ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

|

Updated on: Jan 06, 2020 | 12:13 PM

ದಾವಣಗೆರೆ: ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ನಿವೃತ್ತ ಯೋಧರಾದ ಸಾಸಲು ಗ್ರಾಮದ ಜಯಣ್ಣ, ದಾವಣಗೆರೆಯ ಕೆಟಿಜೆ ನಗರದ ಸುಶೀಲಕುಮಾರ ಹಾಗು ತುರ್ಚುಘಟ ಗ್ರಾಮದ ಶ್ರೀನಿವಾಸ್​ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಮೂವರು 20 ವರ್ಷಗಳ ಕಾಲ ಬಿಎಸ್ಎಫ್​ನಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯಾಗಿ ದಾವಣಗೆರೆಗೆ ಆಗಮಿಸಿದ ಯೋಧರಿಗೆ ಕುಟುಂಬಸ್ಥರು ಆರತಿ ಮಾಡಿ ತಿಲಕವಿಟ್ಟು ಸ್ವಾಗತ ಕೋರಿದ್ದಾರೆ. ನಿವೃತ್ತ ಯೋಧರ ಸಂಘ ಹಾಗು ಹಿಂದೂ ಜಾಗರಣ ವೇದಿಕೆಯಿಂದಲೂ ಅದ್ಧೂರಿ […]

ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ
Follow us on

ದಾವಣಗೆರೆ: ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ನಿವೃತ್ತ ಯೋಧರಾದ ಸಾಸಲು ಗ್ರಾಮದ ಜಯಣ್ಣ, ದಾವಣಗೆರೆಯ ಕೆಟಿಜೆ ನಗರದ ಸುಶೀಲಕುಮಾರ ಹಾಗು ತುರ್ಚುಘಟ ಗ್ರಾಮದ ಶ್ರೀನಿವಾಸ್​ಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಈ ಮೂವರು 20 ವರ್ಷಗಳ ಕಾಲ ಬಿಎಸ್ಎಫ್​ನಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯಾಗಿ ದಾವಣಗೆರೆಗೆ ಆಗಮಿಸಿದ ಯೋಧರಿಗೆ ಕುಟುಂಬಸ್ಥರು ಆರತಿ ಮಾಡಿ ತಿಲಕವಿಟ್ಟು ಸ್ವಾಗತ ಕೋರಿದ್ದಾರೆ. ನಿವೃತ್ತ ಯೋಧರ ಸಂಘ ಹಾಗು ಹಿಂದೂ ಜಾಗರಣ ವೇದಿಕೆಯಿಂದಲೂ ಅದ್ಧೂರಿ ಸ್ವಾಗತ ಕೋರಿದ್ದಾರೆ.