6 ಎಸೆತ, 11 ರನ್, 1 ವಿಕೆಟ್ ಬಾಕಿ; ಕೊನೆಯ ಓವರ್​ನಲ್ಲಿ ಮ್ಯಾಜಿಕ್ ಮಾಡಿದ ಪಾಕ್ ಬೌಲರ್

PAK vs AFG: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡವು ಪಾಕಿಸ್ತಾನಕ್ಕೆ 301 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್‌ಗಳಲ್ಲಿ 9 ವಿಕೆಟ್​ ಕಳೆದುಕೊಂಡರು ಗೆಲುವಿನ ದಡ ಸೇರಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಸೀಮ್ ಶಾ ಕೊನೆಯ ಓವರ್​ನಲ್ಲಿ ಅಬ್ಬರಿಸಿ, ಪಾಕ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.

6 ಎಸೆತ, 11 ರನ್, 1 ವಿಕೆಟ್ ಬಾಕಿ; ಕೊನೆಯ ಓವರ್​ನಲ್ಲಿ ಮ್ಯಾಜಿಕ್ ಮಾಡಿದ ಪಾಕ್ ಬೌಲರ್
ನಸೀಮ್ ಶಾ
Follow us
| Updated By: Vimal Kumar

Updated on: Mar 04, 2024 | 11:40 AM

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ (Afghanistan vs Pakistan) ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದ ಪಾಕ್ ಪಡೆ ಬಾಲಂಗೋಚಿಗಳ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿದರೆ, ಇತ್ತ ಕೊನೆಯವರೆಗೂ ವಿಜಯಲಕ್ಷ್ಮಿಯನ್ನು ತನ್ನ ಬಳಿಯಲ್ಲೇ ಇರಿಸಿಕೊಂಡಿದ್ದ ಅಫ್ಘಾನಿಸ್ತಾನ ಕೊನೆಯ ಹಂತದಲ್ಲಿ ಲಯ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡವು ಪಾಕಿಸ್ತಾನಕ್ಕೆ 301 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್‌ಗಳಲ್ಲಿ 9 ವಿಕೆಟ್​ ಕಳೆದುಕೊಂಡರು ಗೆಲುವಿನ ದಡ ಸೇರಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಸೀಮ್ ಶಾ (Naseem Shah), ಕೊನೆಯ ಓವರ್​ನಲ್ಲಿ ಅಬ್ಬರಿಸಿ, ಪಾಕ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.

ವಾಸ್ತವವಾಗಿ ಪಾಕಿಸ್ತಾನದ ಗೆಲುವಿಗೆ ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು. ಆದರೆ ಪಾಕ್ ಬಳಿ ವಿಕೆಟ್​ಗಳಿರಲಿಲ್ಲ. ಈಗಾಗಲೇ ತಂಡದ 8 ವಿಕೆಟ್​ಗಳು ಉರುಳಿದ್ದವು. ಅಲ್ಲದೆ ಕೊನೆಯಲ್ಲಿ ಬೌಲರ್​ಗಳು ಕ್ರೀಸ್​ನಲ್ಲಿ ಇದ್ದಿದ್ದರಿಂದ ಈ ಪಂದ್ಯ ಅಫ್ಘಾನಿಸ್ತಾನ ಪರ ವಾಲುವುದು ಖಚಿತವಾಗಿತ್ತು. ಅಂತಿಮವಾಗಿ ಫಝಲಕ್ ಫಾರೂಕಿ ಕೊನೆಯ ಓವರ್‌ ಬೌಲ್ ಮಾಡುವ ಜವಬ್ದಾರಿವಹಿಸಿಕೊಂಡರಯ. ಈ ವೇಲೆ ನಸೀಮ್ ಶಾ ಸ್ಟ್ರೈಕ್​ನಲ್ಲಿದ್ದರು. ಓವರ್​ನ ಮೊದಲ ಎಸೆತವನ್ನು ಬೌಲ್ ಮಾಡಲು ಬಂದ ಫಾರೂಕಿ ತಮ್ಮ ಚಾಣಾಕ್ಷ ನಡೆಯಿಂದ ಶಾದಬ್​ರನ್ನು ರನೌಟ್ ಮಾಡಿದರು.

PAK vs AFG: ಕೊನೆಯ ಓವರ್ ಡ್ರಾಮಾ; ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ

ಶಾದಾಬ್ ರನ್ ಔಟ್

ಫಾರೂಕಿ ಚೆಂಡನ್ನು ಬೌಲ್ ಮಾಡುವ ಮುನ್ನವೇ ಶಾದಾಬ್ ರನ್​ಗಾಗಿ ಓಡಲು ಆರಂಭಿಸಿದರು. ಈ ಅವಕಾಶವನ್ನು ಬಳಸಿಕೊಂಡ ಫಾರೂಕಿ ಅವರನ್ನು ರನ್ ಔಟ್ ಮಾಡಿದರು. ಹೀಗಾಗಿ ಪಾಕ್ ತಂಡದ 9ನೇ ವಿಕೆಟ್ ಪತನವಾಗಿತ್ತು. ಆ ಬಳಿಕ ಮೊದಲ ಎಸೆತವನ್ನು ಎದುರಿಸಿದ ನಸೀಮ್, ಆ ಎಸೆತವನ್ನು ಬೌಂಡರಿ ಬಾರಿಸಿದದರು. ಹೀಗಾಗಿ ಕೊನೆಯ 5 ಎಸೆತಗಳಲ್ಲಿ ಪಾಕ್ ತಂಡಕ್ಕೆ 7 ರನ್‌ಗಳ ಅಗತ್ಯವಿತ್ತು. ಓವರ್‌ನ ಎರಡನೇ ಎಸೆತ ಡಾಟ್ ಆಯಿತು. ಬೌಲರ್ ಮುಂದಿನ ಎಸೆತದಲ್ಲಿ ಕೇವಲ ಒಂದು ರನ್ ನೀಡಿದರು. ಇದಾದ ಬಳಿಕ ಪಾಕಿಸ್ತಾನಕ್ಕೆ 3 ಎಸೆತಗಳಲ್ಲಿ 6 ರನ್‌ಗಳ ಗುರಿ ಇತ್ತು.

ಬೌಂಡರಿ ಬಾರಿಸಿದ ನಸೀಮ್ ಶಾ

ಹೀಗಾಗಿ ಅಫ್ಘಾನಿಸ್ತಾನದ ಗೆಲುವು ಸನಿಹವಾದಂತೆ ತೋರುತ್ತಿತ್ತು. ಆದರೆ ನಾಲ್ಕನೇ ಎಸೆತದಲ್ಲಿ ಹ್ಯಾರಿಸ್ ರೌಫ್ 3 ರನ್ ಕಲೆಹಾಕಿದರು. ಅಂತಿಮವಾಗಿ ಪಾಕಿಸ್ತಾನದ ಗೆಲುವಿಗೆ 2 ಎಸೆತಗಳಲ್ಲಿ 3 ರನ್ ಅಗತ್ಯವಿತ್ತು. ಈ ಹಂತದಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 2 ಮಾರ್ಗಗಳಿದ್ದವು. ಒಂದೋ ವಿಕೆಟ್ ಪಡೆಯವುದು ಅಥವಾ ರನ್​ಗಳಿಗೆ ಕಡಿವಾಣ ಹಾಕುವುದು. ಆದರೆ ಅಫ್ಘಾನ್ ತಂಡಕ್ಕೆ ಎರಡನ್ನೂ ಮಾಡಲು ಸಾಧ್ಯವಾಗಲಿಲ್ಲ. 5ನೇ ಎಸೆತವನ್ನು ಎದುರಿಸಿದ ನಸೀಮ್ ಶಾ 5 ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅಫ್ಘಾನಿಸ್ತಾನದ ನಿರೀಕ್ಷೆಯನ್ನೆಲ್ಲಾ ಕೊನೆಗೊಳಿಸಿದರು. ನಸೀಮ್ ಬೌಂಡರಿ ಬಾರಿಸುತ್ತಿದ್ದಂತೆ ಪಾಕಿಸ್ತಾನದ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಖುಷಿಯಿಂದ ಕುಣಿದು ಕುಪ್ಪಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 am, Fri, 25 August 23

ತಾಜಾ ಸುದ್ದಿ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
bug9 ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ