Kamal Haasan: ನಟ ಕಮಲ್ ಹಾಸನ್ ಎನ್​ಎಫ್​ಟಿ ಪ್ರವೇಶಕ್ಕೆ ಸಿದ್ಧತೆ; ಏನಿದು ನಾನ್​ ಫಂಗಬಲ್​ ಟೋಕನ್?

ನಟ- ರಾಜಕಾರಣಿ ಕಮಲ್ ಹಾಸನ್ ಎನ್​ಎಫ್​ಟಿ- ನಾನ್ ಫಂಗಿಬಲ್ ಟೋಕನ್ ಉದ್ಯಮಕ್ಕೆ ಪ್ರವೇಶಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Important Highlight‌
Kamal Haasan: ನಟ ಕಮಲ್ ಹಾಸನ್ ಎನ್​ಎಫ್​ಟಿ ಪ್ರವೇಶಕ್ಕೆ ಸಿದ್ಧತೆ; ಏನಿದು ನಾನ್​ ಫಂಗಬಲ್​ ಟೋಕನ್?
ಕಮಲ್ ಹಾಸನ್ (ಸಂಗ್ರಹ ಚಿತ್ರ)
Follow us
TV9 Digital Desk
| Updated By: Srinivas Mata

Updated on: Nov 09, 2021 | 3:47 PM

ನವೆಂಬರ್ 7ನೇ ತಾರೀಕಿನಿಂದ ನಟ- ರಾಜಕಾರಣಿ ಕಮಲ್ ಹಾಸನ್ ತಮ್ಮ 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಮೆಟಾವರ್ಸ್​ನಲ್ಲಿ ಡಿಜಿಟಲ್​ ಅವತಾರ ಎತ್ತುತ್ತಿರುವ ಮೊದಲ ಭಾರತೀಯ ಸೆಲೆಬ್ರಿಟಿ ಆಗಿ ಕಾಣಿಸಿಕೊಳ್ಳುವುದಕ್ಕೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ನಟ, ರಾಜಕಾರಣಿ, ನಿರ್ಮಾಪಕ ಮತ್ತು ನಿರ್ದೇಶಕ ಹೀಗೆ ನಾನಾ ರೂಪಗಳಲ್ಲಿ ಕಾಣಿಸಿಕೊಂಡಿರುವ ಕಮಲ್ ಹಾಸನ್ ನಾನ್-ಫಂಗಬಲ್ ಟೋಕನ್ (NFT) ಬಿಡುಗಡೆಯೊಂದಿಗೆ ಡಿಜಿಟಲ್ ವಲಯಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ಸ್ವಂತ ಡಿಜಿಟಲ್ ಟೋಕನ್‌ಗಳ ಸಂಗ್ರಹವನ್ನು ಪ್ರಾರಂಭಿಸಲು ಅಮಿತಾಬ್ ಬಚ್ಚನ್ ಮತ್ತು ಸನ್ನಿ ಲಿಯೋನ್ ಅವರಂತಹ ಭಾರತೀಯರ ಸಾಲಿಗೆ ಸೇರಿಕೊಂಡಿದ್ದಾರೆ. ಇದು ಹೂಡಿಕೆ ಮಾಡುವ ಖರೀದಿದಾರರಿಗೆ ಎಕ್ಸ್​ಕ್ಲೂಸಿವ್ ಆಗಿರುತ್ತದೆ. ಹೆಚ್ಚು ಸೆಲೆಬ್ರಿಟಿಗಳು ಈ ವಲಯದಲ್ಲಿ ಪ್ರವೇಶ ಮಾಡುತ್ತಿರುವುದರಿಂದ ಭಾರತದಲ್ಲಿ NFTಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಇದು ಸಾಬೀತುಪಡಿಸುತ್ತದೆ. ಈಚೆಗೆ ತಮ್ಮ ಹುಟ್ಟುಹಬ್ಬದಂದು ಕಮಲ್ ಹಾಸನ್ ಅವರು ಹೊಸ ಉದ್ಯಮದಲ್ಲಿನ ಸಾಧ್ಯತೆಗಳನ್ನು ತಿಳಿಯುವುದಕ್ಕೆ ಉತ್ಸುಕರಾಗಿರುವುದಾಗಿ ಹೇಳಿದರು.

“ನಾನು ಡಿಜಿಟಲ್ ಮತ್ತು ಭೌತಿಕ ಪ್ರಪಂಚದ ಉದಯೋನ್ಮುಖ ಇಂಟರ್​ಸೆಕ್ಷನ್ ಬಗ್ಗೆ ಹೆಚ್ಚೆಚ್ಚು ತಿಳಿಯುವುದಕ್ಕೆ ಉತ್ಸುಕನಾಗಿದ್ದೇನೆ. ಅದು ಈಗ ಮೆಟಾವರ್ಸ್ ಎಂದು ಜನಪ್ರಿಯವಾಗಿದೆ. ಆರು ದಶಕಗಳ ನನ್ನ ಜೀವನದ ಪ್ರಯಾಣವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮಧ್ಯದ ವ್ಯತ್ಯಾಸವನ್ನು ಮಸುಕುಗೊಳಿಸಿದೆ. ಇದು ಈ ಮೆಟಾವರ್ಸ್‌ಗಾಗಿ ನನ್ನ ಕೊಡುಗೆಯಾಗಿದೆ,” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಮಲ್ ಹಾಸನ್ ತಮ್ಮ ಸ್ವಂತ NFT ಸಂಗ್ರಹವನ್ನು ಪ್ರಾರಂಭಿಸಲು ಭಾರತೀಯ ಪರವಾನಗಿ ಪಡೆದ ಡಿಜಿಟಲ್ ಸಂಗ್ರಹಗಳ ವೇದಿಕೆಯಾದ Fantico ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಸಕ್ರಿಯವಾಗಿ ಇರುವಂಥ ಮೆಂಟ್ ಪ್ಲಾಟ್​ಫಾರ್ಮ್​ಗಳು ಅವರ ಡಿಜಿಟಲ್ ಅವತಾರಗಳನ್ನು ಸಹ ಪ್ರಾರಂಭಿಸುತ್ತವೆ. ಇದರ ಹೊರತಾಗಿ ಕಮಲ್ ಹಾಸನ್ ಗೇಮಿಂಗ್ ಜಗತ್ತಿನಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿರುತ್ತಾರೆ, ಫ್ಯಾಂಟಿಕೊ ಅವರಿಗಾಗಿ ಗೇಮ್ ಆಧಾರಿತ ಮೆಟಾವರ್ಸ್ ಅನ್ನು ಪ್ರಾರಂಭಿಸುತ್ತದೆ.

ಭೌತಿಕ ರೂಪದಲ್ಲೂ ದೊರೆಯುತ್ತದೆ ಈ ನಡೆಯಿಂದ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ತಮ್ಮದೇ ಆದ ಜಗತ್ತಿನಲ್ಲಿ ಕಮಲ್ ಅವರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ನೀಡುತ್ತದೆ ಮತ್ತು ಈ ಸೌಲಭ್ಯವು ಡಿಜಿಟಲ್ ಆಗಿರುವುದರಿಂದ ಜಗತ್ತಿನಾದ್ಯಂತ ಲಭ್ಯವಿರುತ್ತದೆ. ಇದು ಅವರ ಡಿಜಿಟಲ್ ಅವತಾರಗಳನ್ನು ಸಂಪರ್ಕಿಸಲು, ಸ್ಮರಣಿಕೆಗಳನ್ನು NFTಗಳಂತೆ ಖರೀದಿಸಲು ಮತ್ತು ಭೇಟಿ ಹಾಗೂ ಶುಭಾಶಯ ಸೆಷನ್‌ಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಕಮಲ್ ಹಾಸನ್ ಅವರ ಸ್ಮರಣಿಕೆಗಳು NFTಗಳನ್ನು ಹೊರತುಪಡಿಸಿ ಅವರ ಅಭಿಮಾನಿಗಳಿಗೆ ಭೌತಿಕ (Physical) ರೂಪದಲ್ಲಿ ಲಭ್ಯವಿರುತ್ತವೆ.

ಫ್ಯಾಂಟಿಕೊ ತನ್ನ NFT ಸಂಗ್ರಹವನ್ನು ಮೊದಲು ಪ್ರಾರಂಭಿಸುವ ಮೂಲಕ ಈ ತಾರೆಯನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಎನ್‌ಎಫ್‌ಟಿ ಎನ್ನುವುದು ಡಿಜಿಟಲ್ ಲೆಡ್ಜರ್‌ನಲ್ಲಿ ಸಂಗ್ರಹವಾಗಿರುವ ಡೇಟಾದ ಘಟಕವಾಗಿದ್ದು, ಬ್ಲಾಕ್‌ಚೈನ್ ಎಂದು ಕರೆಯಲಾಗುತ್ತದೆ. ಅದು ಡಿಜಿಟಲ್ ಸ್ವತ್ತನ್ನು ವಿಶಿಷ್ಟ ಮತ್ತು ಆದ್ದರಿಂದ ಪರಸ್ಪರ ಬದಲಾಯಿಸಲಾಗುವುದಿಲ್ಲ ಎಂದು ಪ್ರಮಾಣೀಕರಿಸುತ್ತದೆ. ಫೋಟೋಗಳು, ವಿಡಿಯೋಗಳು, ಆಡಿಯೋ ಮತ್ತು ಇತರ ರೀತಿಯ ಡಿಜಿಟಲ್ ಫೈಲ್‌ಗಳಂತಹ ಐಟಂಗಳನ್ನು ಪ್ರತಿನಿಧಿಸಲು NFTಗಳನ್ನು ಬಳಸಬಹುದು.

ಭಾರತದಲ್ಲಿ ಮೊದಲನೆಯದು “ನಾವು ಗೇಮ್-ಆಧಾರಿತ ಮೆಟಾವರ್ಸ್ ಅನ್ನು ಪ್ರಾರಂಭಿಸುತ್ತೇವೆ ಎಂದು ಘೋಷಿಸಲು ತುಂಬಾ ಉತ್ಸುಕರಾಗಿದ್ದೇವೆ. ಇದು ಭಾರತದಲ್ಲಿ ಮೊದಲನೆಯದು. ನಮ್ಮ ಪ್ಲಾಟ್​ಫಾರ್ಮ್​ನಲ್ಲಿ ಕಮಲ್ ಹಾಸನ್ ಅವರಂತಹ ದಂತಕಥೆಯನ್ನು ಹೊಂದುವುದರಿಂದ ಅಭಿಮಾನಿಗಳು ಭಾಗವಹಿಸುವುದು ಮತ್ತು ಭವಿಷ್ಯಕ್ಕೆ ಹೊಂದಿಕೊಳ್ಳುವ ಹೆಚ್ಚಿನ ಸೃಷ್ಟಿಕರ್ತರ ಟ್ರೆಂಡ್​ಗೆ ತಕ್ಕಂತೆ ಸಹಕಾರಿ ಆಗುತ್ತದೆ,” ಎಂದು ಫ್ಯಾಂಟಿಕೊ ಸಿಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎನ್‌ಎಫ್‌ಟಿಗಳು ಅಭಿಮಾನಿಗಳಿಗೆ ಪೋಸ್ಟರ್‌ಗಳು, ಅವತಾರಗಳು ಮತ್ತು ನಟರ ಚಲನಚಿತ್ರಗಳ ರೂಪದಲ್ಲಿ ಲಭ್ಯವಿರುತ್ತವೆ ಎಂದು ಸಿಇಒ ಹೇಳಿದ್ದಾರೆ. ಆ ತಾರೆ ತನ್ನ ವೈಯಕ್ತಿಕ ವಸ್ತು ಸಂಗ್ರಹಾಲಯವನ್ನು ಮೆಟಾವರ್ಸ್‌ನಲ್ಲಿ ಹೊಂದಿರಲಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ. ಆದರೆ ಮೆಟಾವರ್ಸ್ ಮತ್ತು ಆಟಗಳ ಮಾಹಿತಿಗಳನ್ನು ತಿಳಿಸಿಲ್ಲ. ಫ್ಯಾಂಟಿಕೋ ಇನ್ನೂ ಹೆಚ್ಚಿನ ನಟರು, ಕ್ರೀಡಾಪಟುಗಳು ಮತ್ತು ಸ್ಟುಡಿಯೋಗಳು ಮತ್ತು ಅಂತಹ ಜನರನ್ನು ಮೆಟಾವರ್ಸ್‌ನ ಭಾಗ ಆಗಿಸುವ ಪ್ರಕ್ರಿಯೆಯಲ್ಲಿದೆ ಎಂದು ಸಿಂಗ್ ಹೇಳಿದ್ದಾರೆ.

ಅಮಿತಾಬ್​ ಎನ್​ಎಫ್​ಟಿಗೆ 7.18 ಕೋಟಿ ರೂ. ಸಂಗ್ರಹ ಬಿಯಾಂಡ್‌ಲೈಫ್.ಕ್ಲಬ್ ಆಯೋಜಿಸಿದ್ದ ಹರಾಜಿನಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಎನ್‌ಎಫ್‌ಟಿ ಸಂಗ್ರಹಗಳಾದ ‘ಮಧುಶಾಲಾ’, ಹಸ್ತಾಕ್ಷರ ಹಾಕಿದ ಪೋಸ್ಟರ್‌ಗಳು ಮತ್ತು ಸಂಗ್ರಹಗಳು ಸುಮಾರು 7.18 ಕೋಟಿ ರೂಪಾಯಿಗೆ ಬಿಡ್‌ಗಳನ್ನು ಸ್ವೀಕರಿಸಿದ ಒಂದು ದಿನದ ನಂತರ ಕಮಲ್ ಹಾಸನ್ ಅವರ ಘೋಷಣೆ ಬಂದಿದೆ. ಇದು ಭಾರತದಲ್ಲಿ ಎನ್‌ಎಫ್‌ಟಿಗಳಿಗೆ ಅತಿ ಹೆಚ್ಚು ಬಿಡ್ ಆಗಿದೆ. ಹರಾಜು ನವೆಂಬರ್ 1ರಂದು ಪ್ರಾರಂಭವಾಯಿತು ಮತ್ತು ನವೆಂಬರ್ 4ರಂದು ಕೊನೆಗೊಂಡಿತು. ಹರಾಜಿನ ಸಮಯದಲ್ಲಿ ಅತ್ಯಂತ ಯಶಸ್ವಿಯಾದ್ದದ್ದು ‘ಮಧುಶಾಲಾ’ NFT ಸಂಗ್ರಹ – ಅಮಿತಾಬ್ ಬಚ್ಚನ್ ಅವರ ತಂದೆಯ ಕವಿತೆ – ಸೂಪರ್​ಸ್ಟಾರ್ ಅವರ ಸ್ವಂತ ಧ್ವನಿಯಲ್ಲಿ ರೆಕಾರ್ಡ್ ಮಾಡಲಾಗಿದೆ.

ಜಾಗತಿಕ ಮೆಟಾವರ್ಸ್ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ WazirX ಟ್ರೇಡ್ ಡೆಸ್ಕ್‌ನ ತಜ್ಞರು, “ಫೇಸ್‌ಬುಕ್ ತನ್ನ ಮೆಟಾವರ್ಸ್ ಪರಿವರ್ತನೆಯನ್ನು ಘೋಷಿಸಿದಾಗಿನಿಂದ ಇತ್ತೀಚಿನ ದಿನಗಳಲ್ಲಿ ಮೆಟಾವರ್ಸ್ ಆಧಾರಿತ ಯೋಜನೆಗಳು ಭಾರೀ ಬೆಳವಣಿಗೆಯನ್ನು ಕಂಡಿವೆ. ಕುತೂಹಲಕಾರಿಯಾಗಿ, Monster-battle ಮತ್ತು ನಾನ್-ಫಂಗಬಲ್ ಟೋಕನ್ (NFT) ಆಧಾರಿತ ಆಟ ಆಕ್ಸಿ ಇನ್ಫಿನಿಟಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕಾರ್ಮಿಕರಲ್ಲಿ ಆದಾಯದ ಸಂಭಾವ್ಯ ಮಾರ್ಗವಾಗಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಆಕ್ಸಿ ಇನ್ಫಿನಿಟಿ ಅಭಿವೃದ್ಧಿಶೀಲ ರಾಷ್ಟ್ರದ ಕೆಲಸಗಾರರಿಗೆ ಸಂಗ್ರಹಯೋಗ್ಯ ಪಾತ್ರಗಳ ವ್ಯಾಪಾರದಲ್ಲಿ ಹಣ ಗಳಿಸಲು ಅವಕಾಶ ನೀಡುತ್ತಿದೆ.”

ಇದನ್ನೂ ಓದಿ: Kamal haasan: ಕಮಲ್ ಹಾಸನ್ ಚಿತ್ರರಂಗ ಪ್ರವೇಶಿಸಿ 62 ವರ್ಷ; ‘ವಿಕ್ರಮ್’ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು