ಹೊಸ ಕ್ಷಿಪಣಿ ಉಡಾಯಿಸಿದ ಇರಾನ್: ಆದ್ರೆ ಕಕ್ಷೆ ತಲುಪದ ಮಿಸೈಲ್

|

Updated on: Feb 10, 2020 | 8:03 AM

ಅಮೆರಿಕ ಜೊತೆಗಿನ ಯುದ್ಧ ಭೀತಿಯಿಂದ ಇರಾನ್ ಮತ್ತಷ್ಟು ಶಸ್ತ್ರಾಸ್ತ್ರಗಳನ್ನ ಸಂಗ್ರಹ ಮಾಡುತ್ತಿದೆ. ಇದೀಗ ಇರಾನ್ ಹೊಸ ಮಿಸೈಲ್ ಪರೀಕ್ಷೆ ನಡೆಸಿದೆ. ವಿಶ್ವದ ದೊಡ್ಡಣ್ಣನಿಗೆ ಪರೋಕ್ಷವಾಗಿ ಈ ಮೂಲಕ ವಾರ್ನಿಂಗ್ ನೀಡಲು ಇರಾನ್ ಮುಂದಾಗಿತ್ತು. ಖುದ್ದು ಇರಾನ್ ಸೇನಾ ಮುಖ್ಯಸ್ಥರು ಕ್ಷಿಪಣಿ ಪರೀಕ್ಷೆ ಸಂದರ್ಭದಲ್ಲಿ ಹಾಜರಿದ್ದರು. ಆದ್ರೆ, ಕ್ಷಿಪಣಿ ಕಕ್ಷೆ ತಲುಪಲು ವಿಫಲವಾಗಿದೆ. ಇದರಿಂದ ಇರಾನ್​ಗೆ ಮತ್ತೆ ಹಿನ್ನಡೆಯಾಗಿದೆ. ಡ್ರ್ಯಾಗನ್ ನಾಡಿಗೆ ಭಾರತದ ಸಾಂತ್ವನ: ಕೊರೊನಾ ವೈರಸ್ ದಾಳಿಯಿಂದ ಬೆಚ್ಚಿಬಿದ್ದಿರುವ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. […]

ಹೊಸ ಕ್ಷಿಪಣಿ ಉಡಾಯಿಸಿದ ಇರಾನ್: ಆದ್ರೆ ಕಕ್ಷೆ ತಲುಪದ ಮಿಸೈಲ್
ಸಾಂದರ್ಭಿಕ ಚಿತ್ರ
Follow us on

ಅಮೆರಿಕ ಜೊತೆಗಿನ ಯುದ್ಧ ಭೀತಿಯಿಂದ ಇರಾನ್ ಮತ್ತಷ್ಟು ಶಸ್ತ್ರಾಸ್ತ್ರಗಳನ್ನ ಸಂಗ್ರಹ ಮಾಡುತ್ತಿದೆ. ಇದೀಗ ಇರಾನ್ ಹೊಸ ಮಿಸೈಲ್ ಪರೀಕ್ಷೆ ನಡೆಸಿದೆ. ವಿಶ್ವದ ದೊಡ್ಡಣ್ಣನಿಗೆ ಪರೋಕ್ಷವಾಗಿ ಈ ಮೂಲಕ ವಾರ್ನಿಂಗ್ ನೀಡಲು ಇರಾನ್ ಮುಂದಾಗಿತ್ತು. ಖುದ್ದು ಇರಾನ್ ಸೇನಾ ಮುಖ್ಯಸ್ಥರು ಕ್ಷಿಪಣಿ ಪರೀಕ್ಷೆ ಸಂದರ್ಭದಲ್ಲಿ ಹಾಜರಿದ್ದರು. ಆದ್ರೆ, ಕ್ಷಿಪಣಿ ಕಕ್ಷೆ ತಲುಪಲು ವಿಫಲವಾಗಿದೆ. ಇದರಿಂದ ಇರಾನ್​ಗೆ ಮತ್ತೆ ಹಿನ್ನಡೆಯಾಗಿದೆ.

ಡ್ರ್ಯಾಗನ್ ನಾಡಿಗೆ ಭಾರತದ ಸಾಂತ್ವನ:
ಕೊರೊನಾ ವೈರಸ್ ದಾಳಿಯಿಂದ ಬೆಚ್ಚಿಬಿದ್ದಿರುವ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. ಪಿಎಂ ಮೋದಿ ಚೀನಾ ಅಧ್ಯಕ್ಷ ಜಿನ್​ಪಿಂಗ್​ಗೆ ಪತ್ರ ಬರೆದಿದ್ದು, ನೆರವಿನ ಭರವಸೆ ನೀಡಿದ್ದಾರೆ. ಹಾಗೇ ‘ಕೊರೊನಾ’ ವೈರಸ್ ವಿರುದ್ಧ ಹೋರಾಟಡಲು ಆತ್ಮಸ್ಥೈರ್ಯ ತುಂಬಿದ್ದಾರೆ.

‘ಕೊರೊನಾ’ ಸೋಂಕಿಗೆ 902 ಬಲಿ:
ಮತ್ತೊಂದ್ಕಡೆ ಚೀನಾದಲ್ಲಿ ಮಹಾಮಾರಿ ‘ಕೊರೊನಾ’ಗೆ ಬಲಿಯಾದವರ ಸಂಖ್ಯೆ ಸಾವಿರದ ಸಮೀಪ ತಲುಪಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನ ಚೀನಾ ಸರ್ಕಾರ ಕೈಗೊಂಡಿದ್ದು, ಸುಮಾರು 40,000 ಜನರಿಗೆ ಕೊರೊನಾ ವೈರಾಣು ಹಬ್ಬಿದೆ. ಅಧಿಕೃತ ಮಾಹಿತಿಗಳ ಪ್ರಕಾರ ಇಲ್ಲಿಯವರೆಗೂ 902 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ನೀರಿಗಾಗಿ ಪರದಾಡುತ್ತಿರುವ ಜನ:
ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನಿಂದ ಎಲ್ಲವೂ ನಾಶವಾಗಿದ್ದು, ನೀರಿನ ಮೂಲಗಳು ಬರಿದಾಗಿವೆ. ಈ ಹಿನ್ನೆಲೆಯಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು, ಇದನ್ನ ನಿಭಾಯಿಸಲು ಆಸಿಸ್​ನ ಸ್ಮಾರ್ಟ್ ಹೋಂಗಳು ಮಳೆಕೊಯ್ಲು ಪದ್ಧತಿ ಅಳವಡಿಕೆ ಮಾಡಿಕೊಳ್ಳುತ್ತಿವೆ. ಈ ಮೂಲಕ ಬರದ ವಿರುದ್ಧ ಹೋರಾಡಲು ಕಾಂಗಾರೂ ನಾಡಿನ ಜನ ಸಿದ್ಧವಾಗಿದ್ದಾರೆ.

Published On - 8:02 am, Mon, 10 February 20