Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್

| Updated By: Zahir Yusuf

Updated on: May 25, 2022 | 10:12 PM

IPL 2022 Rajat Patidar: ಒಂದೆಡೆ ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ರಜತ್ ಪಾಟಿದಾರ್ ಬಿರುಸಿನ ಇನಿಂಗ್ಸ್ ಆಡಿದರು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ಬೆಂಡೆತ್ತಿದ ಪಾಟಿದಾರ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Rajat Patidar
Follow us on

IPL 2022: ಐಪಿಎಲ್ ಸೀಸನ್ 15 ರ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ (RCB) ತಂಡದ ಯುವ ಬ್ಯಾಟ್ಸ್​ಮನ್ ರಜತ್ ಪಾಟಿದಾರ್ (Rajat Patidar) ಅಬ್ಬರಿಸಿ ಬೊಬ್ಬಿರಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಲಕ್ನೋ ತಂಡದ ಯುವ ಬೌಲರ್ ಮೊಹ್ಸಿನ್ ಖಾನ್ ಮೊದಲ ಓವರ್​ನಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಒಂದೆಡೆ ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ರಜತ್ ಪಾಟಿದಾರ್ ಬಿರುಸಿನ ಇನಿಂಗ್ಸ್ ಆಡಿದರು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ಬೆಂಡೆತ್ತಿದ ಪಾಟಿದಾರ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅದರಲ್ಲೂ ರವಿ ಬಿಷ್ಣೋಯ್ ಓವರ್​ನಲ್ಲಿ 27 ರನ್​ ಸಿಡಿಸುವ ಮೂಲಕ ಅಬ್ಬರಿಸಿದರು. ಈ ನಡುವೆ ದೀಪಕ್ ಹೂಡಾ ಹಾಗೂ ಮನನ್ ವೋಹ್ರಾ ಕೈಬಿಟ್ಟ ಕ್ಯಾಚ್​ನಿಂದ ಸಿಕ್ಕ ಜೀವದಾನವನ್ನು ಬಳಸಿಕೊಂಡ ಪಾಟಿದಾರ್ ಬ್ಯಾಟಿಂಗ್ ಅಬ್ಬರ ಮುಂದುವರೆಸಿದರು.

ಇದನ್ನೂ ಓದಿ
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಅದರಂತೆ ಮೊಹ್ಸಿನ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಎಲಿಮಿನೇಟರ್​ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ದಾಖಲೆ ಬರೆದರು. ಅಷ್ಟೇ ಅಲ್ಲದೆ ಪ್ಲೇಆಫ್ ಹಂತದಲ್ಲಿ ಸೆಂಚುರಿ ಸಿಡಿಸಿದ 5ನೇ ಆಟಗಾರ ಎಂಬ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡರು.

ಇದಲ್ಲದೆ ನಾಕೌಟ್/ಪ್ಲೇಆಫ್ ಹಂತದಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆ ಕೂಡ ರಜತ್ ಪಾಟಿದಾರ್ ಪಾಲಾಗಿದೆ. ಅಂದರೆ ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಪ್ಲೇಆಫ್​ ಹಂತದಲ್ಲಿ ಆರ್​ಸಿಬಿ ಪರ ಯಾವುದೇ ಬ್ಯಾಟ್ಸ್​ಮನ್ ಮೂರಂಕಿ ರನ್​ ಕಲೆಹಾಕಿಲ್ಲ. ಇದೇ ಮೊದಲ ಬಾರಿಗೆ ಶತಕ ಸಿಡಿಸುವ ಮೂಲಕ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ರಜತ್ ಪಾಟಿದಾರ್ 7 ಭರ್ಜರಿ ಸಿಕ್ಸ್ ಹಾಗೂ 12 ಬೌಂಡರಿಗಳೊಂದಿಗೆ 54 ಎಸೆತಗಳಲ್ಲಿ 112 ರನ್​ ಗಳಿಸಿದರು. ಈ ಮೂಲಕ ಆರ್​ಸಿಬಿ ತಂಡದ ಮೊತ್ತವನ್ನು ನಿಗದಿತ 20 ಓವರ್​ಗಳಲ್ಲಿ 207 ರನ್​ಗಳಿಗೆ ತಲುಪಿಸುವಲ್ಲಿ ರಜತ್ ಪಾಟಿದಾರ್ ಪ್ರಮುಖ ಪಾತ್ರವಹಿಸಿದರು.

ಆರ್​ಸಿಬಿ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ , ಗ್ಲೆನ್ ಮ್ಯಾಕ್ಸ್‌ವೆಲ್ , ಮಹಿಪಾಲ್ ಲೊಮ್ರೋರ್ , ದಿನೇಶ್ ಕಾರ್ತಿಕ್ , ಶಹಬಾಜ್ ಅಹ್ಮದ್ , ವನಿಂದು ಹಸರಂಗ , ಹರ್ಷಲ್ ಪಟೇಲ್ , ಜೋಶ್ ಹ್ಯಾಜಲ್‌ವುಡ್ , ಮೊಹಮ್ಮದ್ ಸಿರಾಜ್

ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, KL ರಾಹುಲ್ (ನಾಯಕ) , ಎವಿನ್ ಲೂಯಿಸ್ , ದೀಪಕ್ ಹೂಡಾ , ಮನನ್ ವೋಹ್ರಾ , ಮಾರ್ಕಸ್ ಸ್ಟೋನಿಸ್ , ಕೃನಾಲ್ ಪಾಂಡ್ಯ , ದುಷ್ಮಂತ ಚಮೀರಾ , ಮೊಹ್ಸಿನ್ ಖಾನ್ , ಅವೇಶ್ ಖಾನ್ , ರವಿ ಬಿಷ್ಣೋಯ್

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.