ಗೆಳೆಯರೊಂದಿಗೆ ಇಸ್ಪೀಟ್ ಆಡುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಮೈಸೂರು ಜೆಡಿ(ಎಸ್) ಮುಖಂಡ ಅಶ್ವಥ್ ಚಿಯಾ
ಕೆಲ ದಿನಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಅಶ್ವಥ್ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
ಮೈಸೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕದ ಮೂಲಕ ಸಾವು ಜನಸಾಮಾನ್ಯರು ಊಹಿಸಲು ಆಗದಷ್ಟು ಅನಿರೀಕ್ಷಿತವಾಗಿ ಬಿಟ್ಟಿದೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ. ಮೈಸೂರಿನ ಜೆಡಿ(ಎಸ್) ಮುಖಂಡ ಅಶ್ವಥ್ ಚಿಯಾ (Ashwath Chiya) ಅವರು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ರಿಕ್ರಿಯೇಶನ್ ಕ್ಲಬ್ ವೊಂದರಲ್ಲಿ (recreation club) ಗೆಳೆಯರೊಂದಿಗೆ ಇಸ್ಪೀಟ್ ಆಡುವಾಗ ಹೃದಯಾಘಾತಕ್ಕೊಳಗಾಗುವುದು (heart attack) ಕ್ಲಬ್ಬಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕೆಲ ದಿನಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಅಶ್ವಥ್ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
Latest Videos
Latest Videos