ಕೊವಿಡ್ನಿಂದ ಕಮಲ್ ಹಾಸನ್ ಸಂಪೂರ್ಣ ಗುಣಮುಖ; ಮನೆಗೆ ಮರಳಿದ ಹಿರಿಯ ನಟ
ಕೊವಿಡ್ ಅಂಟಿದ ನಂತರದಲ್ಲಿ ಕೆಲ ದಿನಗಳ ಕಾಲ ಸುಸ್ತು ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕಮಲ್ಗೆ ಈಗ 67ನೇ ವರ್ಷ. ಹೀಗಾಗಿ, ಕೊವಿಡ್ ಕಾಣಸಿಕೊಂಡ ನಂತರ ಅವರು ವಿಶ್ರಾಂತಿ ಪಡೆಯಲೇಬೇಕು.
ಕೊವಿಡ್ ನಿಧಾನವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲೇ ನಟ ಕಮಲ್ ಹಾಸನ್ಗೆ ಕೊವಿಡ್ ಅಂಟಿದ್ದು ಸಾಕಷ್ಟು ಆತಂಕ ಮೂಡಿಸಿತ್ತು. ಕಮಲ್ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಕೋರಿಕೊಂಡಿದ್ದರು. ಈ ಪ್ರಾರ್ಥನೆ ಈಗ ಸಫಲವಾಗಿದೆ. ನಟ ಕಮಲ್ ಹಾಸನ್ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಕಮಲ್ ಹಾಸನ್ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸಣ್ಣ ಪ್ರಮಾಣದ ಕೊವಿಡ್ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು . ಈ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಖಚಿತಗೊಂಡಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಈಗ ಸಂಪೂರ್ಣವಾಗಿ ಸುಧಾರಿಸಿದೆ.
ಕೊವಿಡ್ ಅಂಟಿದ ನಂತರದಲ್ಲಿ ಕೆಲ ದಿನಗಳ ಕಾಲ ಸುಸ್ತು ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕಮಲ್ಗೆ ಈಗ 67ನೇ ವರ್ಷ. ಹೀಗಾಗಿ, ಕೊವಿಡ್ ಕಾಣಸಿಕೊಂಡ ನಂತರ ಅವರು ವಿಶ್ರಾಂತಿ ಪಡೆಯಲೇಬೇಕು. ಹೀಗಾಗಿ, ಕಡ್ಡಾಯವಾಗಿ ಕೆಲ ದಿನಗಳ ಕಾಲ ಮನೆಯಲ್ಲೇ ಇರುವಂತೆ ವೈದ್ಯರು ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿನಿಮಾ ಕೆಲಸಗಳಲ್ಲಿ ಪಾಲ್ಗೊಳ್ಳದೆ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.
முன்னெச்சரிக்கைகள் முடிந்தவரை காக்கும். அவற்றையும் மீறி சுகம் கெட்டால், நாம் எடுத்த நடவடிக்கைகளே நம்மை விரைவில் குணப்படுத்தவும் கூடும். தொற்றுத் தாக்கியும் விரைந்து மீண்டிருக்கிறேன். எத்தனை உள்ளங்கள் என்னலம் சிந்தித்தன என்றெண்ணியெண்ணி மகிழ்ந்து இருக்கிறேன். pic.twitter.com/IScdLsBjOL
— Kamal Haasan (@ikamalhaasan) December 4, 2021
ಈ ಬಗ್ಗೆ ಟ್ವೀಟ್ ಮಾಡಿದ್ದ ಕಮಲ್ ‘ಅಮೆರಿಕದಿಂದ ವಾಪಸ್ ಬಂದ ಬಳಿಕ ನನಗೆ ಸಣ್ಣದಾಗಿ ಕೆಮ್ಮು ಆರಂಭವಾಗಿತ್ತು. ಪರೀಕ್ಷೆ ಮಾಡಿಸಿದ ನಂತರ ಇದು ಕೋವಿಡ್-19 ಪಾಸಿಟಿವ್ ಎಂಬುದು ತಿಳಿದುಬಂತು. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದೇನೆ. ಒಂದು ಅರಿವಾಗಿದ್ದೇನೆಂದರೆ, ಈ ಮಹಾಮಾರಿ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇರಬೇಕಿದೆ’ ಎಂದಿದ್ದರು ಕಮಲ್.
ಇದನ್ನೂ ಓದಿ: ಲಸಿಕೆ ಪಡೆದ ನಂತರವೂ ಕಮಲ್ ಹಾಸನ್ಗೆ ಕೊವಿಡ್ ಅಂಟಿದ್ದು ಹೇಗೆ? ವೈದ್ಯರು ಹೇಳಿದ್ದಿಷ್ಟು