ಹೆಂಡ್ತಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ, ಮುಂದೇನಾಯ್ತು?
ಯಾದಗಿರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯಂಕಪ್ಪ (35) ಎಂದು ಗುರುತಿಸಲಾಗಿದೆ. ಶಿವಪ್ಪ ಎಂಬ ಗ್ರಾಮಸ್ಥರ ಪತ್ನಿ ಜೊತೆಗೆ ಯಂಕಪ್ಪ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಪತ್ನಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಯಂಕಪ್ಪನನ್ನ ಶಿವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರ ಮುಂದೆ ತಾನಾಗಿಯೇ ಶರಣಾಗಿದ್ದಾನೆ. ಸುರಪುರ ಪೊಲೀಸ್ […]
Important Highlight
ಯಾದಗಿರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯಂಕಪ್ಪ (35) ಎಂದು ಗುರುತಿಸಲಾಗಿದೆ.
ಶಿವಪ್ಪ ಎಂಬ ಗ್ರಾಮಸ್ಥರ ಪತ್ನಿ ಜೊತೆಗೆ ಯಂಕಪ್ಪ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಪತ್ನಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಯಂಕಪ್ಪನನ್ನ ಶಿವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರ ಮುಂದೆ ತಾನಾಗಿಯೇ ಶರಣಾಗಿದ್ದಾನೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published On - 10:14 am, Wed, 1 July 20
ತಾಜಾ ಸುದ್ದಿ