಷಣ ಇಲಾಖೆಯು ಈ ಬಾರಿ ವಾಡಿಕೆಗಿಂತಲೂ ಎರಡು ವಾರ ಮೊದಲು ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಆದರೆ ಪಠ್ಯಪುಸ್ತಕ ಮುದ್ರಣ ಮತ್ತು ವಿತರಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Published On - 7:28 am, Sat, 14 May 22