ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ಗಳ ಕೊರತೆ ಎದುರಾಗಿದೆ. ಹೀಗಾಗಿ ಸೋಂಕಿತರು ಮನೆಯಲ್ಲೇ ಕಾಲ ಕಳೆಯುವಂತ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್ಗೂ ಸೌಲಭ್ಯದ ಕೊರತೆ ಎದುರಾಗಿದೆ.
ಆಂಬ್ಯುಲೆನ್ಸ್ಗಾಗಿ 16 ಗಂಟೆ ಕಾದಾಟ!
ಕೊರೊನಾ ಕರ್ತವ್ಯದಲ್ಲಿದ್ದ ಹಗರಿಬೊಮ್ಮನಹಳ್ಳಿ ತಾಲೂಕಿನ ಸೋಂಕಿತ ಪೇದೆಗೂ ಆಂಬ್ಯುಲೆನ್ಸ್ ಕೊರತೆ ಎದುರಾಗಿದೆ. ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡರು ಬೆಲೆ ಸಿಕ್ಕಿಲ್ಲ. ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ಹೋಗಲು ಸತತ 16 ಗಂಟೆಗಳ ಕಾಲ ಬಳ್ಳಾರಿಯ ಪೇದೆ ಪರದಾಡಿದ್ದಾರೆ.
ಪೊಲೀಸ್ ಅಧಿಕಾರಿಯ ಅಳಲು!
ಕೊರೊನಾ ಬಂದಿದ್ದರೂ ನಮ್ಮ ಪೇದೆಗೆ ಌಂಬುಲೆನ್ಸ್ ಸಿಗಲಿಲ್ಲ. ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಜನರೇ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ಯಾರನ್ನೂ ನಂಬಬೇಡಿ. ಪೊಲೀಸರಿಗಾದರೂ ಚಿಕಿತ್ಸೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಪೇದೆಗೆ ಕೊರೊನಾ ಬಂದರೂ ಆಂಬ್ಯುಲೆನ್ಸ್ ಸಿಗದಿದ್ದಕ್ಕೆ ಬೇಸರವಾಗಿದೆ. ಕೊರೊನಾ ಟೆಸ್ಟ್ಗೂ ಹಿಂದೇಟು ಹಾಕುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಹಿರಿಯ ಅಧಿಕಾರಿ ಆಕ್ರೂಶ ಹೊರ ಹಾಕಿದ್ದಾರೆ.
Published On - 10:17 am, Mon, 29 June 20