ನಳಿನ್ ಕುಮಾರ್ ಕಟೀಲ್ 12 ಬಾಗಿಲುಗಳಿರುವ ತಮ್ಮ ಮನೆಯನ್ನು ಮೊದಲು ರಿಪೇರಿ ಮಾಡಿಸಿಕೊಳ್ಳಲಿ: ಡಿಕೆ ಶಿವಕುಮಾರ

| Updated By: Arun Kumar Belly

Updated on: Oct 29, 2022 | 1:58 PM

ಭಾರತ ಜೋಡೋ ಯಾತ್ರೆ ಮುಂದುವರಿದ ಭಾಗವಾಗಿ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಐಕ್ಯತಾ ಯಾತ್ರೆ ಮಾಡುವುದಾಗಿ ಶಿವಕುಮಾರ ಹೇಳಿದರು.

ಶಿವಮೊಗ್ಗ:  ಕಾಂಗ್ರೆಸ್ ಮನೆಯೊಂದು ಬಾಗಿಲು ಮೂರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar), ಅವರು ಮೊದಲು ತಮ್ಮ ಮನೆ ರಿಪೇರಿ ಮಾಡಿಕೊಳ್ಳಲಿ, ಅವರ ಮನೆಗೆ 12 ಬಾಗಿಲುಗಳಿವೆ ಅಂತ ಹೇಳಿದರು. ಭಾರತ ಜೋಡೋ ಯಾತ್ರೆ (Bharath Jodo Yatra) ಮುಂದುವರಿದ ಭಾಗವಾಗಿ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಐಕ್ಯತಾ ಯಾತ್ರೆ ಮಾಡುವುದಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ ಹೇಳಿದರು.

Published on: Oct 29, 2022 01:58 PM