ಸೋಮಣ್ಣನನ್ನೂ ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ ತಾವು ಬರಲ್ಲ ಅಂತ ವರುಣಾ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ!

| Updated By: Arun Kumar Belly

Updated on: Oct 31, 2022 | 3:03 PM

ವಿರೋಧ ಪಕ್ಷದ ನಾಯಕರು, ಬಿಜೆಪಿ ನಾಯಕರನ್ನು ಅದರಲ್ಲೂ ವಿಶೇಷವಾಗಿ ವಸತಿ ಸಚಿವ ವಿ ಸೋಮಣ್ಣನವರನ್ನು ಆಹ್ವಾನಿದರೆ ತಾವು ಬರೋದಿಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾರೆ!

ಮೈಸೂರು: ಸಿದ್ದರಾಮಯ್ಯನವರನ್ನು (Siddaramaiah) ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾದರೆ ಅವರದ್ದೊಂದು ಷರತ್ತನ್ನು ಒಪ್ಪಿಕೊಳ್ಳಲೇ ಬೇಕು. ಷರತ್ತು ಏನಂತ ಅವರ ಬಾಯಲ್ಲೇ ಕೇಳಿ. ಸಿದ್ದರಾಮಯ್ಯ ಹಿಂದೆ ಪ್ರತಿನಿಧಿಸುತ್ತಿದ್ದ ವರುಣಾ ಕ್ಷೇತ್ರದ (Varuna Constituency) ಜನ ಮೈಸೂರು ನಗರದ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾಗಿ ಕಾರ್ಯಕ್ರಮವೊಂದಕ್ಕೆ ಬರಬೇಕು ಅಂತ ಆಹ್ವಾನಿಸುತ್ತಾರೆ. ಅದಕ್ಕೆ ವಿರೋಧ ಪಕ್ಷದ ನಾಯಕರು, ಬಿಜೆಪಿ ನಾಯಕರನ್ನು ಅದರಲ್ಲೂ ವಿಶೇಷವಾಗಿ ವಸತಿ ಸಚಿವ ವಿ ಸೋಮಣ್ಣನವರನ್ನು (V Somanna) ಆಹ್ವಾನಿದರೆ ತಾವು ಬರೋದಿಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾರೆ!