ರೆಡ್ಮಿ A2+ ಹೊಸ ವೇರಿಯೆಂಟ್ ಬಿಡುಗಡೆ: ಬೆಲೆ ಕೇವಲ 8,499 ರೂ.

Redmi A2+ new RAM and storage option: ರೆಡ್ಮಿ A2+ ಸ್ಮಾರ್ಟ್​ಫೋನ್​ನ 4GB RAM ಮತ್ತು 128GB ನೂತನ ಸ್ಟೋರೇಜ್ ಆಯ್ಕೆಯ ಬೆಲೆ ಕೇವಲ 8,499 ರೂ. ಇದು ಅಮೆಜಾನ್, ಎಂಐ.ಕಾಮ್ ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿದೆ.

ರೆಡ್ಮಿ A2+ ಹೊಸ ವೇರಿಯೆಂಟ್ ಬಿಡುಗಡೆ: ಬೆಲೆ ಕೇವಲ 8,499 ರೂ.
Redmi A2+
Follow us
|

Updated on: Aug 24, 2023 | 10:45 AM

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿಯ ಸಬ್-ಬ್ರ್ಯಾಂಡ್ ರೆಡ್ಮಿ ಭಾರತದಲ್ಲಿ ರೆಡ್ಮಿ ಎ2+ (Redmi A2+) ಸ್ಮಾರ್ಟ್​ಫೋನ್​ನ ಹೊಸ RAM ಮತ್ತು ಶೇಖರಣಾ ಆಯ್ಕೆಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಈ ವರ್ಷದ ಆರಂಭದಲ್ಲಿ (ಮಾರ್ಚ್‌ನಲ್ಲಿ) ರೆಡ್ಮಿ A2 ಜೊತೆಗೆ ಭಾರತದಲ್ಲಿ ಅನಾವರಣಗೊಂಡಿತ್ತು. ಇದೀಗ ರೆಡ್ಮಿ A2+ ಫೋನನ್ನು 4GB RAM ಮತ್ತು 128GB ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೀಡಿಯಾಟಎಕ್ ಹಿಲಿಯೊ G36 SoC ನಿಂದ ಚಾಲಿತವಾಗಿದೆ ಮತ್ತು 5,000mAH ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಫೋನಿನ ಬೆಲೆ ಫೀಚರ್ಸ್ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರೆಡ್ಮಿ A2+ ಬೆಲೆ, ಲಭ್ಯತೆ:

ರೆಡ್ಮಿ A2+ ಸ್ಮಾರ್ಟ್​ಫೋನ್​ನ 4GB RAM ಮತ್ತು 128GB ನೂತನ ಸ್ಟೋರೇಜ್ ಆಯ್ಕೆಯ ಬೆಲೆ ಕೇವಲ 8,499 ರೂ. ಇದು ಅಮೆಜಾನ್, ಎಂಐ.ಕಾಮ್ ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿದೆ. ಅಂತೆಯೆ ಇದರ4GB RAM + 64GB ಸ್ಟೋರೇಜ್ ರೂಪಾಂತರವು ಪ್ರಸ್ತುತ 7,999 ರೂ. ಗೆ ಮಾರಾಟ ಆಗುತ್ತಿದೆ. ರೆಡ್ಮಿ A2+ ಅನ್ನು ಭಾರತದಲ್ಲಿ ಕ್ಲಾಸಿಕ್ ಬ್ಲಾಕ್, ಸೀ ಗ್ರೀನ್ ಮತ್ತು ಆಕ್ವಾ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.

YouTube First Video: ಯೂಟ್ಯೂಬ್​ಗೆ ಅಪ್​ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ಇದನ್ನೂ ಓದಿ
Image
ಪಾಸ್​ವರ್ಡ್ ಶೇರಿಂಗ್ ಆಯ್ಕೆ ಬಂದ್: ಏರ್ಟೆಲ್, ಜಿಯೋದ ಯಾವ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ ಇದೆ?
Image
App Download: ಸ್ಮಾರ್ಟ್​ಫೋನ್​ನಲ್ಲಿ ಯಾವುದೋ ಆ್ಯಪ್ ಇನ್​ಸ್ಟಾಲ್ ಮಾಡುವಾಗ ಎಚ್ಚರಿಕೆ ಅಗತ್ಯ!​
Image
ಒಂದೇ ದಿನ ಎರಡು ಬಂಪರ್ ಫೋನ್ ರಿಲೀಸ್ ಮಾಡಿದ ರಿಯಲ್ ಮಿ: ಖರೀದಿಗೆ ಕ್ಯೂ ಗ್ಯಾರಂಟಿ
Image
Smartphone Charging: ಫೋನ್ ಚಾರ್ಜ್ ಹಾಕುವಾಗ ಎಚ್ಚರಿಕೆ ವಹಿಸಿ..

ರೆಡ್ಮಿ A2+ ಫೀಚರ್ಸ್:

ರೆಡ್ಮಿ A2+ ಸ್ಮಾರ್ಟ್​ಫೋನ್ 6.52-ಇಂಚಿನ HD+ (1600 x 720 ಪಿಕ್ಸೆಲ್‌ಗಳು) LCD ಡಿಸ್ ಪ್ಲೇ ಜೊತೆಗೆ 120Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಮೀಡಿಯಾಟೆಕ್ ಹಿಲಿಯೊ G36 ಪ್ರೊಸೆಸರ್ ನೀಡಲಾಗಿದ್ದು, ಇದು ಮೆಮೊರಿ ಫ್ಯೂಷನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಬಳಕೆದಾರರಿಗೆ ಸಂಗ್ರಹಣೆಯಿಂದ 3GB RAM ವರೆಗೆ ವಿಸ್ತರಿಸಬಹುದು. ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ A2+ ಫೋನ್ 8-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು QVGA ಕ್ಯಾಮೆರಾದಿಂದ AI-ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ದೀರ್ಘ ಸಮು ಬಾಳಕೆ ಬರುವ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 10W ಚಾರ್ಜರ್ ನೀಡಲಾಗಿದೆ. ಕಂಪನಿ ಹೇಳಿರುವ ಪ್ರಕಾರ, ಒಂದೇ ಚಾರ್ಜ್‌ನಲ್ಲಿ ಈ ಸ್ಮಾರ್ಟ್‌ಫೋನ್ 32 ದಿನಗಳ ಸ್ಟ್ಯಾಂಡ್‌ಬೈ ಮೋಡ್ ಮತ್ತು 32 ಗಂಟೆಗಳ ಕರೆ ಸಮಯವನ್ನು ನೀಡುತ್ತದೆ. ಇದರಲ್ಲಿ 3.5 ಎಂಎಂ ಆಡಿಯೊ ಜಾಕ್‌ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bud 4icket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ