ಆಸ್ಪತ್ರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊರೊನಾ ಶಂಕಿತ ಆಟೋ ಚಾಲಕ ಬಲಿ

|

Updated on: Jun 29, 2020 | 10:25 AM

ಬೆಂಗಳೂರು: ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊರೊನಾ ಶಂಕಿತ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಸತತ ಮೂರು ದಿನಗಳ ಕಾಲ ಆಸ್ಪತ್ರೆಗಳಿಗೆ ಅಲೆದಾಡಿದ ಶಂಕಿತ ಆಟೋ ಡ್ರೈವರ್ ಕೊನೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಆಟೋ ಚಾಲಕ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕೊವಿಡ್​ ಟೆಸ್ಟ್ ಮಾಡಿಸೋಕೆ ಹಲವಾರು ಆಸ್ಪತ್ರೆಗೆ ಹೋದ್ರೂ ಯಾರೂ ಸರಿಯಾಗಿ ಸ್ಪಂದಿಸಲಿಲ್ಲವಂತೆ. ಹೀಗಾಗಿ ಆಸ್ಪತ್ರೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ […]

ಆಸ್ಪತ್ರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊರೊನಾ ಶಂಕಿತ ಆಟೋ ಚಾಲಕ ಬಲಿ
Follow us on

ಬೆಂಗಳೂರು: ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊರೊನಾ ಶಂಕಿತ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಸತತ ಮೂರು ದಿನಗಳ ಕಾಲ ಆಸ್ಪತ್ರೆಗಳಿಗೆ ಅಲೆದಾಡಿದ ಶಂಕಿತ ಆಟೋ ಡ್ರೈವರ್ ಕೊನೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಆಟೋ ಚಾಲಕ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕೊವಿಡ್​ ಟೆಸ್ಟ್ ಮಾಡಿಸೋಕೆ ಹಲವಾರು ಆಸ್ಪತ್ರೆಗೆ ಹೋದ್ರೂ ಯಾರೂ ಸರಿಯಾಗಿ ಸ್ಪಂದಿಸಲಿಲ್ಲವಂತೆ. ಹೀಗಾಗಿ ಆಸ್ಪತ್ರೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ಬಲಿಯಾಗಿದ್ದಾನೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿಯೇ ಶವ ಇಟ್ಟು ಪರದಾಡಿದ ಕುಟುಂಬಸ್ಥರು
ವಿಪರ್ಯಾಸವೆಂದರೆ ಅನಾರೋಗ್ಯದಿಂದ ಬಳಲಿ ಶಂಕಿತ ನಿನ್ನೆ ಮಧ್ಯಾಹ್ನ 12 ಗಂಟೆಗೆ ಕೊನೆಯುಸಿರೆಳೆದರು. ಆದರೆ, ಚಾಲಕ ಮೃತ ಪಟ್ಟು ಹಲವಾರು ಗಂಟೆ ಕಳೆದ್ರೂ ಕೇರ್ ಮಾಡದ ಅಧಿಕಾರಿಗಳು ಭಾನುವಾರದ ನೆಪ ಹೇಳಿ ಶವ ಕೊಂಡೊಯ್ಯದೆ ಸಬೂಬು ನೀಡಿದ್ದಾರೆ. ಹಾಗಾಗಿ, ಶವವನ್ನು ರಾತ್ರಿಯಿಡೀ ಮನೆಯಲ್ಲಿಯೇ ಇಡಲಾಗಿತ್ತು. ಇದರಿಂದ, ಬೇರೆಯವರಿಗೂ ಸೋಂಕು ಹರಡುವ ಸಾಧ್ಯತೆ ಎದುರಾಗಿದೆ.

Published On - 10:09 am, Mon, 29 June 20