ಸ್ಮಾರ್ಟ್​ಫೋನ್​ನ ಬ್ಯಾಕ್ ಕವರ್​ನಲ್ಲಿ ಹಣ, ಎಟಿಎಂ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ

Tech Tips in Kannada: ಸ್ಮಾರ್ಟ್​ಫೋನ್‌ ಹೆಚ್ಚು ಬಿಸಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಮುಂಚೂಣಿಗೆ ಬಂದಿರುವ ದೊಡ್ಡ ಕಾರಣವೆಂದರೆ ಫೋನ್‌ಗೆ ದಪ್ಪ ಕವರ್ ಅಳವಡಿಸಿರುವುದು. ಇದರ ಜೊತೆಗೆ ಕವರ್​ನೊಳಗೆ ಹಲವು ಬಗೆಯ ವಸ್ತುಗಳನ್ನು ಇಡುವುದು.

ಸ್ಮಾರ್ಟ್​ಫೋನ್​ನ ಬ್ಯಾಕ್ ಕವರ್​ನಲ್ಲಿ ಹಣ, ಎಟಿಎಂ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ
Smartphones
Follow us
|

Updated on: Aug 24, 2023 | 11:38 AM

ಅನೇಕ ಜನರು ಮೆಟ್ರೋ ಕಾರ್ಡ್, ಎಟಿಎಂ ಕಾರ್ಡ್, ಹಣವನ್ನು ಸ್ಮಾರ್ಟ್​ಫೋನಿನ ಕವರ್​ನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಈ ವಸ್ತುಗಳನ್ನು ನಿಮ್ಮ ಫೋನ್‌ನ ಬ್ಯಾಕ್ ಕವರ್‌ನಲ್ಲಿ ಇರಿಸಿದರೆ, ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಮಾಡುವ ಸಣ್ಣ ತಪ್ಪುಗಳು ಜೀವಕ್ಕೆ ಅಪಾಯ ತಂದೊಡುತ್ತದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಬಳಕೆದಾರರ ದುಬಾರಿ ಮತ್ತು ಅಗ್ಗದ ಫೋನ್‌ಗಳು ಸ್ಫೋಟಗಳ್ಳಲು (Mobile Blast) ಮೊಬೈಲ್​ನ ಬ್ಯಾಕ್ ಕವರ್​​ನಲ್ಲಿ ಎಟಿಎಂ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಎಂಬುದು ತಿಳಿದುಬಂದಿದೆ.

ಅತಿಯಾಗಿ ಬಿಸಿಯಾಗುವುದು ಫೋನ್ ಸ್ಫೋಟಕ್ಕೆ ಕಾರಣ:

ಸ್ಮಾರ್ಟ್​ಫೋನ್‌ ಹೆಚ್ಚು ಬಿಸಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಮುಂಚೂಣಿಗೆ ಬಂದಿರುವ ದೊಡ್ಡ ಕಾರಣವೆಂದರೆ ಫೋನ್‌ಗೆ ದಪ್ಪ ಕವರ್ ಅಳವಡಿಸಿರುವುದು. ಇದರ ಜೊತೆಗೆ ಕವರ್​ನೊಳಗೆ ಹಲವು ಬಗೆಯ ವಸ್ತುಗಳನ್ನು ಇಡುವುದು. ಫೋನಿಗೆ ದಪ್ಪನೆಯ ಬ್ಯಾಕ್ ಕವರ್ ಹಾಕಿದಾಗ ಮತ್ತು ಆ ಕವರ್​ನಲ್ಲಿ ವಸ್ತುಗಳನ್ನು ಇಟ್ಟಾಗ ಗಾಳಿಯು ಹಾದುಹೋಗಲು ಯಾವುದೇ ಸ್ಥಳಗಳಿರುವುದಿಲ್ಲ. ಇದರಿಂದಾಗಿ ಫೋನ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಬ್ಲಾಸ್ಟ್ ಕೂಡ ಆಗುತ್ತದೆ.

Smartphone Charging: ಫೋನ್ ಚಾರ್ಜ್ ಹಾಕುವಾಗ ಎಚ್ಚರಿಕೆ ವಹಿಸಿ..

ಇದನ್ನೂ ಓದಿ
Image
ರೆಡ್ಮಿ A2+ ಹೊಸ ವೇರಿಯೆಂಟ್ ಬಿಡುಗಡೆ: ಬೆಲೆ ಕೇವಲ 8,499 ರೂ.
Image
ಪಾಸ್​ವರ್ಡ್ ಶೇರಿಂಗ್ ಆಯ್ಕೆ ಬಂದ್: ಏರ್ಟೆಲ್, ಜಿಯೋದ ಯಾವ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ ಇದೆ?
Image
App Download: ಸ್ಮಾರ್ಟ್​ಫೋನ್​ನಲ್ಲಿ ಯಾವುದೋ ಆ್ಯಪ್ ಇನ್​ಸ್ಟಾಲ್ ಮಾಡುವಾಗ ಎಚ್ಚರಿಕೆ ಅಗತ್ಯ!​
Image
ಒಂದೇ ದಿನ ಎರಡು ಬಂಪರ್ ಫೋನ್ ರಿಲೀಸ್ ಮಾಡಿದ ರಿಯಲ್ ಮಿ: ಖರೀದಿಗೆ ಕ್ಯೂ ಗ್ಯಾರಂಟಿ

ಫೋನ್ ಏಕೆ ಹೆಚ್ಚು ಬಿಸಿಯಾಗುತ್ತದೆ?:

  • ಫೋನ್ ಅತಿಯಾಗಿ ಬಿಸಿಯಾಗುವ ಸಮಸ್ಯೆಗೆ ಒಂದು ದೊಡ್ಡ ಕಾರಣವೆಂದರೆ ಫೋನ್‌ನ ಕವರ್‌ನ ದಪ್ಪ ಅಥವಾ ಹಣ, ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್ ಅಥವಾ ಫೋನ್‌ನ ಕವರ್‌ನಲ್ಲಿ ಕೀಲಿಯನ್ನು ಇಡುವುದು.
  • ಮತ್ತೊಂದು ಕಂಪನಿಯ ಚಾರ್ಜರ್ ಅನ್ನು ಬಳಸುವುದು ಅಥವಾ ಸ್ಥಳೀಯ ಚಾರ್ಜರ್‌ನೊಂದಿಗೆ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ನಿಮ್ಮ ಫೋನ್ ಬಿಸಿಯಾಗುತ್ತದೆ. ಇದರಿಂದ ಫೋನ್‌ ಸ್ಫೋಟವಾಗುತ್ತದೆ.
  • ಕೆಲವೊಮ್ಮೆ ನಿಮ್ಮ ಫೋನ್ ಹೆಚ್ಚಿನ ತಾಪಮಾನದಿಂದಾಗಿ ಬಿಸಿಯಾಗಬಹುದು. ಹೀಗಾಗಿ ಬಿಸಿಲಿನಲ್ಲಿ ಫೋನ್ ಅನ್ನು ದೀರ್ಘಕಾಲ ಬಳಸುವುದನ್ನು ತಪ್ಪಿಸಿ.
  • ಫೋನ್ ಅನ್ನು ಚಾರ್ಜ್‌ನಲ್ಲಿ ಇರಿಸಿದಾಗ ಯಾವುದೇ ಕಾರಣಕ್ಕೂ ಗೇಮಿಂಗ್ ಅಥವಾ ಫೋನ್ ಅನ್ನು ಬಳಸುವುದನ್ನು ತಪ್ಪಿಸಿ. ನೀವು ಚಾರ್ಜಿಂಗ್ ಸಮಯದಲ್ಲಿ ಬಳಸಿದರೆ, ಫೋನ್ ಬ್ಲಾಸ್ಟ್ ಆಗುವ ಅಪಾಯವು ಹೆಚ್ಚಾಗಿರುತ್ತದೆ.
  • ಫೋನ್ ಅನ್ನು ಚಾರ್ಜ್ ಮಾಡುವಾಗ, ಅದರ ಕವರ್ ಅನ್ನು ತೆಗೆದಿಡಿ. ಅಥವಾ ಕವರ್‌ನಲ್ಲಿ ಇರಿಸಲಾದ ಕೀಗಳು, ಕಾರ್ಡ್‌ಗಳನ್ನು ಪ್ರತ್ಯೇಕವಾಗಿ ಇರಿಸಿ.

ಫೋನ್ ಸ್ಫೋಟಗೊಳ್ಳುವ ಮೊದಲು ಇದನ್ನು ಮಾಡಿ:

ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸಿದಾಗ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ ಫೋನ್ ಅನ್ನು ಆನ್ ಮಾಡಿ ಬಳಸಿ. ನಂತರವೂ ಫೋನ್ ಬಿಸಿಯಾಗುತ್ತಿದ್ದರೆ, ಯಾವ ಅಪ್ಲಿಕೇಶನ್ ಎಷ್ಟು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಪರಿಶೀಲಿಸಿ ಕ್ಲೀಯರ್ ಮಾಡಿ. ಅನಗತ್ಯ ಅಪ್ಲಿಕೇಶನ್ ಇದ್ದರೆ ತಕ್ಷಣ ಅದನ್ನು ಫೋನ್‌ನಿಂದ ಅನ್​ಇನ್​ಸ್ಟಾಲ್ ಮಾಡಿ.

ಗಮನಿಸಿ: ಮೇಲೆ ಹೇಳಿದಂತೆ, ನೀವು ಫೋನ್‌ನ ಕವರ್‌ನಲ್ಲಿ ಹಣ, ಎಟಿಎಂ, ಮೆಟ್ರೋ ಕಾರ್ಡ್ ಅಥವಾ ಕೀಗಳನ್ನು ಇರಿಸಿದರೆ, ಅದು ನಿಮಗೆ ಅನೇಕ ತೊಂದರೆಗಳನ್ನು ಉಂಟುಮಾಡಬಹುದು. ಇದರಿಂದ ನಿಮ್ಮ ಫೋನ್ ಬ್ಲಾಸ್ಟ್ ಆಗುತ್ತದೆ, ಸಾವು-ನೋವು ಸಂಭವಿಸಬಹುದು. ಹೀಗಾಗಿ ನಿಮ್ಮ ಫೋನ್ ದೀರ್ಘ ಸಮಯ ಬಾಳಿಕೆ ಬರಲು ಬಿಸಿಯಾಗದಂತೆ ಜೋಪಾನವಾಗಿ ಕಾಪಾಡಿಕೊಳ್ಳಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ