ಬೆಳಗಾವಿಯ ಖಾನಾಪುರ ಬಳಿ ಚಲಿಸುತ್ತಿದ್ದ ಕಾರೊಂದು ಬೆಂಕಿ ಹೊತ್ತಿಕೊಂಡು ಧಗಧಗ ಉರಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ!

| Updated By: Arun Kumar Belly

Updated on: Oct 29, 2022 | 2:35 PM

ಕಾರಿನಲ್ಲಿದ್ದವರು ಕೂಡಲೇ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಉರಿಯುತ್ತಿರುವ ಕಾರಿನಿಂದ ಏಳುತ್ತಿರುವ ದಟ್ಟ ಹೊಗೆ ಹೆದರಿಕೆ ಹುಟ್ಟಿಸುತ್ತದೆ.

ಬೆಳಗಾವಿ: ಗೋವಾದಿಂದ ಬೆಳಗಾವಿ ಸಿಟಿ (Belagavi City) ಕಡೆ ಬರುತ್ತಿದ್ದ ಗುಜರಾತ ರಾಜ್ಯ ನೋಂದಣಿಯ ಕಾರೊಂದು ಖಾನಾಪುರಗೆ (Khanapur) ಹತ್ತಿರದ ಚೊರ್ಲ ಘಾಟ್ ಬಳಿ ಚಲಿಸುತ್ತಿರುವಾಗಲೇ ಇದಕ್ಕಿದ್ದಂತೆ ಹೊತ್ತಿಯುರಿದ ಘಟನೆ ಜರುಗಿದ್ದು ಸ್ಥಳೀಯರು ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದಾರೆ. ಕಾರಿನಲ್ಲಿದ್ದವರು ಕೂಡಲೇ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಉರಿಯುತ್ತಿರುವ ಕಾರಿನಿಂದ ಏಳುತ್ತಿರುವ ದಟ್ಟ ಹೊಗೆ ಹೆದರಿಕೆ ಹುಟ್ಟಿಸುತ್ತದೆ ಮಾರಾಯ್ರೇ. ಖಾನಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.