ದೆಹಲಿ, ಆ.23: ದೇಶವೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 (Chandrayaan-3) ಇಂದು (ಆ.23) ಸಂಜೆ 6:04ಕ್ಕೆ ಚಂದ್ರನ ಮೇಲೆ ಇಳಿಯಲಿದೆ. ಇಸ್ರೋ ವಿಜ್ಞಾನಿಗಳ ಅದೆಷ್ಟೋ ಸಮಯಗಳ ಪ್ರಯತ್ನ ಇಂದು ಫಲಿಸಲಿದೆ. ಅದಕ್ಕಾಗಿ ದೇಶದ್ಯಾಂತ ಪೂಜೆ, ಪ್ರಾರ್ಥನೆಗಳು ನಡೆಯುತ್ತಿದೆ. ಧರ್ಮ ಭೇದಗಳಿಲ್ಲದೆ, ಎಲ್ಲರೂ ಕೂಡ ಚಂದ್ರಯಾನ-3 ಯಶಸ್ಸಿಗೆ ಬೇಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ (Seema Haider) ಚಂದ್ರಯಾನ-3 ಯಶಸ್ಸಿಗೆ ಉಪವಾಸ ಮಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇದೀಗ ಈ ವಿಡಿಯೊ ಎಲ್ಲರ ಗಮನ ಸೆಳೆದಿದೆ.
ಸಚಿನ್ ಮೀನಾ ಅವರೊಂದಿಗೆ ನೋಯ್ಡಾದಲ್ಲಿ ವಾಸಿಸುತ್ತಿರುವ ಸೀಮಾ ಹೈದರ್ ಅವರು ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್‌ಗಾಗಿ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ವಿಜಯ ಸಾಧಿಸುವವರೆಗೆ ತಾನು ಉಪವಾಸವನ್ನು ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೀಗ ಈ ವೀಡಿಯೊ ವೈರಲ್ ಆಗಿದ್ದು, ಎಲ್ಲ ಕಡೆದ ಈ ಸುದ್ದಿ ಟ್ರೆಂಡಿಂಗ್ ಆಗುತ್ತಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಿಸಿ, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದ ಸೀಮಾ ಹೈದರ್
ಈ ವೀಡಿಯೊದಲ್ಲಿ, ಸೀಮಾ ಹೈದರ್ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ಗೌರವದಿಂದ ಪ್ರಾರ್ಥನೆ ಮಾಡುತ್ತಿರುವುದನ್ನು ಕಾಣಬಹುದು. ”ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲದಿದ್ದರು. ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್ ಆಗುವಂತೆ ನಾನು ಉಪವಾಸವನ್ನು ಆಚರಿಸುತ್ತಿದ್ದೇನೆ. ಈ ಸಾಧನೆಯು ಭಾರತದ ಭವಿಷ್ಯಕ್ಕೆ ದೊಡ್ಡ ಭರವಸೆ. ನನ್ನ ಈ ಉಪವಾಸ ಚಂದ್ರಯಾನ 3 ಯಶಸ್ವಿ ಆಗುವವರೆಗೆ ನಾನು ಮುಂದುವರಿಸುವೇ ಎಂದು ಹೇಳಿದ್ದಾರೆ. ಇನ್ನು ನಾನು ನಂಬಿರುವ ರಾಧೆ ಕೃಷ್ಣ, ಶ್ರೀರಾಮ ಖಂಡಿತ ನನ್ನ ಉಪವಾಸಕ್ಕೆ ಫಲ ನೀಡುತ್ತಾರೆ ಎಂದು ಹೇಳಿದ್ದಾರೆ.
Pakistani bride of #SachinMeena, #SeemaHaider fasting today for the success of #Chandrayaan3Landing
She praises Prime Minister Narendra Modi and said she will break her fast only after #Chandrayaan3 lands on the Moon successfully. pic.twitter.com/1Lec5Cn1Zs
— Shameela (@shaikhshameela) August 23, 2023
ನಮ್ಮ ಪ್ರಧಾನಿಯವರು (ನರೇಂದ್ರ ಮೋದಿ) ಈ ಯೋಜನೆಗಾಗಿ ಶ್ರಮಿಸಿದ್ದಾರೆ. ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್ನಿಂದ ಜಾಗತಿಕವಾಗಿ ಭಾರತದ ಮಹತ್ವ ಸಾಧನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಬಂದಿರುವ ಸೀಮಾ ಹೈದರ್, 2019-20ರಲ್ಲಿ ಆನ್‌ಲೈನ್ ಗೇಮ್ PUBGಯಿಂದ 22 ವರ್ಷದ ಸಚಿನ್ ಮೀನಾ ಅವರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ಇಬ್ಬರು ಪರಸ್ಪರ ಪ್ರೀತಿಸಿ, Whatsapp ಮತ್ತು Instagram ನಲ್ಲಿ ಸಂಪರ್ಕ ಸಾಧಿಸಿಕೊಂಡು. ಮೇ 13 ರಂದು ಪಾಕಿಸ್ತಾನದ ಮೂಲಕ ಬಸ್‌ನಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆಕೆಯನ್ನು ಬಂಧಿಸಲಾಯಿತು. ಆದರೆ, ಜುಲೈ 7ರಂದು ಸ್ಥಳೀಯ ನ್ಯಾಯಾಲಯ ಆಕೆಗೆ ಜಾಮೀನು ನೀಡಿತ್ತು. ದಂಪತಿಗಳು ಈಗ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ