ರಾಯಚೂರು: ಜೂನ್ 27ರಂದು ನಡೆದ SSLC ಗಣಿತ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ನೀಡುವಲ್ಲಿ ಎಡವಟ್ಟು ಮಾಡಿದ್ದ ನಾಲ್ವರು ಶಿಕ್ಷಕರನ್ನ ಅಮಾನತು ಮಾಡಲಾಗಿದೆ. ಪರೀಕ್ಷಾ ಕರ್ತವ್ಯದಲ್ಲಿದ್ದ ಮೂವರು ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಓರ್ವ ಪ್ರೌಢ ಶಾಲೆ ಶಿಕ್ಷಕನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
ಜಿಲ್ಲೆಯ ಸಿಂಧನೂರಿನಲ್ಲಿರುವ ಶ್ರೀಕೃಷ್ಣದೇವರಾಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ನಾಲ್ವರು ಶಿಕ್ಷಕರು ಹೊಸ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡುವ ಬದಲು ಹಳೆ ಪಠ್ಯ ಕ್ರಮದ ಪ್ರಶ್ನೆ ಪತ್ರಿಕೆ ನೀಡಿ ಎಡವಟ್ಟು ಮಾಡಿದ್ದರು. ಇದರಿಂದ ಪರೀಕ್ಷೆ ಬರೆದ ಎಂಟು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಹೀಗಾಗಿ ಇಲಾಖೆಯು ಶಿಕ್ಷಕರ ಮೇಲೆ ಕ್ರಮ ಜರುಗಿಸಿದೆ.
Published On - 10:37 am, Mon, 29 June 20