ಸರಿಯಾಗಿ ಓದು ಎಂದು ಪೋಷಕರು ಬೈಯ್ದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇನ್ನು ಇದೇ ಕಲಬುರಗಿಯಲ್ಲಿ ಎರಡು ವರ್ಷದ ಮಗು ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಎರಡು ಪ್ರತ್ಯೇಕ ಘಟನೆಯ ವಿವರ ಈ ಕೆಳಗಿನಂತಿದೆ.
ಸುಮಾರು 35 ವರ್ಷದ ವ್ಯಕ್ತಿಯೋರ್ವ ಕಾಂಗ್ರೆಸ್ ಶಾಸಕರೊಬ್ಬರ ನಿವಾಸದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜೇವರ್ಗಿ ಶಾಸಕ, KKRDB ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರ ಕಲಬುರಗಿ ಮನೆಯ ಆವರಣದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಲಬುರಗಿ ಜಿಲ್ಲಾ ಬಿಜೆಪಿ ನಾಯಕ ಮಣಿಕಂಠ ರಾಠೋಡ್ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಡಿಯಲ್ಲಿ ಅರೆಸ್ಟ್ ಮಾಡಲಾಗಿದ್ದು, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡೆ ಖಂಡಿಸಿ ಬೀದಿಗಿಳಿದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನ್ಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಜಿಲ್ಲೆಯಲ್ಲೇ ಇಂದಿರಾ ಕ್ಯಾಂಟೀನ್ಗಳು ಮುಚ್ಚಲಾಗಿದೆ. ಸದ್ಯ ಕ್ಯಾಂಟೀನ್ಗಳು ಶ್ವಾನಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ.
ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಪೋಕ್ಸೋ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಕಲ್ಪಿಸಿಕೊಟ್ಟಿರುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಾಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಹಣದ ಜೊತೆ ಚಿನ್ನ, ಬೆಳ್ಳಿ ವಸ್ತುಗಳ ಕಾಣಿಕೆ ರೂಪದಲ್ಲಿ ಬಂದಿವೆ.
ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಪಹರಣ ನಡೆಸಿ ಒಂದಷ್ಟು ದೂರ ಹೋಗುತ್ತಿದ್ದಾಗ ಪೊಲೀಸರು ಎದುರಾಗಿದ್ದಾರೆ. ಮುಂದೇನಾಯ್ತು ಎಂಬುದು ಇಲ್ಲಿದೆ.
ಶಾಲಾ ಕಾಲೇಜು ಮಕ್ಕಳ ವ್ಯಕ್ತಿತ್ವ ವಿಕಸನ, ಕೌಶಲ್ಯ ಸುಧಾರಣೆ, ಆತ್ಮ ವಿಶ್ವಾಸ ಹೆಚ್ಚಿಸುವಿಕೆ, ಉತ್ತಮ ನಡವಳಿಕೆ, ಪರಿಣಾಮಕಾರಿ ಸಂವಹನ ಕೌಶಲ್ಯ ಬೆಳಸುವ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಸ್ಫೂರ್ತಿ ಕಿರಣ ಎಂಬ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.
Kalaburagi News: 1992 ರಿಂದಲೇ ಕಳ್ಳತನ ಮಾಡುತ್ತಿದ್ದ ಉದಯ್ ಪಾರ್ದಿ ಎಂಬ ಆರೋಪಿಯನ್ನು ನಿನ್ನೆ(ಆ.17) ಕಲಬುರಗಿಯ ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿ, ಕರೆತರುತ್ತಿದ್ದರು. ಈ ವೇಳೆ ಆತ ಮೃತಪಟ್ಟಿದ್ದ. ಇದನ್ನು ಪೊಲೀಸರು ಹೃದಯಾಘಾತದಿಂದ ಆಗಿದೆ ಎಂದಿದ್ದರು. ಆದರೆ, ಇದೀಗ ಮೃತನ ಕುಟುಂಬದವರು ಕೊಲೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾಸಿಕ ಗೌರವಧನವನ್ನು ಏಳು ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
KKRTC ಕಡೆಯಿಂದ ಅರ್ಹರಿಗಷ್ಟೇ ಸರ್ಕಾರಿ ನೌಕರಿ ಸಿಗಬೇಕು. ನಯಾಪೈಸೆಯಷ್ಟೂ ಭ್ರಷ್ಟಾಚಾರ ಸುಳಿಯಬಾರದು ಅನ್ನೋ ಉದ್ದೇಶದಿಂದ ಗಣಕೀಕೃತ ಚಾಲನಾ ಪಥವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲೀಗ ದಿನವೂ ಅಭ್ಯರ್ಥಿಗಳ ಪರೀಕ್ಷೆ ನಡೆಯುತ್ತಿದೆ. ದೇಶದಲ್ಲಿ ಇಂತಹ ಮೊದಲ ಪ್ರಯತ್ನವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಡೆಸುತ್ತಿದೆ ಅಂತಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ರಾಚಪ್ಪ. ಇತ್ತೀಚಿನ ಕಡುಭ್ರಷ್ಟ ಪಿಎಸ್ಐ ಹಗರಣದಿಂದ ರೋಸಿಹೋಗಿರುವ ರಾಜ್ಯದ ಜನತೆಯ ಪರವಾಗಿ ನಿರ್ದೇಶಕ ರಾಚಪ್ಪ ಮತ್ತು ಅವರ ತಂಡಕ್ಕೆ ಬಿಗ್ ಸೆಲ್ಯೂಟ್!
Kalaburagi Connect; ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ರಾಜ್ಯದ ವಿನೂತನ ಮತ್ತು ಮೊದಲ ಪ್ರಯತ್ನವಾಗಿ ಆರಂಭಿಸಿರುವ ಕಲಬುರಗಿ ಕನೆಕ್ಟ್ಗೆ ಚಾಲನೆ ಸಿಕ್ಕಿದೆ. ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಐಟಿಬಿಟಿ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಕನೆಕ್ಟ್ಗೆ ಚಾಲನೆ ನೀಡಿದ್ದಾರೆ.