ನಿಷೇಧದ ನಡುವೆಯೂ ಸಿಡಿ ಉತ್ಸವಕ್ಕೆ ಶಾಸಕ ರೇಣುಕಾಚಾರ್ಯ ಚಾಲನೆ

|

Updated on: Jan 28, 2020 | 4:53 PM

ದಾವಣಗೆರೆ: ಸರ್ಕಾರದ ನಿಷೇಧದ ನಡುವೆಯೂ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪದಲ್ಲಿ ಐತಿಹಾಸಿಕ ಸಿಡಿ ಉತ್ಸವ ಸರಾಗವಾಗಿ ನಡೆದಿದೆ. ಈ ಉತ್ಸವಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಜೊತೆ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಚಾಲನೆ ನೀಡಿದ್ದಾರೆ. ಕೆಂಚಿಕೊಪ್ಪದ ಗ್ರಾಮದೇವತೆ ಜಾತ್ರೆ ಪ್ರಯುಕ್ತ ನಡೆಯುವ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯನ್ನ ಕಂಬಕ್ಕೆ ಕಟ್ಟಿ ಆಕಾಶದಲ್ಲಿ ಸುತ್ತಾಡಿಸುವ ಅನಿಷ್ಟ ಪದ್ಧತಿ ಇದೆ. ಹೀಗಾಗಿ ಸರ್ಕಾರ ಈ ಉತ್ಸವವನ್ನು ನಿಷೇಧ ಮಾಡಿತ್ತು. ಆದರೆ ಇಂದು ಈ ಅನಿಷ್ಟ ಆಚರಣೆ ಜೀವಂತವಾಗಿದೆ. ಉತ್ಸವದಲ್ಲಿ […]

ನಿಷೇಧದ ನಡುವೆಯೂ ಸಿಡಿ ಉತ್ಸವಕ್ಕೆ ಶಾಸಕ ರೇಣುಕಾಚಾರ್ಯ ಚಾಲನೆ
Follow us on

ದಾವಣಗೆರೆ: ಸರ್ಕಾರದ ನಿಷೇಧದ ನಡುವೆಯೂ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪದಲ್ಲಿ ಐತಿಹಾಸಿಕ ಸಿಡಿ ಉತ್ಸವ ಸರಾಗವಾಗಿ ನಡೆದಿದೆ. ಈ ಉತ್ಸವಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಜೊತೆ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಚಾಲನೆ ನೀಡಿದ್ದಾರೆ.

ಕೆಂಚಿಕೊಪ್ಪದ ಗ್ರಾಮದೇವತೆ ಜಾತ್ರೆ ಪ್ರಯುಕ್ತ ನಡೆಯುವ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯನ್ನ ಕಂಬಕ್ಕೆ ಕಟ್ಟಿ ಆಕಾಶದಲ್ಲಿ ಸುತ್ತಾಡಿಸುವ ಅನಿಷ್ಟ ಪದ್ಧತಿ ಇದೆ. ಹೀಗಾಗಿ ಸರ್ಕಾರ ಈ ಉತ್ಸವವನ್ನು ನಿಷೇಧ ಮಾಡಿತ್ತು. ಆದರೆ ಇಂದು ಈ ಅನಿಷ್ಟ ಆಚರಣೆ ಜೀವಂತವಾಗಿದೆ. ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.

Published On - 4:25 pm, Tue, 28 January 20