Puneeth Rajkumar: ಪುನೀತ್ ಸಮಾಧಿ ದರ್ಶನಕ್ಕೆ ಹರಿದು ಬಂದ ಜನ ಸಾಗರ; ಅಪ್ಪು ಮೇಲಿನ ಅಭಿಮಾನ ನಿರಂತರ
Puneeth Rajkumar Death Anniversary: ಪುನೀತ್ ರಾಜ್ಕುಮಾರ್ ನಿಧನರಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡಿದ್ದು ಕನ್ನಡಿಗರ ದೌರ್ಭಾಗ್ಯ. ಇಂದು ಅಪ್ಪು ಇಲ್ಲ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಆದರೆ ಕಹಿಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಬೇಕಿದೆ. ಪುನೀತ್ ರಾಜ್ಕುಮಾರ್ ನಿಧನರಾಗಿ ಒಂದು ವರ್ಷ (Puneeth Rajkumar Death Anniversary) ಕಳೆದಿದೆ. ಮೊದಲ ವರ್ಷದ ಪುಣ್ಯ ಸ್ಮರಣೆ (ಅ.29) ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಸಮಾಧಿ (Puneeth Rajkumar Samadhi) ನೋಡಲು ಬರುತ್ತಿದ್ದಾರೆ. ಎರಡನೇ ದಿನವೂ ಸಮಾಧಿ ದರ್ಶನಕ್ಕೆ ಬರುವವರ ಸಂಖ್ಯೆ ಕಡಿಮೆ ಆಗಿಲ್ಲ. ಎಷ್ಟೇ ದಿನಗಳು ಉರುಳಿದರೂ ಪುನೀತ್ ಮೇಲೆ ಜನರು ಇಟ್ಟಿರುವ ಅಭಿಮಾನ ತಗ್ಗುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ.
Published on: Oct 30, 2022 06:54 PM
Latest Videos
Latest Videos