ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಕ್ ನೀಡಿದೆ. ಇನ್ಮುಂದೆ ರಸ್ತೆಗಳಲ್ಲಿ ಓಡಾಡಬೇಕಂದ್ರೆ ತೆರಿಗೆ ಪಾವತಿಸಬೇಕಂತೆ. ಈ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಮುಂದಾಗಿದೆ.
ಇನ್ಮುಂದೆ ಭೂ ಸಾರಿಗೆ ತೆರಿಗೆ ಸಂಗ್ರಹಕ್ಕೆ ಪಾಲಿಕೆ ನಿರ್ಣಯಿಸಿದ್ದು, ಆಸ್ತಿ ತೆರಿಗೆ ಜೊತೆಯಲ್ಲೇ ಶೇ.2ರಷ್ಟು ಭೂಸಾರಿಗೆ ತೆರಿಗೆ ಕಟ್ಟಬೇಕಿದೆ. ಈಗಾಗಲೇ ಹಲವು ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಸಮಯದಲ್ಲಿ ಭೂ ಸಾರಿಗೆ ತೆರಿಗೆ ಮೂಲಕ ಸಾರ್ವಜನಿಕರ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.
ಭೂ ಸಾರಿಗೆ ತೆರಿಗೆ ಮೂಲಕ ವಾರ್ಷಿಕವಾಗಿ ₹150 ಕೋಟಿಗೂ ಹೆಚ್ಚಿನ ಆದಾಯವನ್ನು ಬಿಬಿಎಂಪಿ ನಿರೀಕ್ಷಿಸುತ್ತಿದೆ. ಹೆಚ್ಚುವರಿ ಭೂಸಾರಿಗೆ ತೆರಿಗೆಯನ್ನು ಸರ್ಕಾರಕ್ಕೆ ನೀಡದೆ ಅದೇ ಹಣವನ್ನು ಮತ್ತೆ ರಸ್ತೆ ಅಭಿವೃದ್ಧಿಗೆ ಬಳಸಲು ಪಾಲಿಕೆ ನಿರ್ಧಾರ ಮಾಡಿದೆ. ವಿರೋಧದ ನಡುವೆಯೂ ಇಂದಿನ ಕೌನ್ಸಿಲ್ ಸಭೆಯಲ್ಲಿ ಭೂ ಸಾರಿಗೆ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಆಡಳಿತ ಪಕ್ಷ ಅನುಮೋದನೆ ನೀಡಿದೆ.
Published On - 4:28 pm, Tue, 28 January 20