ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ

| Updated By: Rajesh Duggumane

Updated on: Jun 23, 2022 | 2:30 PM

ಭುವಿ ಮೇಕಪ್​ ರೂಂನಲ್ಲಿ ರೆಡಿ ಆಗುತ್ತಾ ನಿಂತಿದ್ದಳು. ಅದೇ ಸಮಯಕ್ಕೆ ವರುಧಿನಿಯ ಎಂಟ್ರಿ ಆಗಿದೆ. ಭುವಿಗೆ ತಿಂಡಿ ತಿನ್ನಿಸುತ್ತೇನೆ ಎನ್ನುವ ನೆಪ ಹೇಳಿ ಅಲ್ಲಿಯೇ ಕೂರಿಸಿಕೊಂಡಳು. ಆ ಸಂದರ್ಭದಲ್ಲಿ ವರುಧಿನಿ ಹಳೆ ರಾಗ ತೆಗೆದಿದ್ದಾಳೆ.

ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
ಭುವಿ-ವರು
Follow us on

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಈಗ ಮದುವೆ ಸಂಭ್ರಮ. ಆದರೆ, ಯಾವುದೇ ಕಾರಣಕ್ಕೂ ಮದುವೆ ಆಗಲು ಬಿಡಲೇಬಾರದು ಎಂದು ಹಠ ಹೊತ್ತವಳು ವರುಧಿನಿ. ಅವಳು ಹರ್ಷ ಹಾಗೂ ಭುವಿ ಮದುವೆ ದಿನವೇ ದೊಡ್ಡ ಹೈಡ್ರಾಮಾ ಮಾಡಿದ್ದಾಳೆ. ಕೈ ಕತ್ತರಿಸಿಕೊಂಡು ಆಸ್ಪತ್ರೆ ಸೇರಿದ್ದಾಳೆ. ಮದುವೆ ಮಂಟಪಕ್ಕೆ ಹೋಗಬೇಕಿದ್ದ ಭುವಿ (Bhuvi), ಈಗ ವರುಧಿನಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದಾಳೆ. ಈ ಕಾರಣದಿಂದ ಹರ್ಷ ಹಾಗೂ ಭುವಿ ಮದುವೆ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಕುತೂಹಲ ಮೂಡಿದೆ. ಹರ್ಷ ಹಾಗೂ ಭುವಿ ವಿವಾಹಕ್ಕೆ ವರುಧಿನಿ ವಿಲನ್ ಆಗುವ ಸೂಚನೆ ಸಿಕ್ಕಿದೆ.

ಭುವಿ ಮೇಕಪ್​ ರೂಂನಲ್ಲಿ ರೆಡಿ ಆಗುತ್ತಾ ನಿಂತಿದ್ದಳು. ಅದೇ ಸಮಯಕ್ಕೆ ವರುಧಿನಿಯ ಎಂಟ್ರಿ ಆಗಿದೆ. ಭುವಿಗೆ ತಿಂಡಿ ತಿನ್ನಿಸುತ್ತೇನೆ ಎನ್ನುವ ನೆಪ ಹೇಳಿ ಅಲ್ಲಿಯೇ ಕೂರಿಸಿಕೊಂಡಳು. ಆ ಸಂದರ್ಭದಲ್ಲಿ ವರುಧಿನಿ ಹಳೆ ರಾಗ ತೆಗೆದಿದ್ದಾಳೆ. ‘ನನಗೆ ನನ್ನ ಹೀರೋನಾ (ಹರ್ಷ) ಬಿಟ್ಟುಕೊಡು. ಹರ್ಷ ಇಲ್ಲದೆ ನಾನು ಬದುಕೋಕೆ ಆಗುವುದಿಲ್ಲ. ನೀವಿಬ್ಬರೂ ಮದುವೆ ಆಗುವುದನ್ನು ನನ್ನ ಕಣ್ಣಿಂದ ನೋಡೋಕೆ ಸಾಧ್ಯವೇ ಇಲ್ಲ. ದಯವಿಟ್ಟು ಅರ್ಥ ಮಾಡಿಕೋ’ ಎಂದು ಕೋರಿದಳು ವರುಧಿನಿ.

ಆದರೆ, ಭುವಿ ಇದಕ್ಕೆ ಕರಗಲಿಲ್ಲ. ಒಂದೇ ಮಾತಲ್ಲಿ ‘ಹರ್ಷನನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ’ ಎಂದಳು. ‘ಮದುವೆ ಅನ್ನೋದು ನಾನು ತೆಗೆದುಕೊಂಡ ನಿರ್ಧಾರ ಅಲ್ಲ. ನಮ್ಮ ಸಂಬಂಧದಲ್ಲಿ ನಾವಿಬ್ಬರೂ ತುಂಬಾನೇ ಮುಂದೆ ಬಂದಿದ್ದೇವೆ. ದಯವಿಟ್ಟು ಅರ್ಥ ಮಾಡಿಕೋ’ ಎಂದು ವರುನನ್ನು ಮನವೊಲಿಸಲು ಪ್ರಯತ್ನಿಸಿದಳು. ಆದರೆ, ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದನ್ನೂ ಓದಿ
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಅಲ್ಲಿಯೇ ಇದ್ದ ಕತ್ತಿಯಿಂದ ವರುಧಿನಿ ಕೈ ಕತ್ತರಿಸಿಕೊಂಡಳು. ಇದರಿಂದ ಒಂದೇ ಸಮನೆ ರಕ್ತ ಸುರಿಯೋಕು ಶುರುವಾಯಿತು. ಆಕೆಯನ್ನು ಹೊತ್ತುಕೊಂಡು ಭುವಿ ಕಾರಿನವರೆಗೆ ಹೋದಳು. ಕಾರಿನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇವರ ಹಿಂದೆ ಹರ್ಷ ಕೂಡ ಓಡಿದ್ದಾನೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

ಮಂಟಪಕ್ಕೆ ಬರಬೇಕಿದ್ದ ಭುವಿ ಈಗ ಆಸ್ಪತ್ರೆಗೆ ಹೋಗಿದ್ದಾಳೆ. ಈ ಬೆಳವಣಿಗೆಯಿಂದ ಮುಂದೇನಾಗುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರದ್ದು. ‘ನಾನಿಲ್ಲದೆ ನೀನು ಮದುವೆ ಆಗಲೇಬಾರದು’ ಎಂದು ಭುವಿಯ ಬಳಿ ವರುಧಿನಿ ಈ ಮೊದಲೇ ಮಾತು ತೆಗೆದುಕೊಂಡಿದ್ದಾಳೆ. ಹೀಗಾಗಿ, ಅವಳು ಆಸ್ಪತ್ರೆಯಿಂದ ಮರಳಿ ಬರುವವರೆಗೆ ಈ ಮದುವೆ ನಡೆಯೋದು ಡೌಟು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.