2023ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿಗಳ ವಿವರ ಇಲ್ಲಿದೆ.
ನಿರೀಕ್ಷಿತ ಆದಾಯ ಗಳಿಸದ ಕಾರಣ ನೀಡಿ ಐಬಿಎಂ 3,900 ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದೆ.
ಜಾಗತಿಕವಾಗಿ 12,000 ಉದ್ಯೋಗಿಗಳನ್ನು ಗೂಗಲ್ ಇತ್ತೀಚೆಗೆ ವಜಾಗೊಳಿಸಿದೆ.
380 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಫುಡ್ಟೆಕ್ ಕಂಪನಿ ಸ್ವಿಗ್ಗಿ ಜನವರಿ 20ರಂದು ಘೋಷಿಸಿತ್ತು.
ಬೆಂಗಳೂರು ಮೂಲದ ಎಕ್ಸೋಟೆಲ್ ಕಂಪನಿ ಕೂಡ ಜನವರಿ 20ರಂದು ಶೇ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಬೆಂಗಳೂರು ಮೂಲದ ಡುಂಜೋ ಜನವರಿ 17ರಂದು ಘೋಷಿಸಿತ್ತು.
ವೆಚ್ಚವನ್ನು ಕಡಿತಗೊಳಿಸಲು ಶೇ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಶೇರ್ಚಾಟ್ ಇತ್ತೀಚೆಗೆ ತಿಳಿಸಿತ್ತು.
ಓಲಾ ವಿವಿಧ ಘಟಕಗಳಿಂದ 200 ಮಂದಿ ಉದ್ಯೋಗಿಗಳನ್ನು ಜನವರಿ ಎರಡನೇ ವಾರ ವಜಾಗೊಳಿಸಿತ್ತು.