10 ವರ್ಷ ಬಳಿಕ ತುಂಬಿದ ಸೂಳೆಕೆರೆಗೆ ಮತ್ತೆ ಜೀವಕಳೆ, ಆಕರ್ಷಣೆಯೂ ಹೆಚ್ಚಾಯಿತು!

|

Updated on: Jan 06, 2020 | 11:46 AM

ದಾವಣಗೆರೆ: ಕಣ್ಣು ಹಾಯಿಸಿದಷ್ಟು ಜಲರಾಶಿ. ಎಲ್ಲಿ ನೋಡಿದರಲ್ಲಿ ಜನಜಾತ್ರೆ. ಸುತ್ತಲು ಬೆಟ್ಟಗುಡ್ಡ. ಇಂತಹ ಜಾಗವನ್ನ ಕೆಲವ್ರು ಕಬಳಿಸಿ, ರಾಜರೋಷವಾಗಿ ಓಡಾಡ್ತಿದ್ರು. ನಮ್ಮನ್ನ ಯಾರು ಮಾತನಾಡಿಸಲ್ಲ ಅಂದುಕೊಂಡಿದ್ರು. ಆದ್ರೀಗ, ಭೂಗಳ್ಳರಿಗೆ ಆಟಕ್ಕೆ ಬ್ರೇಕ್ ಬೀಳವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಅಂದ್ಹಾಗೆ, ಇದು ದಾವಣಗೆರೆ ಚನ್ನಗಿರಿ ತಾಲೂಕಿನ ಸೂಳೆಕೆರೆ. ಭಾರತ ಮಾತ್ರವಲ್ಲ ಇಡಿ ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಕೆರೆ. ಈ ಕೆರೆ ಹಿಂದೊಮ್ಮೆ ಅಂದ್ರೆ 2009ರಲ್ಲಿ ಭರ್ತಿಯಾಗಿತ್ತು. ಇದಾದ ಬಳಿಕ ಖಾಲಿ ಖಾಲಿ ಕೆರೆಯಾಗಿತ್ತು. ಇದನ್ನ ನೋಡಿದ ಜನ […]

10 ವರ್ಷ ಬಳಿಕ ತುಂಬಿದ ಸೂಳೆಕೆರೆಗೆ ಮತ್ತೆ ಜೀವಕಳೆ, ಆಕರ್ಷಣೆಯೂ ಹೆಚ್ಚಾಯಿತು!
Follow us on

ದಾವಣಗೆರೆ: ಕಣ್ಣು ಹಾಯಿಸಿದಷ್ಟು ಜಲರಾಶಿ. ಎಲ್ಲಿ ನೋಡಿದರಲ್ಲಿ ಜನಜಾತ್ರೆ. ಸುತ್ತಲು ಬೆಟ್ಟಗುಡ್ಡ. ಇಂತಹ ಜಾಗವನ್ನ ಕೆಲವ್ರು ಕಬಳಿಸಿ, ರಾಜರೋಷವಾಗಿ ಓಡಾಡ್ತಿದ್ರು. ನಮ್ಮನ್ನ ಯಾರು ಮಾತನಾಡಿಸಲ್ಲ ಅಂದುಕೊಂಡಿದ್ರು. ಆದ್ರೀಗ, ಭೂಗಳ್ಳರಿಗೆ ಆಟಕ್ಕೆ ಬ್ರೇಕ್ ಬೀಳವ ಎಲ್ಲಾ ಲಕ್ಷಣಗಳು ಕಾಣ್ತಿದೆ.

ಅಂದ್ಹಾಗೆ, ಇದು ದಾವಣಗೆರೆ ಚನ್ನಗಿರಿ ತಾಲೂಕಿನ ಸೂಳೆಕೆರೆ. ಭಾರತ ಮಾತ್ರವಲ್ಲ ಇಡಿ ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಕೆರೆ. ಈ ಕೆರೆ ಹಿಂದೊಮ್ಮೆ ಅಂದ್ರೆ 2009ರಲ್ಲಿ ಭರ್ತಿಯಾಗಿತ್ತು. ಇದಾದ ಬಳಿಕ ಖಾಲಿ ಖಾಲಿ ಕೆರೆಯಾಗಿತ್ತು. ಇದನ್ನ ನೋಡಿದ ಜನ ತೀವ್ರ ಬೇಸರಗೊಂಡಿದ್ದರು. ಆದ್ರೀಗ ಬರೋಬರಿ ಹತ್ತು ವರ್ಷಗಳ ಬಳಿಕ ಪ್ರಕೃತಿಯಲ್ಲಿ ಕೌತುವೆ ನಡೆದಿದೆ. ಕೆರೆ ಭರ್ತಿಯಾಗಿದೆ. ಹೀಗೆ ಕೆರೆ ತುಂಬಿದ್ದು ರೈತಾಪಿ ಜನಕ್ಕೆ ಸಂತಸ ತಂದಿದೆ. ಆದ್ರೆ, ಶತಮಾನಗಳಿಂದ ಕೆರೆಯ ಅಂಗಳವನ್ನ ಸರ್ವನಾಶ ಮಾಡಿದ ಭೂಕಬಳಿಕೆದಾರಿಗೆ ಮಾತ್ರ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಸೂಳೆಕೆರೆ ಹೋರಾಟ ಸಮಿತಿಯ ಪ್ರಯತ್ನ. ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಸಂಕಲ್ಪ.

ಇನ್ನು, ಈ ಕೆರೆ ಪ್ರವಾಸಿ ತಾಣ ಆಗಬೇಕು ಎಂಬುದು ಬಹುದಿನಗಳ ಬೇಡಿಕೆ. ಹಲವು ದಶಕಗಳಿಂದ ಇದೇ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚಾಗಿ ಪ್ರವಾಸಿ ತಾಣ ಆಗಿ ಪರಿವರ್ತನೆ ಆಗ್ಲೇ ಇಲ್ಲ. ಆದ್ರೆ, ನಿನ್ನೆ ಇದೇ ಕೆರೆಯಲ್ಲಿ ಜಲ ಕ್ರೀಡೆಗೆ ಚಾಲನೆ ಸಿಕ್ಕಿದೆ. ಅಲ್ದೆ, ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಗೆ ಸರ್ವೇ ಮಾಡಲು ಆದೇಶಿಸಲಾಗಿದೆ. ಜೊತೆಗೆ ಯಾವುದೇ ಕಾರಣಕ್ಕೂ ಸರ್ವೇ ಕಾರ್ಯ ನಿಲ್ಲುವಂತಿಲ್ಲ. ಬರುವ ಫೆಬ್ರುವರಿಯಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸದ್ಯ, ಈ ಸ್ಥಳದಲ್ಲಿ ಪ್ರವಾಸೋಧ್ಯಮ ಇಲಾಖೆಯ ಚಟುವಟಿಕೆ ಆರಂಭ ಆಗುತ್ತಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜನಾಕರ್ಷಣೆಯ ತಾಣವಾಗಿ ಬೆಳೆಯಲಿದೆ. ಅಲ್ದೆ, ಒತ್ತುವರಿ ತೆರವು ಕಾರ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ.

Published On - 8:59 am, Mon, 6 January 20