1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು, ‘ಕೆಜಿಎಫ್​’ ಏನೂ ಹೊಸದಲ್ಲ ಎಂದ ಕಮಲ್ ಹಾಸನ್

| Updated By: Rajesh Duggumane

Updated on: May 26, 2022 | 10:05 PM

‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿಕಮಲ್ ಹಾಸನ್ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಹಲವು ವಿಚಾರಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ.  

1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು, ‘ಕೆಜಿಎಫ್​’ ಏನೂ ಹೊಸದಲ್ಲ ಎಂದ ಕಮಲ್ ಹಾಸನ್
ಕಮಲ್ ಹಾಸನ್-ಯಶ್
Follow us on

ಸದ್ಯ ಪ್ಯಾನ್ ಇಂಡಿಯಾ ಸಿನಿಮಾ (Pan India Movie) ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಕಾನ್ಸೆಪ್ಟ್​ನಿಂದಾಗಿ ಸಿನಿಮಾ ಇಂಡಸ್ಟ್ರಿಯ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ. ಹಲವು ದೊಡ್ಡ ಬಜೆಟ್ ಚಿತ್ರಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಲಾಭದಾಯಕವಾಗಿದೆ. ಬೇರೆ ಭಾಷೆಯವರಿಗೆ ನಮ್ಮ ಚಿತ್ರರಂಗದ ಪರಿಚಯವಾಗುತ್ತದೆ. ‘ಬಾಹುಬಲಿ’ ತೆರೆಕಂಡ (Bahubali Movie) ನಂತರದಲ್ಲಿ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, ಆ ಮೊದಲೇ ಈ ರೀತಿಯ ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಕಮಲ್ ಹಾಸನ್ (Kamal Haasan) ಮಾತನಾಡಿದ್ದಾರೆ. ‘ಕೆಜಿಎಫ್​’ ಹಾಗೂ ‘ಆರ್​ಆರ್​ಆರ್​’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದಿದ್ದಾರೆ ಅವರು.

ಕಮಲ್ ಹಾಸನ್ ಅವರು ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ, ‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಹಲವು ವಿಚಾರಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ.

‘ಪ್ಯಾನ್​ ಇಂಡಿಯಾ ಎಂಬ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ವಿ. ಶಾಂತಾರಾಮ್​ ಅವರು ಪ್ಯಾನ್​ ಇಂಡಿಯಾ ಸಿನಿಮಾ ಮಾಡಿದ್ದರು. 1960ರ ‘ಮುಘಲ್​-ಇ-ಅಜಾಮ್​’ ಹಾಗೂ 1965ರ ‘ಚೆಮ್ಮೀನ್​’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ‘ಆರ್​ಆರ್​ಆರ್​’, ‘ಕೆಜಿಎಫ್​’ ಮಾಡಿರುವುದು ಹೊಸತಲ್ಲ. ನಾವು ಬೇರೆಬೇರೆ ಭಾಷೆಗಳನ್ನು ಮಾತನಾಡುತ್ತೇವೆ. ಆದರೆ, ದೇಶಮಟ್ಟದಲ್ಲಿ ನಾವೆಲ್ಲರೂ ಒಂದು’ ಎಂದಿದ್ದಾರೆ ಕಮಲ್ ಹಾಸನ್.

ಇದನ್ನೂ ಓದಿ
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು?
ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ
ಕಮಲ್ ಹಾಸನ್ ಈಗ ಎಲ್ಲಿದ್ದಾರೆ?; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾದ ವೈರಲ್ ಫೋಟೋದ ಅಸಲಿಯತ್ತೇನು?
Kamal Haasan: ನಟ ಕಮಲ್ ಹಾಸನ್ ಎನ್​ಎಫ್​ಟಿ ಪ್ರವೇಶಕ್ಕೆ ಸಿದ್ಧತೆ; ಏನಿದು ನಾನ್​ ಫಂಗಬಲ್​ ಟೋಕನ್?

ಇದನ್ನೂ ಓದಿ: ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು?

‘ಕೆಜಿಎಫ್ 2’ ಹಾಗೂ ‘ಆರ್​ಆರ್​ಆರ್​’ ಸಿನಿಮಾ ಕಲೆಕ್ಷನ್​ 1000 ಕೋಟಿ ರೂಪಾಯಿ ದಾಟಿದೆ. ಇದಾದ ಬೆನ್ನಲ್ಲೇ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಕಮಲ್ ಹಾಸನ್ ಉತ್ತರಿಸಿದ್ದಾರೆ. ‘ನಾನು ಭಾರತೀಯ. ನೀವು ಯಾರು? ಮಧುರೈ ದೇವಸ್ಥಾನಕ್ಕೆ ನೀವು ತೆರಳಬಹುದು. ನಾನು ಕಾಶ್ಮೀರಕ್ಕೆ ಹೋಗಬಹುದು’ ಎಂದು ಹೇಳುವ ಮೂಲಕ ಈ ಚರ್ಚೆಗೆ ಬ್ರೇಕ್ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.