ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

| Updated By: Rajesh Duggumane

Updated on: Jun 27, 2022 | 3:01 PM

‘ಕನ್ನಡತಿ’ ಧಾರಾವಾಹಿ ಹಿಂದಿಯಲ್ಲಿ ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಡಬ್​ ಆಗಿದೆ. ಈಗಾಗಲೇ ಸುಮಾರು 50 ಎಪಿಸೋಡ್​ಗಳು ಹಿಂದಿಯಲ್ಲಿ ಪ್ರಸಾರ ಕಂಡಿದೆ. ಈ

ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
ಕನ್ನಡತಿ-‘ಭಾಗ್ಯ ದಿಲೆ ತು ಮಲಾ’
Follow us on

ಕಲರ್ಸ್​ ಕನ್ನಡದಲ್ಲಿ (Colors Kannada) ಪ್ರಸಾರ ಆಗುತ್ತಿರುವ ‘ಕನ್ನಡತಿ’ ಧಾರಾವಾಹಿ (Kannadathi Serial) ವಿಶಿಷ್ಟವಾಗಿ ನಿಲ್ಲುತ್ತದೆ. ಕನ್ನಡವನ್ನೇ ಮುಖ್ಯವಾಗಿಟ್ಟುಕೊಂಡು ಆರಂಭವಾದ ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿ ಮದುವೆ ಇನ್ನೇನು ನಡೆಯುವ ಹಂತದಲ್ಲಿದೆ. ಹೀಗಿರುವಾಗಲೇ ವರುಧಿನಿ ಈ ಮದುವೆಯನ್ನು ತಪ್ಪಿಸಲು ಮುಂದಾಗಿದ್ದಾಳೆ. ಕೈ ಕತ್ತರಿಸಿಕೊಳ್ಳುವ ಮೂಲಕ ಆಸ್ಪತ್ರೆ ಸೇರಿದ್ದಾಳೆ. ಇದರಿಂದ ಮದುವೆಯನ್ನು ತಾತ್ಕಾಲಿಕವಾಗಿ ಮುಂದೆ ತಳ್ಳಲಾಗಿದೆ. ಈ ಧಾರಾವಾಹಿ ಹಿಂದಿಗೆ ಡಬ್ ಆಗಿ ಪ್ರಸಾರ ಕಾಣುತ್ತಿದ್ದರೆ, ಮರಾಠಿಗೆ ರಿಮೇಕ್ ಆಗಿದೆ. ಈಗಾಗಲೇ ಅವುಗಳು ಪ್ರಸಾರ ಆರಂಭಿಸಿವೆ.

ಮೊದಲ ಬಾರಿಗೆ ಲಾಕ್​ ಡೌನ್​ ಆರಂಭ ಆದಾಗ ಕಿರುತೆರೆಯಲ್ಲಿ ಡಬ್ಬಿಂಗ್​ ಟ್ರೆಂಡ್​ ಹೆಚ್ಚಿತ್ತು. ಹಿಂದಿಯ ಅನೇಕ ಜನಪ್ರಿಯ ಧಾರಾವಾಹಿಗಳು ಕನ್ನಡಕ್ಕೆ ಡಬ್​ ಆಗಿ ಪ್ರಸಾರವಾದವು. ಅದೇ ರೀತಿ ಕನ್ನಡದಲ್ಲಿ ಒಳ್ಳೆಯ ಹೆಸರು ಮಾಡಿದ ಧಾರಾವಾಹಿಗಳು ಹಿಂದಿಗೆ ಡಬ್ ಆಗುತ್ತಿವೆ. ‘ಕನ್ನಡತಿ’ ಧಾರಾವಾಹಿ ಹಿಂದಿಯಲ್ಲಿ ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಡಬ್​ ಆಗಿದೆ. ಈಗಾಗಲೇ ಸುಮಾರು 50 ಎಪಿಸೋಡ್​ಗಳು ಹಿಂದಿಯಲ್ಲಿ ಪ್ರಸಾರ ಕಂಡಿದೆ. ಈ ಧಾರಾವಾಹಿಗೆ ಹಿಂದಿ ಮಂದಿಯಿಂದ ಮೆಚ್ಚುಗೆ ಕೇಳಿ ಬರುತ್ತಿದೆ.

‘ಕನ್ನಡತಿ’ ಧಾರಾವಾಹಿ ಮರಾಠಿಗೆ ರಿಮೇಕ್ ಆಗಿ ಪ್ರಸಾರ ಕಾಣುತ್ತಿದೆ. ‘ಭಾಗ್ಯ ದಿಲೆ ತು ಮಲಾ’ ಹೆಸರಿನಲ್ಲಿ ಮರಾಠಿಯಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಸುಮಾರು 78 ಎಪಿಸೋಡ್​ಗಳನ್ನು ಪೂರೈಸಿದೆ. ಈ ಧಾರಾವಾಹಿಯನ್ನು ಅಲ್ಲಿನ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

‘ಕನ್ನಡತಿ’ ಧಾರಾವಾಹಿ ಸಾಮಾನ್ಯ ಧಾರಾವಾಹಿಗಿಂತ ಭಿನ್ನವಾಗಿ ನಿಲ್ಲೋಕೆ ಮೂಲ ಕಾರಣ ಕನ್ನಡ. ಧಾರಾವಾಹಿಯ ಕಥಾ ನಾಯಕ ಪಕ್ಕಾ ಮಾಡರ್ನ್​ ಹುಡುಗ. ಆತನಿಗೆ ಕನ್ನಡದ ಬಗ್ಗೆ ಅಷ್ಟಾಗಿ ಜ್ಞಾನ ಇರುವುದಿಲ್ಲ. ಕಥಾ ನಾಯಕಿಗೆ ಕನ್ನಡ ಎಂದರೆ ಪಂಚಪ್ರಾಣ. ಪಕ್ಕಾ ಸಂಪ್ರದಾಯಸ್ತ ಹುಡುಗಿ. ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇವರ ಪ್ರೀತಿ ಕಥೆಯಲ್ಲಿ ಕನ್ನಡ ಭಾಷೆಯ ಬಗ್ಗೆಯೂ ಜನರಿಗೆ ಪ್ರೀತಿ ಮೂಡುವಂತೆ ಮಾಡಿರೋದು ವಿಶೇಷ.

‘ಕನ್ನಡತಿ’ ಧಾರಾವಾಹಿ ಈಗಾಗಲೇ 643 ಎಪಿಸೋಡ್​ಗಳನ್ನು ಪೂರೈಸಿದೆ. ಶೀಘ್ರವೇ ಧಾರಾವಾಹಿ 700ನೇ ಎಪಿಸೋಡ್​ಗೆ ಕಾಲಿಡಲಿದೆ. ಈ ಮೂಲಕ ಹೊಸ ಮೈಲಿಗಲ್ಲು ದಾಟಲಿದೆ.

ಇದನ್ನೂ ಓದಿ: ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ

ಸಖತ್​ ಬೋಲ್ಡ್​ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ಸಾರಾ ಅಣ್ಣಯ್ಯ

Published On - 2:44 pm, Mon, 27 June 22