ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಮಮೂರ್ತಿ ಅಲಿಯಾಸ್ ವಿನಾಯಕ ಹಾಗೂ ಕಾರ್ತಿಕ್ ಅಲಿಯಾಸ್ ಕುಟ್ಟಿ ಬಂಧಿತ ಆರೋಪಿಗಳು.
ಆರೋಪಿಗಳು ಜ.11ರಂದು ನಗರದ ಎನ್.ಆರ್.ಕಾಲೋನಿ ಬಳಿ ಮಹಿಳೆಯ ಸರಗಳ್ಳತನ ಮಾಡಿದ್ದರು. ಮೊದಲಿಗೆ ಆರೋಪಿಗಳು ಓಎಲ್ಎಕ್ಸ್ನಲ್ಲಿ ಬೈಕ್ ಖರೀದಿಸುತ್ತಿದ್ದರು. ನಂತರ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಖರೀದಿಸಿದ ಬೈಕ್ನಲ್ಲೇ ಬಂದು ಸರಗಳ್ಳತನ ಮಾಡುತ್ತಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಬಸವನಗುಡಿ ಪೊಲೀಸರು ಆರೋಪಿಗಳನ್ನು ಖೆಡ್ಡಾಗಿ ಬೀಳಿಸಿದ್ದಾರೆ.
ಇದೇ ವೇಳೆ ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 9 ಪ್ರಕರಣಗಳು ಬಯಲಾಗಿವೆ. ಬಂಧಿತ ಆರೋಪಿಗಳಿಂದ 1.50 ಲಕ್ಷ ಮೌಲ್ಯದ 3 ಬೈಕ್ಗಳು, 12.28 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published On - 12:23 pm, Tue, 28 January 20